ಮಂಡ್ಯ: ಇಲ್ಲಿನ ಮಂಡ್ಯದ ಬೀಡಿ ಕಾಲನಿಯಲ್ಲಿ ಸಾಮರಸ್ಯ ಸಾರುವ ವಿಶೇಷ ರೀತಿಯಲ್ಲಿ ಗಣೇಶ ಹಬ್ಬವನ್ನು ಆಚರಿಸಲಾಯಿತು. ಬಹುತೇಕ ಮುಸ್ಲಿಂ ಸಮುದಾಯದವರೇ ವಾಸವಿರುವ ಬೀಡಿ ಕಾಲನಿಯಲ್ಲಿ ಹಿಂದು ಜತೆಗೆ ಒಂದಾಗಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ (Ganesh Chaturthi 2022 ) ಮಾಡಿದರು.
ಹಿಂದು-ಮುಸ್ಲಿಂ ಬಾಂಧವ್ಯದ ಸಂಕೇತದ ಪ್ರತೀಕವಾಗಿ ಗಣೇಶೋತ್ಸವ ಆಚರಿಸಲಾಯಿತು. ಬಡಾವಣೆಯ ಪ್ರಮುಖ ರಸ್ತೆಯಲ್ಲಿ ಬೃಹದಾಕಾರದ ಪೆಂಡಾಲ್ ಹಾಕಿ ಗಣೇಶ ಪ್ರತಿಷ್ಠಾಪನೆ ಮಾಡಲಾಯಿತು. ಪೂಜೆ-ಪುನಸ್ಕಾರದಲ್ಲಿ ಭಾಗಿಯಾಗಿ ಹಿಂದು-ಮುಸ್ಲಿಂರು ಗಣೇಶನ ಘೋಷಣೆ ಕೂಗಿದರು.
ರಾಜ್ಯದಲ್ಲಿ ಧರ್ಮಗಳ ನಡುವೆ ವಿವಾದ ಸೃಷ್ಟಿಯಾಗುತ್ತಿದ್ದರೆ ಮಂಡ್ಯದಲ್ಲಿ ಭಾವೈಕ್ಯತೆ ಸಾರುತ್ತಾ ಗಣೇಶನಿಗೆ ನಮಿಸಿದರು. ಈ ವಿಶೇಷ ಗಣೇಶೋತ್ಸವದಲ್ಲಿ ಮಂಡ್ಯ ಎಸ್‌ಪಿ ಎನ್.ಯತೀಶ್ ಭಾಗಿಯಾಗಿದ್ದು, ಪೂಜೆ ಸಲ್ಲಿಸಿದರು.
ಅದ್ಧೂರಿ ಮೆರವಣಿಗೆ ಮೂಲಕ ಗಣೇಶ ವಿಸರ್ಜನೆ
ಭಾವೈಕತೆ ಗಣಪನ ದರ್ಶನ ಪಡೆಯಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದ್ದು, ಸಂಜೆ ಅದ್ಧೂರಿ ಮೆರವಣಿಗೆ ಮೂಲಕ ಗಣೇಶ ವಿಸರ್ಜನೆಯನ್ನು ಮಾಡಲಾಗುತ್ತದೆ. ಇದಕ್ಕಾಗಿ ಸ್ಥಳೀಯರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ | Ganesh Chaturthi| ಗಣೇಶನ ಮೇಲೆ ಭಕ್ತಿ, ಪುನೀತ್ ರಾಜ್ ಕುಮಾರ್ ಮೇಲೆ ಪ್ರೀತಿ