Site icon Vistara News

ಕುಲಗಳ ನಡುವೆ ಬಡಿದಾಟ ಉಂಟುಮಾಡುವವರಿಗೆ ದೇವರು ಸದ್ಬುದ್ಧಿ ಕೊಡಲಿ: ಸಿದ್ದರಾಮಯ್ಯರನ್ನು ಟೀಕಿಸಿದ ಸಿಎಂ ಬೊಮ್ಮಾಯಿ

CM Bommai criticizes Siddaramaiah

#image_title

ಬೆಂಗಳೂರು: ಈ ಬಾರಿ ಜನತೆ ಸತ್ಯ, ನ್ಯಾಯ ಮತ್ತು ಸಮಾನತೆಗೆ ಆಶೀರ್ವಾದ ಮಾಡುತ್ತಾರೆ. ಅದೇ ಪಥದಲ್ಲಿ ಬಿಜೆಪಿ ನಡೆಯುತ್ತಿದ್ದು, ಬಿಜೆಪಿ ಜಯ ನಿಶ್ಚಿತ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಬಸವ ಜಯಂತಿಯ ಅಂಗವಾಗಿ ಚಾಲುಕ್ಯ ವೃತ್ತದ ಬಳಿಯಿರುವ ಬಸವಣ್ಣನವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ನವ ಕರ್ನಾಟಕ ನಿರ್ಮಾಣ ಮಾಡುವ ಸಂಕಲ್ಪವಿದೆ. ಕುಲಕುಲಗಳಲ್ಲಿ ವ್ಯತ್ಯಾಸವನ್ನು ಹಾಗೂ ಬಡಿದಾಟವನ್ನು ಉಂಟು ಮಾಡುವ ಶಕ್ತಿಗಳಿಗೆ ದೇವರು ಸದ್ಭುದ್ದಿ ಕೊಡಲಿ. ಚುನಾವಣೆಯಲ್ಲಿ ಜನರು ತೀರ್ಪು ನೀಡುತ್ತಾರೆ. ಅದನ್ನು ಎಲ್ಲರೂ ಒಪ್ಪಬೇಕು. ನಮ್ಮ ಧ್ಯೇಯ ಧೋರಣೆಗಳನ್ನು ಮುಂದಿಟ್ಟುಕೊಂಡು ನಮ್ಮ ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ಸಮಾನತೆಯ ಹರಿಕಾರ ಬಸವಣ್ಣ. ಸರ್ವರಿಗೂ ಆದರ್ಶ ಸಮಾನತೆಯ ವಿಚಾರವನ್ನು ಕಾರ್ಯರೂಪಕ್ಕೆ ತಂದಿರುವ ಕ್ರಾಂತಿಕಾರಿ ವ್ಯಕ್ತಿ. ಬಸವ ಚಿಂತನೆ, ತತ್ವ ಆದರ್ಶಗಳ ಮೇಲೆ, ಬಸವ ಪಥದಲ್ಲಿ ಆಡಳಿತ ಮಾಡಿದ್ದು ಮುಂದೆಯೂ ಬಸವ ಪಥದಲ್ಲಿ ಕರ್ನಾಟಕದ ತುಳಿತಕ್ಕೊಳಪಟ್ಟ ಸಮುದಾಯಗಳಿಂದ ಹಿಡಿದು ಎಲ್ಲಾ ದುಡಿಯುವ ಸಮುದಾಯಗಳಿಗೆ ಗೌರವ, ಮಾನ, ಸನ್ಮಾನ, ಆರ್ಥಿಕ, ಸಾಮಾಜಿಕ ಅಭಿವೃದ್ಧಿಯ ಧ್ಯೇಯವಿಟ್ಟುಕೊಂಡು ಚುನಾವಣಾ ಪ್ರಚಾರ ಮಾಡುತ್ತಿದೆ. ಕರ್ನಾಟಕದ ಮಹಾಜನತೆ ನಮಗೆ ಸಂಪೂರ್ಣ ಬೆಂಬಲ ನೀಡುವ ವಿಶ್ವಾಸವಿದೆ ಎಂದರು.

ಇದನ್ನೂ ಓದಿ: Karnataka Election: ಭಾನುವಾರ ರಾಜ್ಯಕ್ಕೆ ರಾಹುಲ್‌ ಗಾಂಧಿ; ಕೂಡಲಸಂಗಮದ ಬಸವ ಜಯಂತಿ, ವಿಜಯಪುರದ ರೋಡ್‌ ಶೋದಲ್ಲಿ ಭಾಗಿ

Exit mobile version