ಬೆಳಗಾವಿ: ನಗರದ ಅನಂತಶಯನ ಗಲ್ಲಿಯಲ್ಲಿ ಎರಡು ಗುಂಪುಗಳ ಮಧ್ಯೆ ಘರ್ಷಣೆ ನಡೆದಿದ್ದು, ಚೂರಿ ಇರಿತದಿಂದ ಬಾಲಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ.
ಕ್ಯಾಂಪ್ ಪ್ರದೇಶದ ನಿವಾಸಿ ಫರಾನ್ ಧಾರವಾಡಕರ (15) ಗಾಯಾಳು. ಈತ ಇಸ್ಲಾಮಿಯಾ ಶಾಲೆಯಲ್ಲಿ ಎಸ್ಎಸ್ಎಲ್ಸಿ ಓದುತ್ತಿದ್ದು, ತನ್ನಿಬ್ಬರು ಸ್ನೇಹಿತರ ಜತೆಗೆ ಬೈಕ್ನಲ್ಲಿ ಹೋಗುತ್ತಿದ್ದಾಗ ಅಂಬಾಭವಾನಿ ಮಂದಿರದ ಬಳಿ ಫರಾನ್ ಮೇಲೆ ಯುವಕರ ಗುಂಪು ದಾಳಿ ಮಾಡಿದೆ. ಈ ವೇಳೆ ನಡೆದ ಜಗಳದಲ್ಲಿ ಫರಾನ್ಗೆ ಚೂರಿಯಿಂದ ಇರಿಯುತ್ತಿದ್ದಂತೆ ಸ್ನೇಹಿತರಿಬ್ಬರು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಗಾಯಗೊಂಡಿರುವ ಬಾಲಕನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಅಪರಾಧ ವಿಭಾಗದ ಡಿಸಿಪಿ ಸ್ನೇಹಾ, ಸಿಪಿಐ ಮಂಜುನಾಥ ಹಿರೇಮಠ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ | Teacher Recruitment Scam | ಐವರು ಆರೋಪಿಗಳನ್ನು ಬಂಧಿಸಿದ ಸಿಐಡಿ; ಅ.1ರವರೆಗೆ ಪೊಲೀಸ್ ಕಸ್ಟಡಿ