ಬೆಂಗಳೂರು: ಪ್ರೀ ಸ್ಕೂಲ್ (ನರ್ಸರಿ) 3ನೇ ಮಹಡಿಯಿಂದ ಬಿದ್ದು ಬಾಲಕಿಗೆ ಗಂಭೀರ ಗಾಯಗಳಾಗಿರುವ ಘಟನೆ ನಗರದ (Bangalore News) ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸದ್ಯ ಬಾಲಕಿಯ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದಾಳೆ.
ಜಿನಾ ಅನ್ನಾ ಜಿಟೋ (4) ಗಾಯಾಳು ಬಾಲಕಿ. ಜನವರಿ 22ರಂದು ಮಧ್ಯಾಹ್ನ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಚೆಲ್ಲಕೆರೆಯ ಡೆಲ್ಲಿ ಪ್ರೀ ಸ್ಕೂಲ್‌ನಲ್ಲಿ ಘಟನೆ ನಡೆದಿದೆ. ಮಹಡಿಯಿಂದ ಬಿದ್ದ ಹಿನ್ನೆಲೆಯಲ್ಲಿ ಬಾಲಕಿಯ ತಲೆಗೆ ತೀವ್ರ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಬಾಲಕಿಗೆ ಚಿಕಿತ್ಸೆಗೆ ಮುಂದುವರಿದಿದೆ.
ಮೂಲತಃ ಕೇರಳದ ನಿವಾಸಿಗಳಾದ ಬಾಲಕಿಯ ತಂದೆ-ತಾಯಿ ಜಿಟೋ ಟಾಮಿ ಜೋಸೆಫ್ ಮತ್ತು ಬಿನಿಟೋ ಥಾಮಸ್ ಅವರು ಖಾಸಗಿ ಕಂಪೆನಿಯಲ್ಲಿ ಟೆಕ್ಕಿಗಳಾಗಿದ್ದಾರೆ. ಇವರು ಉದ್ಯೋಗದ ನಿಮಿತ್ತ ಬೆಂಗಳೂರಿಗೆ ಬಂದು ನೆಲೆಸಿದ್ದಾರೆ.
ಪ್ರೀ ಸ್ಕೂಲ್ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಘಟನೆ ನಡೆದಿದೆ ಎಂದು ಪಾಲಕರು ದೂರು ನೀಡಿದ್ದಾರೆ. ಮಗು ಸ್ಥಿತಿ ಚಿಂತಾಜನಕವಾಗಿದ್ದರೂ ಹೆಣ್ಣೂರು ಪೊಲೀಸರು ಎನ್‌ಸಿಆರ್ (ಗಂಭೀರವಲ್ಲದ ಪ್ರಕರಣ) ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ | Murder Case : ಶಿಕ್ಷಕಿ ದೀಪಿಕಾ ಹಂತಕ ಅರೆಸ್ಟ್; ʻಸಂಗʼ ತೊರೆದ ಸಿಟ್ಟಿನಿಂದ ʻಅಕ್ಕʼನನ್ನೇ ಕೊಂದ!
Self Harming : 29ನೇ ಮಹಡಿಯಿಂದ ಜಿಗಿದು ಪ್ರಾಣ ಕಳೆದುಕೊಂಡ 12 ವರ್ಷದ ಬಾಲಕಿ; ಏನಾಗಿತ್ತು ಆಕೆಗೆ?
ಬೆಂಗಳೂರು: ಈ ಭೀಕರ ಘಟನೆಯನ್ನು ಊಹಿಸಿಕೊಂಡರೇ ಮೈ ಜುಮ್ಮೆನ್ನುತ್ತದೆ. ಇನ್ನೂ 12 ವರ್ಷದ ಬಾಲಕಿ (12 year old Girl) ಅವಳು. ಅಪ್ಪ ಸಾಫ್ಟ್‌ವೇರ್ ಎಂಜಿನಿಯರ್, ಅಮ್ಮ ಗೃಹಿಣಿ. ಹೊರಗಿನಿಂದ ನೋಡುವಾಗ ಯಾವ ತೊಂದರೆಯೂ ಇಲ್ಲದ ನೆಮ್ಮದಿಯ ಬದುಕು. ಆದರೆ, ಇದ್ಯಾವುದೂ ಬೇಡ ಎಂದು ಆ ಬಾಲಕಿ 29ನೇ ಮಹಡಿಯಿಂದ (Girl Ends life by jumping from 12th floor of apartment) ಬಿದ್ದು ಪ್ರಾಣ ಕಳೆದುಕೊಂಡಿದ್ದಾಳೆ. ಛಿದ್ರ ಛಿದ್ರವಾಗಿರುವ ಆಕೆಯ ಮೃತದೇಹವನ್ನು ನೋಡಿ ಆ ತಾಯಿ-ತಂದೆಯ ಪರಿಸ್ಥಿತಿ ಹೇಗಿರಬೇಡ?
