Site icon Vistara News

Shakti Scheme Effect : ಬಸ್‌ನೊಳಗೆ ಜಾಗವಿಲ್ಲದೆ ಪುಟ್ಟ ಕಂದನ ಕೈಯಲ್ಲಿ ಹಿಡಿದು ಬಾಗಿಲಲ್ಲೇ ಕುಳಿತು ಪ್ರಯಾಣಿಸಿದ ಮಹಿಳೆ

Woman traveillin in bus

ಗದಗ: ರಾಜ್ಯದಲ್ಲಿ ಜಾರಿಯಾದ ಶಕ್ತಿ ಯೋಜನೆಯಿಂದ (Shakti Scheme Effect) ಮಹಿಳೆಯರು ಎಲ್ಲಿ ಬೇಕೆಂದರಲ್ಲಿ ಸರ್ಕಾರಿ ಬಸ್‌ನಲ್ಲಿ ಉಚಿತವಾಗಿ (Free Bus service) ಪ್ರಯಾಣಿಸುವ ಅವಕಾಶ ಸಿಕ್ಕಿದೆ. ಇದರಿಂದ ಮಹಿಳೆಯರ ಒಂದು ವರ್ಗ ಖುಷಿಯಾಗಿಬಹುದು. ಆದರೆ, ಉಚಿತ ಪ್ರಯಾಣದಿಂದ ಉಂಟಾಗಿರುವ ಜನದಟ್ಟಣೆಯಿಂದಾಗಿ ಆಗುತ್ತಿರುವ ಸಮಸ್ಯೆಗಳಿಂದಾಗಿ ಸಮಾಜದ ಇನ್ನೊಂದು ವರ್ಗ ಸಂಕಷ್ಟಕ್ಕೆ ಗುರಿಯಾಗಿದೆ ಎನ್ನುವ ಚರ್ಚೆಗಳೂ ಇವೆ. ಗದಗದಲ್ಲಿ ನಡೆದ ಒಂದು ಘಟನೆ ಈ ಮಾತಿಗೆ ಸ್ವಲ್ಪ ಮಟ್ಟಿಗೆ ಪುಷ್ಟಿಯನ್ನು ನೀಡುತ್ತದೆ.

ಗದಗ ನಗರದಿಂದ (Gadag News) ಜಿಲ್ಲಾಸ್ಪತ್ರೆಗೆ ಹೋಗುತ್ತಿದ್ದ ಮಹಿಳೆಯೊಬ್ಬರು ಬಸ್ಸಿನೊಳಗೆ ಹೋಗಲು ಜಾಗವಿಲ್ಲದೆ ಮಗು ಹೊತ್ತುಕೊಂಡು ಬಾಗಿಲಲ್ಲೇ ಕುಳಿತು ಪ್ರಯಾಣ (Woman sitting on the step of the bus) ಮಾಡಿದ ವಿದ್ಯಮಾನ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಮಹಿಳೆ ಸುಮಾರು ಒಂದು ವರ್ಷದ ಮಗುವನ್ನು (Woman holding child on hand) ಹಿಡಿದುಕೊಂಡು ಜಿಲ್ಲಾಸ್ಪತ್ರೆಗೆ ಹೊರಟಿದ್ದರು. ಆದರೆ, ಅವರಿಗೆ ಬಸ್ಸಿನೊಳಗೆ ಹೋಗಲು ಯಾರೂ ಅವಕಾಶ ಮಾಡಿಕೊಡಲೇ ಇಲ್ಲ.

ಹೀಗಾಗಿ ಏನೂ ಮಾಡಲು ಅಸಹಾಯಕರಾದ ಈ ಮಹಿಳೆ ಮಗುವನ್ನು ಕೈಯಲ್ಲಿ ಹಿಡಿದುಕೊಂಡು ಬಸ್ಸಿನ ಬಾಗಿಲಿನ ಮೆಟ್ಟಿಲಲ್ಲೇ ಕುಳಿತು ಪ್ರಯಾಣ ಮಾಡಬೇಕಾಯಿತು.

ಬಸ್‌ ಫುಲ್‌ ರಶ್‌ ಇದ್ದ ಕಾರಣ ಅವರಿಗೆ ಒಳಗೆ ಹೋಗಲು ಸಾಧ್ಯವಾಗಲಿಲ್ಲ. ಸಣ್ಣ ಮಗು ಕೈಯಲ್ಲಿದೆ ಎಂಬ ಕಾರಣಕ್ಕಾದರೂ ಯಾರೂ ಆಕೆಯನ್ನು ಒಳಗೆ ಬಿಟ್ಟುಕೊಳ್ಳಲಿಲ್ಲ. ಸೀಟಿನಲ್ಲಿ ಕುಳಿತವರು ತಮ್ಮ ಜಾಗವನ್ನು ಬಿಟ್ಟುಕೊಡುವ ಸಂವೇದನೆಯನ್ನು ಪ್ರದರ್ಶಿಸಲಿಲ್ಲ. ಎಲ್ಲರೂ ತಮಗೂ ಇದಕ್ಕೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸಿದ್ದರ ಫಲವಾಗಿ ಮಹಿಳೆ ತನ್ನ ಮಗುವನ್ನು ಹಿಡಿದುಕೊಂಡು ಅಲ್ಲೇ ಕುಳಿತುಕೊಳ್ಳಬೇಕಾಯಿತು.

