Site icon Vistara News

Ganja Seized: ಬಳ್ಳಾರಿಯಲ್ಲಿ ಗಾಂಜಾ ಮಾರುತ್ತಿದ್ದ ನಾಲ್ವರ ಬಂಧನ; ಲಕ್ಷ ರೂ. ಮೌಲ್ಯದ ಗಾಂಜಾ ವಶ

Ganja Seized

ಬಳ್ಳಾರಿ: ನಗರದ ರಾಣಿತೋಟ ಪ್ರದೇಶದ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ‌ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು‌ ಪೊಲೀಸರು ಬಂಧಿಸಿ, 1 ಲಕ್ಷ ರೂ.‌ ಮೌಲ್ಯದ 3.36 ಕೆ.ಜಿ ಗಾಂಜಾವನ್ನು ವಶಕ್ಕೆ (Ganja Seized) ಪಡೆದಿದ್ದಾರೆ.

ನಗರದ ರಾಣಿತೋಟ ನಿವಾಸಿಗಳಾದ ಡಿ.ದೌಲ (೩೫), ಮೀನಾಕ್ಷಿ, ಭುವನೇಶ್ವರ, ಅಗಸರ ಗಣೇಶ ಬಂಧಿತ ಆರೋಪಿಗಳು. ಡಿವೈಎಸ್‌ಪಿ ಬಸವರಾಜ್, ಸಿಪಿಐ‌ಗಳಾದ ಗುಂಡುರಾವ್, ಬಸವರಾಜ ಪಾಟೀಲ್, ಸಿಬ್ಬಂದಿ ಶರ್ಮಾಸ್, ಕುಮಾರರೆಡ್ಡಿ, ಆನಂದ ರೆಡ್ಡಿ ‌, ಬಿ. ಜಯರಾಮ್, ರಮೇಶ್, ಗಾಡಿ ಕೃಷ್ಣ, ಪಲ್ಲವಿ, ‌ಕಾವೇರಿ ಕಾರ್ಯಾಚರಣೆಯಲ್ಲಿ‌ ಭಾಗವಹಿಸಿದ್ದರು. ಈ ಹಿನ್ನೆಲೆಯಲ್ಲಿ ಎಸ್‌ಪಿ ರಂಜಿತ್ ಕುಮಾರ್ ಬಂಡಾರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಬ್ರೂಸ್ ಪೇಟೆ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Fire Accident: ಕಬ್ಬಿನ ಗದ್ದೆಗೆ ಹಚ್ಚಿದ ಬೆಂಕಿ ನಂದಿಸಲು ಹೋಗಿ ರೈತ ಸಜೀವ ದಹನ

Exit mobile version