ಉಡುಪಿ: ಉಡುಪಿಯ ಮಲ್ಪೆ ಬಂದರಿನ ಮೀನುಗಾರರ ಬಲೆಗೆ ಲಕ್ಷಾಂತರ ರೂಪಾಯಿ ಮೌಲ್ಯದ ಮೀನು ಬಿದ್ದಿದೆ.
ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ಹೋದ ಆಳ ಸಮುದ್ರ ಮೀನುಗಾರರ ಬಲೆಗೆ ಲಕ್ಷ ಮೌಲ್ಯದ ಮತ್ಸ್ಯ ಬಿದ್ದಿದೆ. ʼಗೋಳಿ ಮೀನುʼ ಎಂದು ಕರೆಯಲ್ಪಡುವ ಈ ಮೀನಿನ ಬೆಲೆ ಲಕ್ಷಾಂತರ ರೂಪಾಯಿಗಳಷ್ಟಿದೆ. 22 ಕೆ.ಜಿ ತೂಗುವ ಒಂದು ಮೀನು 2,34,080 ರೂ.ಗಳಿಗೆ ಮಾರಾಟವಾಗಿದೆ. ಮಲ್ಪೆ ಬಂದರಿನಲ್ಲಿ ನಡೆದ ಹರಾಜಿನಲ್ಲಿ ಈ ಮೀನನ್ನು ದುಬಾರಿ ದರ ಕೊಟ್ಟು ಖರೀದಿಸಲಾಗಿದೆ. ಈ ಗೋಳಿ ಮೀನಿನಲ್ಲಿ ಔಷಧೀಯ ಗುಣಗಳಿರುವ ಕಾರಣ ಅದಕ್ಕೆ ಇಷ್ಟೊಂದು ಮೌಲ್ಯ ಎನ್ನಲಾಗಿದೆ.
ಇದನ್ನು ಸ್ಥಳೀಯವಾಗಿ ʼಗೋಳಿʼ ಎನ್ನುತ್ತಾರೆ. ಈ ಮೀನಿನ ವೈಜ್ಞಾನಿಕ ಹೆಸರು ಘೋಲ್ ಫಿಶ್. ಘೋಲ್ ಫಿಶ್‌ನ ವಾಯು ಚೀಲವನ್ನು ಸೌಂದರ್ಯ ವರ್ಧಕಗಳಲ್ಲಿ ಬಳಸುವುದರಿಂದ ವಿದೇಶಗಳಲ್ಲಿ ಹೆಚ್ಚು ಬೇಡಿಕೆಯಿದೆ. ಈ ಮೀನು ಸುಮಾರು ಒಂದು ಮೀಟರ್‌ವರೆಗೂ ಬೆಳೆಯುತ್ತದೆ. 30 ಕೆಜಿ ತೂಕದ ಘೋಲ್ ಫಿಶ್‌ಗೆ 5 ಲಕ್ಷ ರೂ.ವರೆಗೂ ಬೆಲೆ ಇದೆ.
ಇದನ್ನೂ ಓದಿ | ಫಿಶ್‌ಟೇಲ್-ಬ್ರೈಡ್ಸ್