ಇಂಥಹುದೊಂದು ಭಯಾನಕ ಘಟನೆ ನಡೆದಿರುವುದು ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ. ಬೇಗೂರು ಬಳಿಯ ಅಪಾರ್ಟ್‌ಮೆಂಟ್‌ನಲ್ಲಿ ತಂದೆ-ತಾಯಿ ಜೊತೆ ವಾಸವಿದ್ದ 29ನೇ ಮಹಡಿಯಿಂದ ಬಿದ್ದು ಪ್ರಾಣ ಕಳೆದುಕೊಂಡಿದ್ದಾಳೆ.
ಖಾಸಗಿ ಶಾಲೆಯಲ್ಲಿ 6ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿ ಬೆಳಗ್ಗೆ ಐದು ಗಂಟೆಯ ಹೊತ್ತಿಗೆ ಈ ಕೃತ್ಯ ಮಾಡಿಕೊಂಡಿದ್ದಾಳೆ. ಆಕೆಯ ತಂದೆ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದು ತಾಯಿ ಮನೆ ವಾರ್ತೆ ಮಾಡುತ್ತಾ ಮಗಳನ್ನು ಚೆನ್ನಾಗಿ ನೋಡಿಕೊಂಡಿದ್ದರು. ಬೃಹತ್ ಅಪಾರ್ಟ್‌ಮೆಂಟ್‌ನ 29ನೇ ಮಹಡಿಯಲ್ಲಿ ವಾಸವಾಗಿದ್ದಾರೆ ಎಂದರೆ ಅವರ ಆರ್ಥಿಕ ಸ್ಥಿತಿಯನ್ನು ಅಂದಾಜಿಸಬಹುದು.
ಮಗಳನ್ನು ಚೆನ್ನಾಗಿಯೇ ನೋಡಿಕೊಂಡಿದ್ದರು. ಮಂಗಳವಾರ ರಾತ್ರಿ ಎಂದಿನಂತೆ ಮಗಳು ಮಲಗಿದ್ದಳು. ಬೆಳಗ್ಗೆ 4.30ರ ಹೊತ್ತಿಗೆ ಆಕೆ ಎದ್ದು ಹಾಲ್‌ಗೆ ಬಂದಿದ್ದಳು. ಆಗ ಅಮ್ಮನಿಗೂ ಎಚ್ಚರವಾಗಿ ಆಕೆ ಏನಾಯ್ತು ಅಂತ ಕೇಳಿದ್ದರು. ಆದರೆ ಆಕೆ ಸರಿಯಾಗಿ ಉತ್ತರ ಕೊಡದೆ ಮತ್ತೆ ತನ್ನ ಕೋಣೆಗೆ ಹೋಗಿ ಮಲಗಿದ್ದಳು.
ಇದನ್ನೂ ಓದಿ | Murder Case : ಬೆಂಗಳೂರಿನಲ್ಲಿ ರೌಡಿ ಶೀಟರ್ ಕೊಲೆ; ಮನೆ ಹೊರಗಡೆ ಮಲಗಿದಲ್ಲೇ ಮರ್ಡರ್
ಆದರೆ, ಬೆಳಗ್ಗೆ ಐದು ಗಂಟೆಯ ಹೊತ್ತಿಗೆ ಆಗಬಾರದ ಘಟನೆ ನಡೆದೇ ಹೋಗಿತ್ತು. ಬಾಲಕಿ ಮತ್ತೆ ಎದ್ದು ಬಂದು ತನ್ನ ಮನೆಯ ಬಾಲ್ಕನಿಯಿಂದ ಕೆಳಗೆ ಹಾರಿದ್ದಳು. ಮೇಲಿನಿಂದ ಏನೋ ಬಿದ್ದ ಸದ್ದು ಕೇಳಿ ಅಲ್ಲಿನ ಸೆಕ್ಯುರಿಟಿ ಓಡಿ ಬಂದಿದ್ದ. ಬಂದು ನೋಡಿದರೆ ಬಾಲಕಿಯ ದೇಹ ಛಿದ್ರವಾಗಿತ್ತು. ಕೂಡಲೇ ಆತ ಪೋಷಕರಿಗೆ, ಅಪಾರ್ಟ್ಮೆಂಟ್ ಅಸೋಸಿಯೇಷನ್ ಗೆ ಮಾಹಿತಿ ನೀಡಿದ್ದ.
ಬಾಲಕಿಯ ಆತ್ಮಹತ್ಯೆಗೆ ಕಾರಣ ಏನು ಎನ್ನುವುದು ತಿಳಿದು ಬಂದಿಲ್ಲ.. ಹುಳಿಮಾವು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸದ್ಯ ತನಿಖೆ ಮುಂದುವರಿಸಿದ್ದಾರೆ.