Site icon Vistara News

Girl Escaped: ರಾತ್ರಿ 11 ಗಂಟೆಗೆ ಹಾಸ್ಟೆಲ್‌ನಿಂದ ಹುಡುಗಿ ಎಸ್ಕೇಪ್‌, ಬೆಳಗ್ಗೆ 5 ಗಂಟೆಗೆ ವಾಪಸ್‌; ರಾತ್ರಿ ಇಡೀ ಮಾಡಿದ್ದೇನು?

Arya gowda who helped hostel girl to escape

ತುಮಕೂರು: ಮಕ್ಕಳನ್ನು ಹದ್ದುಬಸ್ತಿನಲ್ಲಿ ಇಡುವುದು ಭಾರಿ ಕಷ್ಟ ಎಂದು ಹೆತ್ತವರು ತಲೆಬಿಸಿ ಮಾಡುತ್ತಿರುವ ನಡುವೆಯೇ 17 ವರ್ಷದ ಹುಡುಗಿಯೊಬ್ಬಳು ರಾತ್ರೋರಾತ್ರಿ ಹಾಸ್ಟೆಲ್‌ನ ಹದ್ದುಗಣ್ಣು ತಪ್ಪಿಸಿ ಎಸ್ಕೇಪ್‌ (Girl Escaped) ಆಗಿದ್ದಾಳೆ. ರಾತ್ರಿ 11 ಗಂಟೆಯ ಹೊತ್ತಿಗೆ ಗೇಟ್‌ ಹಾರಿ ಪರಾರಿಯಾಗಿರುವ ಹುಡುಗಿ (Girl Escaped from Hostel) ಬೆಳಗ್ಗೆ ಐದು ಗಂಟೆ ಹೊತ್ತಿಗೆ ಬಂದು ಬೆಚ್ಚಗೆ ಮಲಗಿದ್ದಾಳೆ. ಹಾಗಿದ್ದರೆ ಇಡೀ ರಾತ್ರಿ ಆಕೆ ಮಾಡಿದ್ದೇನು (Midnight operation)? ಆಕೆ ಯಾರ ಜತೆಗಿದ್ದಳು.

ಹೆತ್ತವರಿಗೆ ಆತಂಕ ತರಬಹುದಾದ, ಮಕ್ಕಳ ಸಂಬಂಧಗಳ ಬಗ್ಗೆ ಯೋಚನೆ ಮಾಡಬೇಕಾದ ಈ ಘಟನೆ ನಡೆದಿರುವುದು ತುಮಕೂರು ಜಿಲ್ಲೆ (Tumkur News) ಕೊರಟಗೆರೆ ಪಟ್ಟಣದ ಹಾಸ್ಟೆಲ್‌ (Hostel in Koratagere) ಒಂದರಲ್ಲಿ. ಕಳೆದ ಶುಕ್ರವಾರದಂದು ನಡೆದ ಈ ಘಟನೆಯ ಸುಳಿವು ತಡವಾಗಿ ಸಿಕ್ಕಿದೆ. ಈಗ ಪೊಲೀಸರು ಇದರ ಬಗ್ಗೆ ತೀವ್ರ ತನಿಖೆಯನ್ನು ನಡೆಸಿದ್ದು, ಎಲ್ಲ ಕಥೆಯನ್ನು ಬಿಚ್ಚಿಟ್ಟಿದ್ದಾರೆ.

ಹಾಸ್ಟೆಲ್‌ನ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯ. ಹುಡುಗಿ ಮೇಲಿನ ಮಹಡಿಯಲ್ಲಿ ನಿಂತು ನೋಡುತ್ತಿದ್ದಾಳೆ!

ಅದು ಕೊರಟಗೆರೆ ಪಟ್ಟಣದಲ್ಲಿರುವ ಸರ್ಕಾರಿ ಮೆಟ್ರಿಕ್‌ ನಂತರದ ಬಾಲಕಿಯರ ವಿದ್ಯಾರ್ಥಿನಿ ನಿಲಯ (Post Metric girls Hostel). ಎಸ್ಸೆಸ್ಸೆಲ್ಸಿ ಮುಗಿಸಿ ಪಿಯುಸಿ ಹಂತದಲ್ಲಿರುವ ವಿದ್ಯಾರ್ಥಿನಿಯರು ಈ ಹಾಸ್ಟೆಲ್‌ನಲ್ಲಿರುತ್ತಾರೆ. ಈ ಹಾಸ್ಟೆಲ್‌ಗೆ ಬಿಗಿ ಭದ್ರತೆ, ಸಿಸಿ ಕ್ಯಾಮೆರಾಗಳ ವ್ಯವಸ್ಥೆ, ವಾರ್ಡನ್‌ ಕಣ್ಣು ಎಲ್ಲವೂ ಇದೆ. ಆದರೆ, ಒಬ್ಬ ಬಾಲಕಿ ಮಾತ್ರ ಇದನ್ನೆಲ್ಲ ಬೇಧಿಸಿ ಹೊರಹೋಗಿದ್ದಾಳೆ. ಕಾವಲುಗಾರ ಇದ್ದರೂ ಕಣ್ತಪ್ಪಿಸಿ ಪರಾರಿಯಾಗಿದ್ದಾಳೆ!