ಈ ಮಹಿಳೆಯ ಕೈಯಲ್ಲಿದ್ದ ಮಗು ಕೂಡಾ ನಿದ್ರೆ ಮಾಡಿತ್ತು. ನಿದ್ದೆ ಮಾಡಿದ ಮಗುವನ್ನು ಸಂಭಾಳಿಸಿಕೊಂಡು ಹಿಡಿದುಕೊಳ್ಳುವುದು ಕೂಡಾ ಸ್ವಲ್ಪ ಕಷ್ಟವೇ. ಅದನ್ನೂ ಅಲ್ಲಿದ್ದವರು ಅರ್ಥ ಮಾಡಿಕೊಳ್ಳಲಿಲ್ಲ. ಇದನ್ನೆಲ್ಲ ಗಮನಿಸಬೇಕಾಗಿದ್ದ ಚಾಲಕ, ನಿರ್ವಾಹಕರು ಕೂಡಾ ತಮಗೆ ಯಾವುದೇ ಸಂಬಂಧವಿಲ್ಲ ಎಂಬಂತೆ ನಡೆದುಕೊಂಡಂತೆ ಕಾಣುತ್ತಿದೆ.

ಮಗುವನ್ನು ಕೈಯಲ್ಲಿ ಹಿಡಿದುಕೊಂಡು ಒಬ್ಬ ತಾಯಿ ಮೆಟ್ಟಿಲ ಮೇಲೆ ಕುಳಿತು ಪ್ರಯಾಣಿಸುವುದು ತುಂಬ ಅಪಾಯಕಾರಿ. ಸ್ವಲ್ಪ ಯಾಮಾರಿದರೂ, ನಿಯಂತ್ರಣ ತಪ್ಪಿದರೂ ಕೈಯಲ್ಲಿದ್ದ ಮಗು ಜಾರಬಹುದು, ಅಥವಾ ಮಹಿಳೆಯೇ ಜಾರಿ ಬೀಳುವ ಅಪಾಯ ಇದ್ದೇ ಇರುತ್ತದೆ.

ಈ ಹಿಂದೆ ಇದೇ ರೀತಿ ಕೊಪ್ಪಳದಲ್ಲಿ ಮಹಿಳೆಯೊಬ್ಬರು ಮಗುವನ್ನು ಹಿಡಿದುಕೊಂಡು ಬಾಗಿಲಲ್ಲೆ ಕುಳಿತು ಸಾಗಿದ ಘಟನೆ ನಡೆದಿತ್ತು. ಆಗ ಸಾರ್ವಜನಿಕವಾಗಿ ಕರುಣೆಯ ಮಾತುಗಳು ಕೇಳಿಬಂದಿದ್ದವು. ಆದರೆ ಈ ಕರುಣೆಯ ಮಾತುಗಳೆಲ್ಲ ಬೇರೆಯವರಿಗೆ ಹೇಳುವುದಕ್ಕೆ ಹೊರತು ತಮಗೆ ಪಾಲಿಸುವುದಕ್ಕಲ್ಲ ಎನ್ನುವುದು ಕೂಡಾ ಪ್ರೂವ್‌ ಆಗುತ್ತಲೇ ಇದೆ.

ಈ ಹಿಂದೆ ಕೊಪ್ಪಳದಲ್ಲಿ ಮಹಿಳೆಯೊಬ್ಬರು ಒಳಗೆ ಸೀಟು ಸಿಗದೆ ಕಂದಮ್ಮನನ್ನು ಹಿಡಿದು ಬಾಗಿಲಲ್ಲೇ ಕುಳಿತ ದೃಶ್ಯ

ಪೂರ್ಣ ವರದಿಗೆ : Humanity Missing : ಯಾರೂ ಸೀಟು ಬಿಡಲಿಲ್ಲ; ಪುಟ್ಟ ಮಗುವನ್ನು ಕೈಲಿ ಹಿಡಿದು ಬಸ್ಸಿನ ಡೋರಲ್ಲೇ ಕುಳಿತ ಮಹಿಳೆ

ಈಗಾಗಲೇ ಗದಗನಲ್ಲಿ ಬಸ್ ನಿಂದ‌ ಇಳಿಯಲು ಹೋಗಿ ಒಬ್ಬ ಮಹಿಳೆ ಸಾವು ಕಂಡಿದ್ದಾರೆ. ಇಷ್ಟಾದರೂ ಜನರಾಗಲೀ, ಸಿಬ್ಬಂದಿಯಾಗಲೀ ಬುದ್ಧಿ ಕಲಿತಂತೆ ಕಾಣುತ್ತಿಲ್ಲ.

Exit mobile version