Site icon Vistara News

Gold Rate Today: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ 140 ರೂ. ಏರಿಕೆ; ಇಷ್ಟಿದೆ ದರ

Actress Radhika Narayan

Gold Rate Decreased 10 Rupees Per Gram In Bengaluru Today

ಬೆಂಗಳೂರು: ಇಸ್ರೇಲ್‌-ಪ್ಯಾಲೆಸ್ತೀನ್‌ ಯುದ್ಧ (Israel Palestine War) ಹಾಗೂ ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಉದ್ಯಾನ ನಗರಿ ಬೆಂಗಳೂರಿನಲ್ಲಿ ಭಾನುವಾರವೂ (ಅಕ್ಟೋಬರ್ 15) ಬಂಗಾರದ ಬೆಲೆಯಲ್ಲಿ (Gold Rate Today) ಭಾರಿ ಏರಿಕೆಯಾಗಿದೆ. ರಾಜ್ಯ ರಾಜಧಾನಿಯಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ 5,540 ರೂ. ಆಗಿದ್ದು, ಒಂದು ಗ್ರಾಂಗೆ 140 ರೂ. ಜಾಸ್ತಿಯಾದಂತಾಗಿದೆ. ಹಾಗೆಯೇ, 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ 6,044 ರೂ. ಆಗಿದ್ದು, ಒಂದೇ ದಿನದಲ್ಲಿ 153 ರೂ. ಏರಿಕೆಯಾಗಿದೆ.

ದಸರಾ, ದೀಪಾವಳಿ ಹಿನ್ನೆಲೆಯಲ್ಲಿ ಚಿನ್ನ ಖರೀದಿಸುವವರ ಸಂಖ್ಯೆ ಜಾಸ್ತಿ ಇದೆ. ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಚಿನ್ನದ ಬೆಲೆಯು ದಿನೇದಿನೆ ಜಾಸ್ತಿಯಾಗಿತ್ತು. ಶನಿವಾರವೂ (ಅಕ್ಟೋಬರ್‌ 15) ಚಿನ್ನದ ಬೆಲೆಯು 22 ಕ್ಯಾರಟ್‌ಗೆ 140 ರೂ. ಹಾಗೂ 24 ಕ್ಯಾರಟ್‌ಗೆ 153 ರೂ. ಏರಿಕೆಯಾಗಿತ್ತು. ಹಬ್ಬಗಳು ಸಮೀಪಿಸುತ್ತಿದ್ದಂತೆ ಚಿನ್ನದ ಬೆಲೆಯು ಇನ್ನಷ್ಟು ಜಾಸ್ತಿಯಾಗಲಿದೆ ಎಂದು ತಿಳಿದುಬಂದಿದೆ.

Actress Bhavana

ಭಾರತ ವಿಶ್ವದಲ್ಲಿಯೇ ಎರಡನೆಯ ಅತಿ ದೊಡ್ಡ ಬಂಗಾರದ ( Gold rate ) ಮಾರುಕಟ್ಟೆಯಾಗಿದೆ. ಚೀನಾ ಬಿಟ್ಟರೆ ಅತಿ ಹೆಚ್ಚು ಚಿನ್ನ ಕೊಳ್ಳುವ ದೇಶ ಜಗತ್ತಿನಲ್ಲಿ ಯಾವುದಾದರೂ ಇದ್ದರೆ ಅದು ಭಾರತ ಮಾತ್ರ. ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಜನ ಸಂಖ್ಯೆಯ ಹೆಚ್ಚಳ, ವಿವಾಹ ಸಮಾರಂಭಗಳ ಏರಿಕೆ, ಹಬ್ಬಗಳ ಸಂಭ್ರಮ, ಜನರ ಆದಾಯದಲ್ಲಿ ಏರಿಕೆ, ನಗರೀಕರಣ ಮೊದಲಾದ ಕಾರಣಗಳಿಂದ ಚಿನ್ನದ ಖರೀದಿ ಗಣನೀಯ ಏರಿಕೆಯಾಗುತ್ತಿದೆ. ಈ ಟ್ರೆಂಡ್‌ ಮತ್ತಷ್ಟು ಹೆಚ್ಚಳವಾಗಲಿದೆ ಎಂದು ವರ್ಲ್ಡ್‌ ಗೋಲ್ಡ್‌ ಕೌನ್ಸಿಲ್‌ ತನ್ನ ವರದಿಯಲ್ಲಿ ತಿಳಿಸಿದೆ. ಈ ವರದಿ ಹಲವು ಸ್ವಾರಸ್ಯಕರ ಅಂಶಗಳನ್ನು ಬಹಿರಂಗಪಡಿಸಿದೆ.

ಇದನ್ನೂ ಓದಿ: Hallmark Gold: ಚಿನ್ನದ ಮೇಲೆ ಹಾಲ್‌ಮಾರ್ಕ್‌ ಚಿಹ್ನೆ; ಖರೀದಿ ಮುನ್ನ ಈ ನೂತನ ದರ ತಿಳಿದಿರಲಿ

ಭಾರತದಿಂದ ಇತ್ತೀಚಿನ ವರ್ಷಗಳಲ್ಲಿ ಜ್ಯುವೆಲ್ಲರಿ ರಫ್ತು ಕೂಡ ಗಣನೀಯ ಏರಿಕೆಯಾಗುತ್ತಿದೆ. 2015ರಲ್ಲಿ 7.6 ಶತಕೋಟಿ ಡಾಲರ್‌ನಷ್ಟಿದ್ದ ಜ್ಯುವೆಲ್ಲರಿ ರಫ್ತು 2020ರಲ್ಲಿ ಕೋವಿಡ್-‌19 ಬರುವುದಕ್ಕೆ ಮುನ್ನ 12.4 ಶತಕೋಟಿ ಡಾಲರ್‌ಗೆ ಏರಿಕೆಯಾಗಿತ್ತು. ಭಾರತೀಯ ಜ್ಯುವೆಲ್ಲರಿಗಳನ್ನು ಹೊಸ ಮಾರುಕಟ್ಟೆಗೆ ರಫ್ತು ಮಾಡಬೇಕಾದ ಅಗತ್ಯವೂ ಇದೆ. ಈಗ ಜ್ಯುವೆಲ್ಲರಿ ರಫ್ತಿನ 90% ಪಾಲು ಕೂಡ ಕೇವಲ ಐದು ದೇಶಗಳಿಗೆ ಹೋಗುತ್ತಿದೆ.

Exit mobile version