ರಾತ್ರಿ 11.20ರ ಹೊತ್ತಿಗೆ ಈ ಘಟನೆ ನಡೆದಿದೆ. ಆವತ್ತು ರಾತ್ರಿ 11 ಗಂಟೆಯ ಹೊತ್ತಿಗೆ ಇಲ್ಲಿನ ಹಾಸ್ಟೆಲ್‌ ವಾರ್ಡನ್‌ ವರು ದಿನದ ಡ್ಯೂಟಿ ಮುಗಿಸಿಕೊಂಡು ಮನೆಗೆ ತೆರಳಿದ್ದರು. ಈ ಹಂತದಲ್ಲಿ ವಿದ್ಯಾರ್ಥಿನಿ ಹಾಸ್ಟೆಲ್‌ನ ಹೊರಾವರಣದಲ್ಲಿ ಯಾರೂ ಇಲ್ಲ ಎನ್ನುವುದನ್ನು ಖಾತರಿಪಡಿಸಿಕೊಂಡು ಮೆಲ್ಲನೆ ಮೊದಲ ಮಹಡಿಯಿಂದ ಕೆಳಗೆ ಇಳಿದಿದ್ದಾಳೆ. ಕೆಳಗಿನ ಮಹಡಿಯಲ್ಲೂ ಸ್ವಲ್ಪ ಹೊತ್ತು ನಿಂತು ಯಾರೂ ತನ್ನನ್ನು ಗಮನಿಸುತ್ತಿಲ್ಲ ಎನ್ನುವುದನ್ನು ಖಾತ್ರಿಪಡಿಸಿಕೊಂಡು ಗೇಟ್‌ನತ್ತ ಓಡಿದ್ದಾಳೆ. ಅಲ್ಲಿಂದ ಆಕೆ ಗೇಟನ್ನು ಹತ್ತಿ ರಸ್ತೆ ಬದಿಗೆ ಬಂದಿದ್ದಾಳೆ.

ಹುಡುಗಿ ಹಾಸ್ಟೆಲ್‌ನಿಂದ ಹೊರಗೆ ಬಂದು, ಗೇಟು ಹಾರಿ, ಕಾರು ಏರುವ ಸಿಸಿ ಟಿವಿ ದೃಶ್ಯಗಳು

ಅಷ್ಟು ಹೊತ್ತಿಗೆ ಅಲ್ಲೊಂದು ವಾಹನ ಅವಳಿಗಾಗಿಯೇ ಕಾದು ನಿಂತಂತೆ ನಿಂತಿತ್ತು. ಆಕೆ ಓಡಿ ಹೋಗಿ ಅದರಲ್ಲಿ ಕುಳಿತುಕೊಳ್ಳುತ್ತಾಳೆ. ಕೆಲವು ನಿಮಿಷಗಳ ಬಳಿಕ ಕಾರು ಅಲ್ಲಿಂದ ಹೊರಡುತ್ತದೆ.

ಇದಿಷ್ಟೂ ದೃಶ್ಯಗಳು ಹಾಸ್ಟೆಲ್‌ ಒಳಗಿನ ಕ್ಯಾಮೆರಾ ಮತ್ತು ಹಾಸ್ಟೆಲ್‌ ಗೇಟ್‌ಗೆ ಎದುರಾಗಿರುವ ಮನೆಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಆದರೆ, ಬೆಳಗ್ಗೆ ನೋಡಿದರೆ ಆಕೆ ಎಂದಿನಂತೆ ತನ್ನ ಕೋಣೆಯಲ್ಲೇ ಇದ್ದಳು. ಹೀಗಾಗಿ ಯಾರಿಗೂ ಯಾವ ಸಂಶಯವೂ ಬಂದಿರಲಿಲ್ಲ.

ಈ ನಡುವೆ, ಹಾಸ್ಟೆಲ್‌ನ ಸಿಸಿ ಟಿವಿ ಫೂಟೇಜ್‌ಗಳನ್ನು ಚೆಕ್‌ ಮಾಡಿದಾಗ ಒಬ್ಬ ಹುಡುಗಿಯ ಚಲನವಲನದ ಬಗ್ಗೆ ಸಂಶಯ ಬಂದಿತ್ತು. ಅದನ್ನು ಸೂಕ್ತವಾಗಿ ಪರಿಶೀಲಿಸಿದಾಗ ಹುಡುಗಿಯ ಈ ಸಾಹಸ ಬಯಲಿಗೆ ಬಂದಿತ್ತು.

ಬಾಲಕಿ ಮೇಲಿನ ಮಹಡಿಯಿಂದ ಇಳಿದು ಗೇಟ್‌ ಹಾರಿ ಪರಾಗಿಯಾದ ಜಾಗದಲ್ಲಿ ತಪಾಸಣೆ

ಹಾಗಿದ್ದರೆ ಕರೆದುಕೊಂಡು ಹೋದವನು ಯಾರು?

