Site icon Vistara News

Girl Dies | ಮೂರನೇ ಮಹಡಿಯಿಂದ ಹಾಲೋಬ್ಲಾಕ್ ಇಟ್ಟಿಗೆ ಬಿದ್ದು ಬಾಲಕಿ ಸಾವು

Girl Dies

ನೆಲಮಂಗಲ: ಮೂರು ಅಂತಸ್ತಿನ ಕಟ್ಟಡದ ಮೇಲಿಂದ ಹಾಲೋಬ್ಲಾಕ್ ಇಟ್ಟಿಗೆ ಬಿದ್ದು ಬಾಲಕಿ ಮೃತಪಟ್ಟಿರುವ (Girl Dies) ಘಟನೆ ನೆಲಮಂಗಲ ತಾಲೂಕು ದಾಬಸ್‌ಪೇಟೆ ಸಮೀಪದ ಭಾರತಿಪುರದಲ್ಲಿ ಗುರುವಾರ ನಡೆದಿದೆ.

ಯಾದಗಿರಿ ಮೂಲದ ಉಷಾ (15) ಮೃತ ಬಾಲಕಿ. ನಿರ್ಮಾಣ ಹಂತದ ಕಟ್ಟಡದ ಕೆಳಗೆ ಬಾಲಕಿ ನಿಂತಿದ್ದಾಗ ಹಾಲೋಬ್ಲಾಕ್ ಇಟ್ಟಿಗೆ ಬಿದ್ದು ಬಾಲಕಿ ತಲೆಗೆ ಗಂಭೀರ ಗಾಯಗಳಾಗಿದ್ದವು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಮೃತಪಟ್ಟಿದ್ದಾಳೆ. ಭಾರತೀಪುರದ ನಾಗರಾಜು ಎಂಬುವವರ ಬಿಲ್ಡಿಂಗ್ ಕಾಮಗಾರಿ ವೇಳೆ ದುರ್ಘಟನೆ ಸಂಭವಿಸಿದೆ.

ಇದನ್ನೂ ಓದಿ | Woman suicide | ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ: ಕೈ ಕೊಯ್ದು ನೇಣಿಗೇರಿಸಿದನೇ ಗಂಡ?

Exit mobile version