Site icon Vistara News

Giant Wheel Accident: ಜೈಂಟ್ ವ್ಹೀಲ್‌ ದುರಂತ; ಆಯೋಜಕರು, ಪುರಸಭೆ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ ದಾಖಲು

#image_title

ಮಂಡ್ಯ: ಜೈಂಟ್ ವ್ಹೀಲ್‌ ನಲ್ಲಿ ಕುಳಿತಿದ್ದಾಗ (Giant Wheel Accident) ಬಾಲಕಿಯೊಬ್ಬಳ ತಲೆಕೂದಲು ಸಿಕ್ಕಿಕೊಂಡು ಚರ್ಮ ಪೂರ್ತಿ ಕಿತ್ತು ಬಂದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಆಯೋಜಕರು ಹಾಗೂ ಪುರಸಭೆಯ ಇಬ್ಬರು ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ (FIR) ದಾಖಲಾಗಿದೆ.

Giant Wheel Accident

ಭಾನುವಾರ ತಡರಾತ್ರಿ ಶ್ರೀರಂಗಪಟ್ಟಣದ ರಂಗನಾಥ ಮೈದಾನದಲ್ಲಿ ರಥಸಪ್ತಮಿ ಅಂಗವಾಗಿ ಮೈದಾನದಲ್ಲಿ ಜಾತ್ರೆಯನ್ನು ಆಯೋಜಿಸಲಾಗಿತ್ತು. ಜಾತ್ರೆಯಲ್ಲಿ ಜೈಂಟ್‌ ವ್ಹೀಲ್‌ ಗೇಮ್ ಹಾಕಲಾಗಿತ್ತು. ಜೈಂಟ್‌ ವ್ಹೀಲ್‌ನಲ್ಲಿ ಆಟವಾಡಲು ಹೋದಾಗ ಬಾಲಕಿ ವಿದ್ಯಾಶ್ರೀ ತಲೆಕೂದಲು ಯಂತ್ರಕ್ಕೆ ಸಿಲುಕಿ, ಕ್ಷಣಮಾತ್ರದಲ್ಲೇ ಸಂಪೂರ್ಣ ತಲೆಕೂದಲು ಕಿತ್ತುಕೊಂಡು ಬಂದಿತ್ತು.

Giant Wheel Accident

ಅವಘಡದಲ್ಲಿ ಗಂಭೀರ ಗಾಯಗೊಂಡಿರುವ ಬೆಂಗಳೂರಿನ ವಿದ್ಯಾಶ್ರೀ (14) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸ್ಥಿತಿ ಚಿಂತಾಜನಕವಾಗಿದೆ. ಈ ಘಟನೆ ಸಂಬಂಧ ವಿದ್ಯಾಶ್ರೀ ಸಂಬಂಧಿ ಪೂಜಾ ಎಂಬುವವರು ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಜೈಂಟ್‌ ವ್ಹೀಲ್ ಆಟಿಕೆಯ ಮಾಲೀಕ ರಮೇಶ್, ಶ್ರೀರಂಗನಾಥಸ್ವಾಮಿ ದೇಗುಲದ ಕಾರ್ಯ ನಿರ್ವಾಹಕ ಅಧಿಕಾರಿ(ಸಿಇಓ), ಪುರಸಭೆ ಮುಖ್ಯಾಧಿಕಾರಿ ವಿರುದ್ಧ IPC ಸೆಕ್ಷನ್ 337ರ ಅಡಿ ಎಫ್‌ಐಆರ್‌ ದಾಖಲಾಗಿದೆ.

Giant Wheel Accident

ಮುನ್ನೆಚ್ಚರಿಕೆ ವಹಿಸಿದ್ದ ಅವಘಡಕ್ಕೆ ಕಾರಣನಾ?

ಜಾತ್ರೆಯಲ್ಲಿ ಜೈಂಟ್‌ ವ್ಹೀಲ್‌ ಆಡಿಸುತ್ತಿದ್ದ ಆಯೋಜಕರು ಹಾಗೂ ಅಲ್ಲಿನ ಕೆಲಸಗಾರರು ಯಾವುದೇ ಮುನ್ನೆಚ್ಚರಿಕೆ ವಹಿಸದೆ ಇರುವುದರಿಂದಲೇ ಅವಘಡಕ್ಕೆ ಕಾರಣವೆಂದು ದೂರಿನಲ್ಲಿ ದೂರಿದ್ದಾರೆ.

Giant Wheel Accident

ಭಾನುವಾರ (ಜ.29) ರಾತ್ರಿ ಸುಮಾರು 8 ಗಂಟೆ ಸಮಯದಲ್ಲಿ ವಿದ್ಯಾಶ್ರೀ ಆಟ ಆಡುತ್ತಿದ್ದಾಗ ತಲೆಕೂದಲು ದೋಷವಿರುವ ಜೈಂಟ್‌ ವ್ಹೀಲ್‌ನ ಕನೆಕ್ಟಿಂಗ್ ರಾಡ್‌ಗೆ ಸಿಕ್ಕಿ ಹಾಕಿಕೊಂಡು ಚರ್ಮ ಸಹಿತ ಕಿತ್ತುಕೊಂಡು ಬಂದಿದೆ. ಈ ವೇಳೆ ಜೋರಾಗಿ ಕೂಗಿಕೊಂಡರು ವ್ಹೀಲ್‌ ನಿಲ್ಲಿಸದೇ ಸಿಬ್ಬಂದಿ ನಿರ್ಲಕ್ಷ್ಯವಹಿಸಿದ್ದಾರೆಂದು ಆರೋಪಿಸಿದ್ದಾರೆ.

ಇದನ್ನೂ ಓದಿ: CBSE Affiliation | ಮತ್ತೊಂದು ಆರ್ಕಿಡ್‌ ಸ್ಕೂಲ್‌ನಲ್ಲಿ CBSE ಮಾನ್ಯತೆ ವಿವಾದ; ಪೋಷಕರು ಕೆಂಡಾಮಂಡಲ

Exit mobile version