ಹಾಸ್ಟೆಲ್‌ನಿಂದ ಹುಡುಗಿಯೊಬ್ಬಳು ಹೀಗೆ ರಾತ್ರೋರಾತ್ರಿ ಪರಾರಿಯಾಗಿ ಬೆಳಗಾಗುವ ಮುಂಚೆ ಮರಳಿಬಂದು ಕೋಣೆ ಸೇರಿಕೊಂಡಿದ್ದಾಳೆ ಎಂಬ ಅಂಶವನ್ನು ಗಂಭೀರವಾಗಿ ಪರಿಗಣಿಸಿದ ಹಾಸ್ಟೆಲ್‌ ಸಿಬ್ಬಂದಿ ಮತ್ತು ಅಧಿಕಾರಿಗಳು ಈ ಬಗ್ಗೆ ಕೊರಟಗೆರೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಪೊಲೀಸರು ಸಿಸಿ ಟಿವಿ ಫೂಟೇಜ್‌ಗಳನ್ನು ಪರಿಶೀಲಿಸಿ ಬಾಲಕಿಯನ್ನು ವಿಚಾರಣೆಗ ಒಳಪಡಿಸಿದಾಗ ಇದೊಂದು ಮಧ್ಯರಾತ್ರಿಯ ಖುಷಿಗಾಗಿ ನಡೆದ ಎಸ್ಕೇಪ್‌ ಎನ್ನುವುದು ಬಯಲಾಯಿತು.

ಹುಡುಗಿಯನ್ನು ರಾತ್ರೋರಾತ್ರಿ ಹಾಸ್ಟೆಲ್‌ನಿಂದ ಹೊರಬರುವಂತೆ ಮಾಡಿದ ಕಿಲಾಡಿ ಆರ್ಯಗೌಡ

ಯಾರಿವನು ಟಾಟಾ ಏಸ್‌ ರೋಮಿಯೋ?

ಸಿಸಿಟಿವಿ ಫೂಟೇಜ್‌ಗಳನ್ನು ಗಮನಿಸಿದ ಪೊಲೀಸರಿಗೆ ಆಕೆ ಹಾಸ್ಟೆಲ್‌ ಗೇಟ್‌ ಹತ್ತಿ ರಸ್ತೆಗೆ ಬಂದ ಬಳಿಕ ಅವಳಿಗಾಗಿ ಕಾದಿದ್ದ ಒಂದು ಟಾಟಾ ಏಸ್‌ ವಾಹನದಲ್ಲಿ ಪರಾರಿಯಾಗಿದ್ದು ತಿಳಿದುಬಂತು. ಹುಡುಗಿಯನ್ನು ವಿಚಾರಿಸಿದಾಗ ಆಕೆ ತನ್ನನ್ನು ಕರೆದುಕೊಂದು ಹೋದವನು ಆರ್ಯಗೌಡ ಎಂದು ಒಪ್ಪಿಕೊಂಡಿದ್ದಾಳೆ.

ಇದನ್ನೂ ಓದಿ: Drowned in River : ಹೆತ್ತವರ ಜತೆ ಪ್ರವಾಸಕ್ಕೆ ಹೋಗಿದ್ದ 13ರ ಬಾಲಕಿ ಕಾವೇರಿ ನದಿಯಲ್ಲಿ ಜಲಸಮಾಧಿ

ಪೊಲೀಸರು ಇದೀಗ ಕೊರಟಗೆರೆ ತಾಲೂಕಿನ ದುಗ್ಗೇನಹಳ್ಳಿ ಗ್ರಾಮದ ಆರ್ಯಗೌಡನನ್ನು ಬಂಧಿಸಿದ್ದಾರೆ. ಆತನನ್ನು ಹಾಸ್ಟೆಲ್‌ಗೆ ಕರೆದುಕೊಂಡು ಬಂದು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಆತ ಆಕೆಯನ್ನು ರಾತ್ರಿ ಇಡೀ ರೊಮ್ಯಾನ್ಸ್‌ ಮಾಡುವ ಆಸೆಯೊಂದಿಗೆ ಕರೆದುಕೊಂಡು ಹೋಗಿದ್ದ ಎನ್ನುವುದು ಬೆಳಕಿಗೆ ಬಂದಿದೆ. ಕಾಲೇಜಿಗೆ ಹೋಗುವ ಸಂದರ್ಭದಲ್ಲಿ ಅವರಿಬ್ಬರಿಗೆ ಪರಿಚಯವಾಗಿದ್ದು, ಬಾಲಕಿಯನ್ನು ಪುಸಲಾಯಿಸಿ ಆತ ಮಧ್ಯರಾತ್ರಿ ರೌಂಡ್ಸ್‌ಗೆ ಕರೆದುಕೊಂಡು ಹೋಗಿದ್ದನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ.

Exit mobile version