ಗದಗ: ನರಗುಂದ ತಾಲೂಕಿನ ಕುರ್ಲಗೇರಿ ಗ್ರಾಮದ ಸುತ್ತಲೂ ಇರುವ ಬಣವೆಗಳು ಜಲಾವೃತ ಆಗಿವೆ. ಬೆಣ್ಣೆ ಹಳ್ಳ ದ ನೀರು ಮೈದುಂಬಿ ಹರಿಯುತ್ತ, ಕುರ್ಲಗೇರಿ ಗ್ರಾಮವನ್ನು ಸುತ್ತುವರೆದಿದೆ.
ಈ ದೃಶ್ಯ ನೋಡಲು ಮನೋಹರವಾಗಿದೆ. ಆದರೆ ಇದರಿಂದ ಜಾನುವಾರುಗಳಿಗೆ ಸಂಗ್ರಹ ಮಾಡಿದ ಬಣವೆಗಳು ಹಾನಿಗೊಳಗಾಗಿವೆ. ನರಗುಂದದಿಂದ ಕುರ್ಲಗೇರಿ ಮಾರ್ಗದ ಎಲ್ಲಾ ಸಂಪರ್ಕಗಳು ಸ್ಥಗಿತವಾಗಿವೆ. ಕುರ್ಲಗೇರಿ ಗ್ರಾಮದ ಬಳಿರುವ ಬೆಣ್ಣೆ ಹಳ್ಳದ ಸೇತುವೆ ಸಂಪೂರ್ಣ ಜಲಾವೃತವಾಗಿದೆ. ಬೆಣ್ಣೆಹಳ್ಳದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಣೆ ಆಗಿದೆ.
ಇದನ್ನೂ ಓದಿ| ರಾಜ್ಯದೆಲ್ಲೆಡೆ ಧಾರಾಕಾರ ಮಳೆ: ಮನೆಗೆ ನುಗ್ಗಿದ ನೀರು, ಶಾಲೆ ಗೋಡೆ ಕುಸಿತ, ತುಂಬಿದ ಜಲಾಶಯ