Site icon Vistara News

‌Self Harming : ಗದಗದ ಜನಪ್ರಿಯ ವೈದ್ಯ ಆತ್ಮಹತ್ಯೆ; ಡೆತ್‌ ನೋಟ್‌ನಲ್ಲಿ ಕಾಂಗ್ರೆಸ್‌ ನಾಯಕನ ಹೆಸರು

Self Harming

ಗದಗ: ಗದಗ ಜಿಲ್ಲೆಯ (Gadag News) ರೋಣ ತಾಲೂಕಿನ ಹಿರೇಹಾಳ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡರಾಗಿರುವ ಜನಪ್ರಿಯ ವೈದ್ಯ ಶಶಿಧರ್ ಹಟ್ಟಿ (Congress leader ends life) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಲುಂಗಿಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ (Self Harming) ಮಾಡಿಕೊಂಡಿರುವ ಅವರು ಡೆತ್ ನೋಟ್ ಬರೆದಿಟ್ಟಿದ್ದಾರೆ. ಅದರಲ್ಲಿ ಕಾಂಗ್ರೆಸ್‌ ನಾಯಕರೊಬ್ಬರ ಹೆಸರು (Congress leaders name in Death note) ಇರುವುದು ವಿಶೇಷವಾಗಿದೆ.

ತನ್ನ ಆತ್ಮಹತ್ಯೆಗೆ ಮರಳು ದಂಧೆಕೋರ, ಕಾಂಗ್ರೆಸ್ ಮುಖಂಡ ಶರಣಗೌಡ ಪಾಟೀಲ್ ಕಾರಣ ಎಂದು ಶಶಿಧರ ಹಟ್ಟಿ ಬರೆದಿಟ್ಟಿದ್ದಾರೆ.

ನಿಜವೆಂದರೆ ಶಶಿಧರ ಹಟ್ಟಿ, ಶರಣಗೌಡ ಪಾಟೀಲ್‌ ಸೇರಿದಂತೆ ಮೂವರು ಮರಳು ದಂಧೆಯಲ್ಲಿ ಭಾಗಿದಾರರು. ಆದರೆ, ಶಶಿಧರ ಹಟ್ಟಿ ಅವರು ಎಲ್ಲಾ ಲೆಕ್ಕವನ್ನು ಸರಿಯಾಗಿ ಕೊಟ್ಟರೂ ಪದೇಪದೆ ಶರಣಗೌಡ ಕಿರುಕುಳ ನೀಡುತ್ತಿದ್ದರು. ಹೀಗಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ.

ತನ್ನ ಆತ್ಮಹತ್ಯೆಗೆ ಕಾರಣವಾಗಿರುವ ಶರಣ ಗೌಡ ಅವರಿಗೆ ಶಿಕ್ಷೆ ಕೊಡಿಸಬೇಕು, ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ್‌ರಿಗೆ ಈ ವಿಷಯ ತಿಳಿಸಿ ಎಂದು ಮನವಿ ಮಾಡಲಾಗಿದೆ. ಸೋಮವಾರ ರಾತ್ರಿ ಆತ್ಮಹತ್ಯೆ ಘಟನೆ ನಡೆದಿದೆ. ಸ್ಥಳಕ್ಕೆ ರೋಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ : Self Harming : ಗಂಡನ ಅಕ್ರಮ ಸಂಬಂಧಕ್ಕೆ ಬೇಸತ್ತು 1 ವರ್ಷದ ಪುಟ್ಟ ಮಗುವಿನ ತಾಯಿ ಆತ್ಮಹತ್ಯೆ

ದೇವಸ್ಥಾನದಲ್ಲಿ ಕಳ್ಳತನ: ಮೂವರಿಗೆ ಗ್ರಾಮಸ್ಥರ ಧರ್ಮದೇಟು

ರಾಯಚೂರು: ದೇವಸ್ಥಾನಗಳಲ್ಲಿ ಕಳ್ಳತನ ಮಾಡಿದ ಮೂವರಿಗೆ ಗ್ರಾಮಸ್ಥರಿಂದ ಧರ್ಮದೇಟು ಬಿದ್ದಿದೆ. ವಸ್ಥಾನದಲ್ಲಿ ಆಭರಣ ಕದ್ದು‌ ಪರಾರಿಯಾಗುತ್ತಿದ್ದ ವೇಳೆ ಸಿಕ್ಕಿಬಿದ್ದ ಕಳ್ಳರನ್ನು ಗ್ರಾಮಸ್ಥರು ಕಂಬಕ್ಕೆ‌ ಕಟ್ಟಿ ಥಳಿಸಿದ್ದಾರೆ. ದೇವದುರ್ಗ ತಾಲ್ಲೂಕಿನ ನಾಗೋಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಗ್ರಾಮದ‌ ದ್ಯಾಮವ್ವದೇವಿ, ಬೀರಲಿಂಗೇಶ್ವರ, ಮತ್ತು ಬಸವೇಶ್ವರ ದೇವಸ್ಥಾನದಲ್ಲಿ ಕಳ್ಳತನ ನಡೆದಿದ್ದು, ಇವರು ಕಳವು ನಡೆಸಿ ಹೋಗುವಾಗ ‌ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾರೆ. ಶರಣಬಸವ (34) ವೀರಸ್ವಾಮಿ (30) ಮತ್ತು ಹುಸೇನಿ (35) ಎಂಬವರೇ ಕಳವು ಮಾಡಿದವರು. ಇವರಲ್ಲಿ ಕಿಂಗ್‌ ಪಿನ್‌ ಆಗಿರುವ ಹುಸೇನಿಯನ್ನು ಗ್ರಾಮಸ್ಥರು ಚೆನ್ನಾಗಿ ಥಳಿಸಿದ್ದಾರೆ.

ಬಂಧಿತ ಮೂವರು ಮಾನ್ವಿ ತಾಲ್ಲೂಕಿನ ಕಪಗಲ್ ಗ್ರಾಮದವರು. ದ್ಯಾಮವ್ವ ದೇವಿಯ 4 ಲಕ್ಷ ಮೊತ್ತದ ಚಿನ್ನದ ತಾಳಿ, ಹಾಗೂ 5 ಲಕ್ಷ ಬೆಲೆಯ ಬೆಳ್ಳಿ ಆಭರಣಗಳನ್ನು ಅವರಿಂದ ಮರಳಿ ವಶಕ್ಕೆ ಪಡೆಯಲಾಗಿದೆ. ದೇವದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version