Site icon Vistara News

Theft Case: ಒಂಟಿ ಮಹಿಳೆ ಇದ್ದ ಮನೆಗೆ ನುಗ್ಗಿದ ಕಳ್ಳರು; 305 ಗ್ರಾಂ ಬಂಗಾರ ಲೂಟಿ

Theft case

ಗದಗ: ಒಂಟಿಯಾಗಿ ವಾಸಿಸುತ್ತಿದ್ದ ಮಹಿಳೆಯೊಬ್ಬರ ಮನೆಗೆ ಕಳ್ಳರು ನುಗ್ಗಿ ಮನೆಯಲ್ಲಿದ್ದ ಅಪಾರ ಪ್ರಮಾಣದ ಬಂಗಾರವನ್ನು (Theft Case) ಹೊತ್ತೊಯ್ದಿದ್ದಾರೆ. ಗದಗನ ಕೇಶವ ನಗರದ 3ನೇ ಕ್ರಾಸ್‌ನಲ್ಲಿರುವ ಮನೆಯಲ್ಲಿ (Theft in Gadaga town) ಈ ಘಟನೆ ನಡೆದಿದೆ.

ಪ್ರೇಮಾ ಪರ್ವತ ಗೌಡ (Theft at house of single woman) ಎಂಬವರ ಮನೆಗೆ ನುಗ್ಗಿದ ಕಳ್ಳರು 12.6 ಲಕ್ಷ ರೂ ಮೌಲ್ಯದ, 305 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ಖದೀಮರು ಎಗರಿಸಿಕೊಂಡು ಹೋಗಿದ್ದಾರೆ.‌ ಹಿತ್ತಲ ಬಾಗಿಲಿಗೆ‌ ಒಳಭಾಗದಲ್ಲಿ ಬೀಗ ಹಾಕಲಾಗಿತ್ತು. ಬೀಗ ಹಾಕಿದ ಕೀಯನ್ನು ಪಕ್ಕದ ಕಿಟಕಿಯಲ್ಲಿ ಇಡಲಾಗಿತ್ತು.‌ ಇದೇ ಕೀ ಮೂಲಕ ಮಧ್ಯರಾತ್ರಿ ಹಿತ್ತಲ ಬಾಗಿಲು‌ ತೆಗೆದು ರಾಜಾರೋಷವಾಗಿ ಕಳ್ಳರು ಮನೆಯೊಳಗೆ ಎಂಟ್ರಿ‌ ಕೊಟ್ಟಿದ್ದಾರೆ.

‌ಪ್ರೇಮಾ ಪರ್ವತ ಗೌಡ ಅವರು ಒಂದು ಕೋಣೆಯಲ್ಲಿ ಮಲಗಿದ್ದರೆ ಈ ಕಳ್ಳರು ಇಡೀ ಮನೆಯನ್ನು ಜಾಲಾಡಿದ್ದಾರೆ. ಹಾಲ್‌ನಲ್ಲಿದ್ದ ಡ್ರಾಗಳನ್ನು ಹುಡುಕಿ ಅದರಲ್ಲಿರುವ ಕೀಗಳನ್ನು ಬಳಸಿ ನೋಡಿ ಮತ್ತೊಂದು ರೂಮಿನಲ್ಲಿದ್ದ ಕಪಾಟನ್ನು ಸಲೀಸಾಗಿ ತೆರೆದಿದ್ದಾರೆ. ಯಾವುದೇ ಸದ್ದು ಬಾರದಂತೆ ಚಾಕಚಕ್ಯತೆಯಿಂದ ಕಪಾಟು, ತಿಜೋರಿ ತೆರೆದು ಅದರಲ್ಲಿದ್ದ ಚಿನ್ನಾಭರಣಗಳನ್ನು ಹೊತ್ತೊಯ್ದಿದ್ದಾರೆ.

ಈ ಕುರಿತು ಗದಗನ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಖದೀಮರಿಗೆ ಖಾಕಿ ಬಲೆ ಬೀಸಿದೆ. ಇದೊಂದು ಪರಿಚಿತರ ಕೃತ್ಯವಿರಬೇಕು ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ. ಪ್ರೇಮಾ ಅವರು ಹಿತ್ತಲ ಬಾಗಿಲ ಕೀಯನ್ನು ಕಿಟಕಿಯಲ್ಲಿ ಇಡುತ್ತಾರೆ. ಅದರ ಮೂಲಕ ಹೊರಗಿನಿಂದಲೂ ಬಾಗಿಲು ತೆರೆಯಬಹುದು ಎನ್ನುವುದು ಕಳ್ಳರಿಗೆ ಮೊದಲೇ ತಿಳಿದಂತಿದೆ.

