Site icon Vistara News

ಸಚಿವ ಮುನಿರತ್ನ ವಿರುದ್ಧ ಮಹಿಳಾ ಅಭ್ಯರ್ಥಿ ಘೋಷಿಸಿದ ಡಿಕೆಶಿ: ಮತ್ತೊಮ್ಮೆ ಫಲ ಕೊಡುತ್ತಾ ತಂತ್ರಗಾರಿಕೆ?

gift for voters

ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರನ್ನು ಸೆಳೆಯಲು ಕಾಂಗ್ರೆಸ್‌ ಪಕ್ಷದಿಂದ ಮತಬೇಟೆ ಕಾರ್ಯ ಜೋರಾಗಿದೆ. ಮುನಿರತ್ನ ಅವರನ್ನು ಸೋಲಿಸಲು ಪಣತೊಟ್ಟಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಈ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಸ್ತ್ರೀ ಶಕ್ತಿಯನ್ನು ಮುಂದೆ ಬಿಟ್ಟಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕುಸುಮ ಹನುಮಂತರಾಯಪ್ಪ ಕ್ಷೇತ್ರದಲ್ಲಿ ಮಹಿಳಾ ಸಂಕಲ್ಪ ಸಮಾವೇಶದಲ್ಲಿ ಮಹಿಳಾ ಮತಗಳನ್ನು (Gift For Voters) ಸೆಳೆಯಲು ಮುಂದಾಗಿದ್ದಾರೆ.

Gift For Voters

ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಕುಮಾರ್‌, ರಾಜಕಾರಣದಲ್ಲಿ ಸಾಧ್ಯತೆ ಬಿಟ್ಟರೆ ಬೇರೇನೂ ಇಲ್ಲ. ಏನು ಬೇಕಾದರೂ ಬದಲಾವಣೆ ಮಾಡಬಾರದು. ನಾನು 2004 ರಲ್ಲಿ ತೇಜಸ್ವಿ ರಮೇಶ್ ಅವರನ್ನು ಎಲೆಕ್ಷನ್‌ಗೆ ನಿಲ್ಲಿಸಿದ್ದೆ. ದೇವೇಗೌಡರ ವಿರುದ್ಧ ಗೆಲ್ಲಿಸಲು ಸಾಧ್ಯವೇ? ಎಂದು ಅನೇಕರು ಕೇಳುತ್ತಿದ್ದರು. ಹೆಣ್ಣು ಮಕ್ಕಳು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಎಂದು ನನಗೆ ಗೊತ್ತಿತ್ತು. 1 ಲಕ್ಷದ 30 ಸಾವಿರ ಮತಗಳ ಅಂತರದಿಂದ ಜಯಿಸಿದರು, ದೇವೇಗೌಡರು‌ ಈ ಕ್ಷೇತ್ರದಲ್ಲಿ ಮೂರನೇ ಸ್ಥಾನಕ್ಕೆ ಹೋದರು. ಇದು ಇತಿಹಾಸ ಎಂದರು.

ಮುಂದಕ್ಕೆ ಬದಲಾವಣೆ ತರಲು ಶಕ್ತಿ ತುಂಬಲು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಹೆಣ್ಣು ‌ಮಕ್ಕಳನ್ನು ಮುಂದೆ ತಳ್ಳಿ, ಹಿಂದೆ ಸರಿಯುವ ಪ್ರಶ್ನೆಯಿಲ್ಲ. ಕಾಂಗ್ರೆಸ್ ನಿಮ್ಮ ಜತೆ ಇದೆ. ಭ್ರಷ್ಟಾಚಾರ ನಿರ್ಮೂಲನೆ ಮಾಡಬೇಕು, ಹೆಣ್ಣು ಮಕ್ಕಳಿಗೆ ಶಕ್ತಿ ತುಂಬ ಬೇಕು. ತಮ್ಮ ಸಾಮರ್ಥ್ಯವನ್ನು ನೆನಪು ಮಾಡಿಕೊಳ್ಳಿ ಎಂದರು.

