Site icon Vistara News

Bengaluru-Mysuru Expressway ವೈಮಾನಿಕ ಸಮೀಕ್ಷೆ ಕೈಗೊಂಡ ಕೇಂದ್ರ ಸಚಿವ ಗಡ್ಕರಿ

Bengaluru-Mysuru Expressway and Nitin Gadkari

ಬೆಂಗಳೂರು: ಸುಮಾರು 8000 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಿರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿಯನ್ನು (Bengaluru-Mysuru Expressway) ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಗುರುವಾರ ವೈಮಾನಿಕ ಪರಿಶೀಲನೆ ನಡೆಸಿದರು. ಬಳಿಕ, ರಾಮನಗರದ ಜೀಗೇನಹಳ್ಳಿ ಹೆದ್ದಾರಿ ಬಳಿಕ ಹೆಲಿಪ್ಯಾಡ್‌ನಲ್ಲಿ ಹೆಲಿಕಾಪ್ಟರ್ ಇಳಿಸಲಾಯಿತು.

ಇದಕ್ಕೂ ಮೊದಲು ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಕಾಮಗಾರಿ ವೀಕ್ಷಿಸಿದರು. ಬಳಿಕ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಹೆದ್ದಾರಿಯನ್ನು ಹೆಲಿಕಾಪ್ಟರ್‌ನಲ್ಲಿ ಶ್ರೀರಂಗಪಟ್ಟಣದವರೆಗ ತೆರಳಿ, ವೈಮಾನಿಕ ಸಮೀಕ್ಷೆ ಕೈಗೊಂಡರು. ಈ ವೇಳೆ ಅವರ ಜತೆ, ಲೋಕೋಪಯೋಗಿ ಸಚಿವ ಸಿ ಸಿ ಪಾಟೀಲ್ ಮತ್ತು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹಾಗೂ ಅಧಿಕಾರಿಗಳ ಹಾಜರಿದ್ದರು.

ಹೇಗಿದೆ ರಸ್ತೆ?
ಬೆಂಗಳೂರು-ಮೈಸೂರು ದಶಪಥವನ್ನು ದಾಖಲೆಯ ಕಡಿಮೆ ಅವಧಿಯಲ್ಲಿ ನಿರ್ಮಿಸಲಾಗಿದೆ. 8172 ಕೋಟಿ ರೂ. ವೆಚ್ಚದ ಈ ಕಾರಿಡಾರ್ ಈಗ ಉದ್ಘಾಟನೆಗೆ ಸಿದ್ಧವಾಗಿದೆ. ಬೆಂಗಳೂರು-ಮೈಸೂರು ನಡುವಿನ ಪ್ರಯಾಣದ ಅವಧಿಯು ಮೂರು ಗಂಟೆಯಿಂದ ಒಂದೂವರೆ ತಾಸಿಗೆ ಇಳಿಕೆಯಾಗಲಿದೆ ಎಂದು ಈ ಹಿಂದೆ ಸಚಿವ ಗಡ್ಕರಿ ಅವರು ಟ್ವೀಟ್ ಮಾಡಿದ್ದರು.

ಭಾರತ್ ಮಾಲಾ ಮೊದಲನೆಯ ಹಂತದ ಯೋಜನೆಯ ಅಂಗವಾಗಿ ಮೈಸೂರು-ಬೆಂಗಳೂರು ಎಕ್ಸ್‌ಪ್ರೇಸ್ ಕಾರಿಡಾರ್ ಯೋಜನೆಯನ್ನು ಕೈಗೆತ್ತಿಕೊಂಡು, ಈಗ ಪೂರ್ಣಗೊಳಿಸಲಾಗಿದೆ. ಈ ರಾಷ್ಟ್ರೀಯ ಹೆದ್ದಾರಿಯನ್ನು ಬೆಂಗಳೂರು-ನಿಡಘಟ್ಟ ಮತ್ತು ನಿಟಘಟ್ಟ-ಮೈಸೂರು ಈ ಎರಡು ಹಂತದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ.

ಬೆಂಗಳೂರು-ಮೈಸೂರು ಕಾರಿಡಾರ್‌ನಿಂದ ಈ ಭಾಗದ ಆರ್ಥಿಕ ಚಟುವಟಿಕೆಗಳಿಗೆ ಬಲ ಬರಲಿದೆ. ರಾಜ್ಯದ ಎರಡು ಪ್ರಮುಖ ನಗರಗಳನ್ನು ಸಂಪರ್ಕಿಸುವುದರಿಂದ ಎಲ್ಲ ರೀತಿಯಿಂದಲೂ ನೆರವು ಸಿಗಲಿದೆ ಎಂದು ಹೇಳಬಹುದು.

ಇದನ್ನೂ ಓದಿ | SM Krishna | ಬೆಂಗಳೂರು-ಮೈಸೂರು ದಶಪಥಕ್ಕೆ ನಾಲ್ವಡಿ ಕೃಷ್ಣರಾಜರ ಹೆಸರಿಡಿ: ಕೇಂದ್ರಕ್ಕೆ ಎಸ್ ಎಂ ಕೃಷ್ಣ ಒತ್ತಾಯ

Exit mobile version