ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ರಾಮನಗರದಲ್ಲಿ ಜೆಡಿಎಸ್ (JDS) ಸೋಲು ಕಾಣಲು ಕಾಂಗ್ರೆಸ್ ಹಂಚಿದ ಗಿಫ್ಟ್ ಕೂಪನ್‌ಗಳೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ಅರೋಪಿಸಿದ್ದರೆ ಬಿಜೆಪಿ ಅದಕ್ಕೆ ಪೂರಕವಾದ ಸಾಕ್ಷ್ಯವನ್ನು ಒದಗಿಸಿದೆ.
ಸುಳ್ಳು ಗ್ಯಾರಂಟಿಗಳ (Congress guarantee) ಜತೆಗೆ ಅಕ್ರಮವಾಗಿ ಕೂಪನ್‌ಗಳನ್ನು ಹಂಚಿ ರಾಮನಗರ, ಮಾಗಡಿ ಸೇರಿದಂತೆ ರಾಜ್ಯದ 45-50 ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವು ಅಕ್ರಮವಾಗಿ ಗೆಲುವು ಸಾಧಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಶುಕ್ರವಾರ ಜೆ.ಪಿ. ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದರು.
ಕೂಪನ್ ಗಿಫ್ಟ್‌ಗಳನ್ನು ಪ್ರದರ್ಶಿಸಿದ ಅವರು, ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲಿಗೆ ಪಕ್ಷವು ಮತದಾನಕ್ಕೆ ಕೆಲವೇ ಗಂಟೆಗಳ ಮುನ್ನ ಹಂಚಿದ ಕ್ಯೂಆರ್ ಕೋಡ್‌ಗಳುಳ್ಳ ಈ ಕೂಪನ್‌ಗಳೇ ಕಾರಣ. ಇದು ಗಂಭೀರ ಸ್ವರೂಪದ ಚುನಾವಣೆ ಅಕ್ರಮ ಎಂದು ಆಪಾದಿಸಿದರು.
ಮೂರು ಸಾವಿರ ರು. ಮತ್ತು ಐದು ಸಾವಿರ ರು. ಮೊತ್ತದ ಕ್ಯೂಆರ್ ಕೋಡ್‌ಗಳನ್ನು ಹೊಂದಿರುವ ಕೂಪನ್‌ಗಳನ್ನು ಮತದಾನಕ್ಕೆ ಕೆಲವೇ ಗಂಟೆಗಳ ಮುನ್ನ ಮತದಾರರಿಗೆ ಹಂಚಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಗೆದ್ದರಷ್ಟೇ ಈ ಕೂಪನ್ ನಗದಾಗುತ್ತದೆ. ಆಗ ಕೂಪನ್ ಹೊಂದಿರುವವರು ನಿಗದಿತ ಮಾಲ್ ಅಥವಾ ಮಳಿಗೆಗೆ ಹೋಗಿ ಕೂಪನ್‌ನಲ್ಲಿ ನಿಗದಿತ ಮೊತ್ತದ ವಸ್ತುಗಳನ್ನು ಖರೀದಿ ಮಾಡಬಹುದು ಎಂದು ಅದರಲ್ಲಿ ಹೇಳಲಾಗಿದೆ ಎಂದು ಆರೋಪಿಸಿದ ಎಚ್.ಡಿ ಕುಮಾರಸ್ವಾಮಿ ಅವರು, ಒಂದೊಂದು ಕ್ಷೇತ್ರದಲ್ಲಿ ಸುಮಾರು 60 ಸಾವಿರ ಕೂಪನ್ ಹಂಚಿದ್ದಾರೆ ಎಂದಿದ್ದರು.