ಎಚ್‌.ಡಿ. ದೇವೇಗೌಡರ ವಿರುದ್ಧ ಪ್ರಯೋಗಿಸಿದ್ದ ʼಮಹಿಳಾ ಅಭ್ಯರ್ಥಿʼ ಅಸ್ತ್ರವನ್ನು ಮುನಿರತ್ನ ವಿರುದ್ಧ ಪ್ರಯೋಗಿಸಲು ಡಿ.ಕೆ. ಶಿವಕುಮಾರ್‌ ಮುಂದಾಗಿದ್ದಾರೆ.

ಉಡುಗೊರೆಗೆ ಒಟಿಪಿ

ಇಂದಿರಾ ಗಾಂಧಿ ಸ್ಮರಣೆ ಪ್ರಯುಕ್ತ ಕಾಂಗ್ರೆಸ್‌ ಪಕ್ಷದಿಂದ ಮಹಿಳಾ ಸಂಕಲ್ಪ ಸಮಾವೇಶ ನಡೆಸಲಾಯಿತು. ಸಮಾವೇಶಕ್ಕೆ ಬಂದವರಿಗೆ ಉಡುಗೊರೆ ಹಂಚಿಕೆ ಮಾಡಲಾಗುತ್ತಿದೆ. ಉಡುಗೊರೆ ನೆಪದಲ್ಲಿ ಮತದಾರರ ಮಾಹಿತಿ ಸಂಗ್ರಹ ಮಾಡಲಾಯಿತು.

ಸಮಾವೇಶಕ್ಕೆ ಬಂದ ಮಹಿಳೆಯರಿಗೆ ಪಾತ್ರೆ, ತಟ್ಟೆ, ಸೌಟ್‌ಗಳನ್ನು ಗಿಫ್ಟ್ ಆಗಿ ನೀಡುತ್ತಿದ್ದು, ಇವುಗಳನ್ನು ಪಡೆಯುವ ಮುನ್ನ ಜನರು ವೋಟರ್‌ ಐಡಿ ಮಾಹಿತಿ ‌ನೀಡಬೇಕು. ಇದನ್ನು Kpcc gift-ap-south-election ಎಂಬ ಅಪ್ಲಿಕೇಶನ್ ಮೂಲಕ ಮತದಾರರ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ.

ವಾರ್ಡ್‌ವಾರು ಕೌಂಟರ್‌ ನಿರ್ಮಾಣ
ಅಪ್ಲಿಕೇಶನ್ ಫಿಲ್ ಮಾಡಲು ವಾರ್ಡ್‌ವಾರು ಎಂಟು ಕೌಂಟರ್‌ಗಳ ನಿರ್ಮಾಣ ಮಾಡಲಾಗಿದೆ. ಗಿಫ್ಟ್ ಪಡೆಯಲು ಬರುವ ಮಹಿಳೆಯರು ಕೌಂಟರ್‌ನಲ್ಲಿ ತಮ್ಮ ಹೆಸರು, ಮೊಬೈಲ್ ನಂಬರ್, ಜತೆಗೆ ವೋಟರ್‌ ಐಡಿ ಕೊಡಬೇಕು. ಅಪ್ಲಿಕೇಶನ್ ಫಿಲ್ ಆದಾ ಬಳಿಕ ಮತದಾರರಿಗೆ ಒಟಿಪಿ ಬರುತ್ತದೆ. ಓಟಿಪಿ ನಂಬರ್‌ ತೋರಿಸಿದವರಿಗೆ ಮಾತ್ರ ಗಿಫ್ಟ್ ಕೊಡಲಾಗುತ್ತಿದೆ. ಈ ಹಿಂದೆ ಈ‌ ಕ್ಷೇತ್ರದಲ್ಲಿ ಅಪಾರ್ಟ್ಮೆಂಟ್ ಒಂದರಲ್ಲಿ 9,746 ಮತದಾರರ ಅಸಲಿ ಗುರುತಿನ ಚೀಟಿ ಹಗರಣ ನಡೆದಿತ್ತು.

ಇದನ್ನೂ ಓದಿ | BJP ಜನಸ್ಪಂದನ | ಜನ ಕಣ್ಣೀರಲ್ಲಿರುವಾಗ ಯಾಕಿದು ಮೋಜಿನ ವರ್ತನೆ? ಎಂಟಿಬಿ, ಮುನಿರತ್ನ ಡ್ಯಾನ್ಸ್‌ಗೆ ಕಾಂಗ್ರೆಸ್‌ ಟಾಂಗ್‌

Exit mobile version