ಅದರ ಜತೆಗೆ ಪ್ರೇಮಾ ಅವರು ಎಲ್ಲಿ ಮಲಗುತ್ತಾರೆ, ಅವರು ಕೀಗಳನ್ನು ಎಲ್ಲಿಡುತ್ತಾರೆ, ಚಿನ್ನಾಭರಣಗಳು ಯಾವ ರೂಮಿನಲ್ಲಿರುತ್ತವೆ ಎನ್ನುವುದು ಕೂಡಾ ಕಳ್ಳರಿಗೆ ಮೊದಲೇ ತಿಳಿದಂತಿದೆ. ಹೀಗಾಗಿ ಅತ್ಯಂತ ಚಾಕಚಕ್ಯತೆಯಿಂದ ಕೆಲಸ ಮುಗಿಸಿದ್ದಾರೆ. ಪ್ರೇಮಾ ಅವರಿಗೆ ಬೆಳಗ್ಗೆ ಎದ್ದ ಮೇಲಷ್ಟೇ ಮನೆಯಲ್ಲಿ ಕಳ್ಳತನವಾಗಿರುವ ವಿಚಾರ ಬೆಳಕಿಗೆ ಬಂದಿದೆ. ಪೊಲೀಸರು ಈಗ ಕೆಲವರ ಮೇಲೆ ಕಣ್ಣಿಟ್ಟು ವಿಚಾರಣೆ ನಡೆಸುತ್ತಿದ್ದಾರೆ.

ಒಂಟಿಯಾಗಿ ಇರುವವರು ಎಚ್ಚರ ವಹಿಸಿ

ಮನೆಗಳಲ್ಲಿ ಒಂಟಿಯಾಗಿ ವಾಸ ಮಾಡುವವರು ತಮ್ಮ ಸುರಕ್ಷತೆ ಮತ್ತು ಚಿನ್ನಾಭರಣ, ಹಣದ ವಿಚಾರದಲ್ಲಿ ವಿಶೇಷವಾಗಿ ಎಚ್ಚರಿಕೆ ವಹಿಸಬೇಕಾದ ಅನಿವಾರ್ಯತೆ ಇದೆ. ಪೊಲೀಸರು ಕೂಡಾ ಇದೇ ಸಂಗತಿಯನ್ನು ಹೇಳುತ್ತಾರೆ.
– ಮನೆಯಲ್ಲಿ ಒಂಟಿಯಾಗಿ ಇರುವವರು ಮನೆ ಬಾಗಿಲುಗಳನ್ನು ಸರಿಯಾಗಿ ಮುಚ್ಚಿಕೊಳ್ಳುವುದು ಸುರಕ್ಷಿತ. ಕೀಗಳನ್ನು ಹೊರಗಿನಿಂದ ತೆಗೆಯಲು ಆಗುವಂತೆ ಇಡುವುದು ಒಳ್ಳೆಯದಲ್ಲ. ಈ ಪ್ರಕರಣದಲ್ಲೂ ಒಳಗಿನಿಂದ ಚಿಲಕ ಹಾಕಿದ್ದರೆ ಅಪಾಯ ತಪ್ಪುತ್ತಿತ್ತು.
– ಹಿತ್ತಲ ಬಾಗಿಲು ಹೆಚ್ಚಿನ ಕಡೆಗಳಲ್ಲಿ ತುಂಬ ದುರ್ಬಲವಾಗಿರುತ್ತದೆ. ನಿಜವೆಂದರೆ ಅದು ಎದುರು ಬಾಗಿಲಿನಷ್ಟೇ ಗಟ್ಟಿಯಾಗಿರಬೇಕು.
– ದೊಡ್ಡ ಮೊತ್ತದ ಚಿನ್ನಾಭರಣಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದಲ್ಲ.
– ಮನೆಗೆ ಸಿಸಿಟಿವಿ ಮತ್ತಿತರ ಆಧುನಿಕ ವ್ಯವಸ್ಥೆ ಮಾಡಿಕೊಂಡರೆ ಒಳ್ಳೆಯದು.

ಇದನ್ನೂ ಓದಿ: Vijayanagara News: ಹೊಸಪೇಟೆಯಲ್ಲಿ ಮನೆ ಕಳವು ಪ್ರಕರಣದ ಇಬ್ಬರು ಆರೋಪಿಗಳ ಬಂಧನ

Exit mobile version