ಹಾಸನ: ಸಕಲೇಶಪುರ ತಾಲೂಕಿನ ಕೊಲ್ಲಹಳ್ಳಿ ಕ್ರಾಸ್ ಬಳಿ ಶುಕ್ರವಾರ ಗ್ಯಾಸ್ ಟ್ಯಾಂಕರ್ ಒಂದು ಪಲ್ಟಿಯಾಗಿದೆ. ಹೀಗೆ ಪಲ್ಟಿಯಾಗಿ ಉರುಳುವ ಹೊತ್ತಿನಲ್ಲಿ ಅದು ಟ್ರಾನ್ಸ್‌ಫಾರಂಗೆ ಡಿಕ್ಕಿಯಾಗುವುದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಇದಿಂದಾಗಿ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.
ಅನಿಲ ಹೊತ್ತಿದ್ದ ಟ್ಯಾಂಕರ್ ಮಂಗಳೂರು ಕಡೆಯಿಂದ ಬೆಂಗಳೂರಿನ ಕಡೆಗೆ ಸಾಗುತ್ತಿತ್ತು. ಕೊಲ್ಲಹಳ್ಳಿ ಕ್ರಾಸ್ ಬಳಿ ಬರುತ್ತಿದ್ದಂತೆಯೇ ಸಕಲೇಶಪುರದ ಕಡೆಗೆ ಬರುತ್ತಿದ್ದ ಸ್ಕಾರ್ಪಿಯೋ ಕಾರೊಂದು ಅಡ್ಡ ಬಂತು. ಟ್ಯಾಂಕರ್ ಚಾಲಕ ಕಾರಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿದ್ದಾನೆ. ಈ ವೇಳೆ ಗ್ಯಾಸ್ ಟ್ಯಾಂಕರ್ ಮಗುಚಿಬಿದ್ದಿದೆ.
ಹೆದ್ದಾರಿಯಿಂದ ತುಂಬ ದೂರ ಉರುಳಿ ಬಿದ್ದರೂ ಟ್ಯಾಂಕರ್ ನಿಂದ ಅನಿಲ ಸೋರಿಕೆ ಆಗಿಲ್ಲ. ಈ ಭಾಗದಲ್ಲಿ ಹಲವು ಮನೆಗಳಿದ್ದು ಒಂದೊಮ್ಮೆ ಸೋರಿಕೆಯಾಗಿದ್ದರೆ ಭಾರಿ ಅನಾಹುತವಾಗುವ ಅಪಾಯವಿತ್ತು. ಈ ನಡುವೆ ಟ್ಯಾಂಕರ್ ಪಲ್ಟಿಯಾಗುತ್ತಾ ಸಾಗಿ ಒಂದು ಟ್ರಾನ್ಸ್‌ಫಾರ್ಮರ್‌ಗೆ ಬಡಿಯುವುದು ಸ್ವಲ್ಪದರಲ್ಲೇ ತಪ್ಪಿದೆ. ಹೀಗಾಗಿ ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲ ಸಂಭವಿಸಿಲ್ಲ.
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಟ್ಯಾಂಕರ್ ನಿಂದ ಅನಿಲ ಸೋರಿಕೆ ಆಗುತ್ತಿದೆಯೇ ಎಂಬ ಬಗ್ಗೆ ಸೂಕ್ಷ್ಮ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ | Karwar | ಗ್ಯಾಸ್ ತುಂಬಿದ್ದ ಟ್ಯಾಂಕರ್ ಪಟ್ಟಣದ ಮಧ್ಯೆ ಪಲ್ಟಿ: ಸಂಚಾರ ಬಂದ್