ವಿಡಿಯೊ ಬಿಡುಗಡೆ ಮಾಡಿದ ಬಿಜೆಪಿ
ಜೆಡಿಎಸ್ ನಾಯಕರ ಈ ಆರೋಪಗಳಿಗೆ ಬಿಜೆಪಿ ಅಧಿಕೃತ ಸಾಕ್ಷ್ಯವನ್ನು ಒದಗಿಸಿದೆ. ʻʻರಾಮನಗರದ ಕಾಂಗ್ರೆಸ್ ಶಾಸಕರು ತಾವು ಚುನಾವಣಾ ಪೂರ್ವದಲ್ಲಿ ಮತದಾರರಿಗೆ ಆಮಿಷವಾಗಿ ರೂ. 5000ಗಳ ಕೂಪನ್‌ಗಳನ್ನು ಹಂಚಿಕೆ ಮಾಡಿದ್ದಾಗಿ ಖುದ್ದು ಒಪ್ಪಿಕೊಂಡಿದ್ದಾರೆ! ಈ ರೀತಿಯ ಕೂಪನ್‌ಗಳನ್ನು ರಾಜ್ಯದ ಬಹುತೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಹಂಚಿಕೆ ಮಾಡಿದ್ದು ಚುನಾವಣೆಯಲ್ಲಿ ಪಾಲಿಸಬೇಕಾದ ನೀತಿ ಸಂಹಿತೆಯನ್ನು ಗಾಳಿಗೆ ತೂರಿದ್ದಾರೆ! ಸುಳ್ಳಿನ ಗ್ಯಾರಂಟಿಗಳು ಹಾಗೂ ಕೂಪನ್‌ಗಳ ಆಮಿಷ ಒಡ್ಡಿ ಜನರನ್ನು ವಂಚಿಸಿ ಅಧಿಕಾರ ಹಿಡಿದಿರುವ ಕಾಂಗ್ರೆಸಿಗೆ ಕನ್ನಡಿಗರು ಪಾಠ ಕಲಿಸಲಿದ್ದಾರೆʼʼ ಎಂದು
ರಾಮನಗರದ ಕಾಂಗ್ರೆಸ್ ಶಾಸಕರು ತಾವು ಚುನಾವಣಾ ಪೂರ್ವದಲ್ಲಿ ಮತದಾರರಿಗೆ ಆಮಿಷವಾಗಿ ರೂ. 5000ಗಳ ಕೂಪನ್‌ಗಳನ್ನು ಹಂಚಿಕೆ ಮಾಡಿದ್ದಾಗಿ ಖುದ್ದು ಒಪ್ಪಿಕೊಂಡಿದ್ದಾರೆ!
— BJP Karnataka (@BJP4Karnataka) May 27, 2023
ಈ ರೀತಿಯ ಕೂಪನ್‌ಗಳನ್ನು ರಾಜ್ಯದ ಬಹುತೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಹಂಚಿಕೆ ಮಾಡಿದ್ದು ಚುನಾವಣೆಯಲ್ಲಿ ಪಾಲಿಸಬೇಕಾದ ನೀತಿ ಸಂಹಿತೆಯನ್ನು ಗಾಳಿಗೆ… pic.twitter.com/YxVQlaVVbh
ಗಟ್ಟಿ ನೆಲದಲ್ಲೇ ಸೋಲು ಕಂಡ ಜೆಡಿಎಸ್
ರಾಮನಗರ ಕ್ಷೇತ್ರ ಜೆಡಿಎಸ್‌ನ ಭದ್ರಕೋಟೆ. 1994ರಲ್ಲಿ ದೇವೇಗೌಡರು ಗೆದ್ದಿದ್ದ ಈ ಕ್ಷೇತ್ರದಲ್ಲಿ 2004ರಿಂದ ಸತತವಾಗಿ ಜೆಡಿಎಸ್ ಗೆಲುವು ಸಾಧಿಸುತ್ತಿದೆ. 2004 ಮತ್ತು 2008ರಲ್ಲಿ ಎಚ್.ಡಿ. ಕುಮಾರಸ್ವಾಮಿ, 2013ರಲ್ಲಿ ಎಚ್ ರಾಜು, 2018ರಲ್ಲಿ ಅನಿತಾ ಕುಮಾರಸ್ವಾಮಿ ಅವರು ಗೆದ್ದಿದ್ದರು. 2018ರಲ್ಲಿ ಅನಿತಾ ಕುಮಾರಸ್ವಾಮಿ ಅವರು ಗೆದ್ದಾಗ ಗೆಲುವಿನ ಅಂತರ 23000 ಮತಗಳಿದ್ದವು. ಅನಿತಾ ಕುಮಾರಸ್ವಾಮಿ ಅವರು 92000 ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್‌ನ ಇಕ್ಬಾಲ್ ಅವರಿಗೆ 69 ಸಾವಿರ ಮತಗಳು ಬಂದಿದ್ದವು. 2023ರ ಚುನಾವಣೆಯಲ್ಲಿ ಇಕ್ಬಾಲ್ ಹುಸೇನ್ ಅವರಿಗೆ 87 ಸಾವಿರ ಮತಗಳು ಬಂದಿದ್ದರೆ, ನಿಖಿಲ್ ಕುಮಾರಸ್ವಾಮಿ ಅವರಿಗೆ 76 ಸಾವಿರ ಮತಗಳು ಬಂದಿದ್ದವು. ಈ ರೀತಿ ಮತಗಳು ಕಾಂಗ್ರೆಸ್ ಪಾಲಾಗಲು ಗಿಫ್ಟ್ ಕೂಪನ್‌ಗಳು ಕಾರಣ ಎನ್ನುವುವುದು ಜೆಡಿಎಸ್ ಆರೋಪ.
ಇದನ್ನೂ ಓದಿ: Devotee of Lord Rama : ನಾನೂ ರಾಮ ಭಕ್ತ, ಹೊಸ ರಾಮನಗರ ನಿರ್ಮಾಣವೇ ಗುರಿ ಎಂದ ಮುಸ್ಲಿಂ ಶಾಸಕ