ಬೆಂಗಳೂರು: 22 ಕ್ಯಾರಟ್ ಮತ್ತು 24 ಕ್ಯಾರಟ್ ಚಿನ್ನದ ಬೆಲೆಗಳಲ್ಲಿ (Gold Rate Today) ಮಂಗಳವಾರ ತಲಾ ₹10 ಇಳಿಕೆ ಆಗಿದೆ.
ಬೆಂಗಳೂರಿನಲ್ಲಿ ಇಂದು ಒಂದು ಗ್ರಾಂ 22 ಕ್ಯಾರಟ್ ಚಿನ್ನವನ್ನು ₹5,770ಕ್ಕೆ ಖರೀದಿಸಬಹುದು. ಎಂಟು ಗ್ರಾಂ ಬೆಲೆ ₹46,160 ಇದೆ. 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್ ಚಿನ್ನವನ್ನು ₹57,700 ಮತ್ತು ₹5,77,000 ದರದಲ್ಲಿ ಖರೀದಿಸಬಹುದು. ಒಂದು ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ ₹6,295 ಆಗಿದ್ದರೆ, ಎಂಟು ಗ್ರಾಂ ಬೆಲೆ ₹50,360 ಆಗಿದೆ. 10 ಗ್ರಾಂ ಮತ್ತು 100 ಗ್ರಾಂ 24 ಕ್ಯಾರಟ್ ಚಿನ್ನವನ್ನು ಖರೀದಿಸಲು ಕ್ರಮವಾಗಿ ₹62,950 ಮತ್ತು ₹6,29,500 ವೆಚ್ಚವಾಗಲಿದೆ.
ಒಂದು ಗ್ರಾಂ ಬೆಳ್ಳಿಯ ಬೆಲೆ ₹73.50, ಎಂಟು ಗ್ರಾಂ ₹588 ಮತ್ತು 10 ಗ್ರಾಂ ₹735ರಷ್ಟಿದೆ. 100 ಗ್ರಾಂಗೆ ಗ್ರಾಹಕರು ₹7,350 ಮತ್ತು 1 ಕಿಲೋಗ್ರಾಂಗೆ ₹ 73,500 ಪಾವತಿಸಬೇಕಿದೆ. ಇಲ್ಲಿ ನೀಡಲಾದ ದರಗಳು GST, TCS ಮತ್ತು ಇತರ ಲೆವಿಗಳನ್ನು ಒಳಗೊಂಡಿಲ್ಲ.
ನಗರ | 22 ಕ್ಯಾರಟ್ | 24 ಕ್ಯಾರಟ್ |
ದಿಲ್ಲಿ | 57,850 | 63,100 |
ಮುಂಬಯಿ | 57,700 | 62,950 |
ಬೆಂಗಳೂರು | 57,700 | 62,950 |
ಚೆನ್ನೈ | 58,200 | 63,490 |
ಮೊದಲ ಬಾರಿಗೆ ಚಿನ್ನದ ಆಭರಣವನ್ನು ಖರೀದಿಸುವಾಗ ಏನು ತಿಳಿದಿರಬೇಕು?
ನೀವು ಚಿನ್ನಕ್ಕಾಗಿ ಹಣವನ್ನು ಖರ್ಚು ಮಾಡಲು ಮುಂದಾಗುವ ಮೊದಲು ಅದರ ಬಗ್ಗೆ ಜ್ಞಾನವನ್ನು ಹೊಂದಿರುವುದು ಉತ್ತಮ. ಚಿನ್ನದಂತಹ ಅಮೂಲ್ಯ ವಸ್ತು ಹಾಗೂ ಹೂಡಿಕೆಗೆ ಸಂಬಂಧಿಸಿದ ವಸ್ತುವನ್ನು ಖರೀದಿಸುವ ಮೊದಲು ನೀವು ಪರಿಶೀಲಿಸಬೇಕಾದ ವಿಷಯಗಳು ಇಲ್ಲಿವೆ.
1) ಮೊದಲನೆಯದು ಶುದ್ಧತೆ. ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮಾರಾಟವಾಗುವ ಆಭರಣಗಳು 22 ಕ್ಯಾರೆಟ್ ಚಿನ್ನದ ಆಭರಣ. ಬೆಂಗಳೂರಿನಲ್ಲಿ ಆ ದಿನದ ಚಿನ್ನದ ದರ ಎಷ್ಟಿದೆ ಎಂಬುದನ್ನು ಮೊದಲು ಗಮನದಲ್ಲಿಟ್ಟುಕೊಳ್ಳಬೇಕು. ಬೆಂಗಳೂರಿನಲ್ಲಿ ಚಿನ್ನದ ದರಗಳು ಪ್ರತಿದಿನ ಬದಲಾಗುತ್ತಿರುತ್ತವೆ. ನಿಖರವಾದ ಮಾಹಿತಿ ನೀಡುವ ವೆಬ್‌ಸೈಟ್ ಅನ್ನು ಅವಲಂಬಿಸುವುದು ಉತ್ತಮ.
2) ನೀವು ಖರೀದಿಸುವ ಆಭರಣಗಳ ಮೇಲಿರುವ ಬಿಐಎಸ್ ಹಾಲ್ಮಾರ್ಕ್ ಅನ್ನು ಪರಿಶೀಲಿಸುವುದು ಬಹಳ ಮುಖ್ಯ. ಚಿನ್ನಾಭರಣ ಖರೀದಿಸುವಾಗ BIS ಹಾಲ್‌ಮಾರ್ಕ್ ಅನ್ನು ಪಡೆಯಲಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು. ಭಾರತ ಸರ್ಕಾರವು ಚಿನ್ನವು ಅದರ ಮೇಲೆ ನಮೂದಿಸಲಾದ ಕ್ಯಾರಟ್‌ಗಳಷ್ಟೇ ಶುದ್ಧವಾಗಿದೆ ಎಂದು ಆ ಮೂಲಕ ಪ್ರಮಾಣೀಕರಿಸುತ್ತದೆ.
3) ಚಿನ್ನಾಭರಣಕ್ಕೆ ಮೇಕಿಂಗ್ ಚಾರ್ಜ್ ಮತ್ತು ವೇಸ್ಟೇಜ್ ಚಾರ್ಜ್ ಎಂದು ಇರುತ್ತದೆ. ಇದನ್ನು ಪ್ರತಿ ಆಭರಣ ವ್ಯಾಪಾರಿಯೂ ವಿಧಿಸುತ್ತಾರೆ. ನೀವು ಆಭರಣ ವ್ಯಾಪಾರಿಯನ್ನು ಈ ಬಗ್ಗೆ ಕೇಳಿ ಪರಿಶೀಲಿಸುವುದು ಉತ್ತಮ. ಎಲ್ಲಾ ಆಭರಣಗಳಿಗೆ ಮೇಕಿಂಗ್ ಅಥವಾ ವೇಸ್ಟೇಜ್ ಶುಲ್ಕಗಳು ಒಂದೇ ಆಗಿರುತ್ತವೆ ಎಂಬುದನ್ನು ಗಮನಿಸಿ. ಎಷ್ಟು ಶುಲ್ಕ ವಿಧಿಸಲಾಗಿದೆ ಎಂಬುದನ್ನು ದಯವಿಟ್ಟು ಖಚಿತಪಡಿಸಿಕೊಳ್ಳಿ.
5) ನೀವು ದುಬಾರಿ ವಹಿವಾಟು ಮಾಡುತ್ತಿರುವುದರಿಂದ ಚಿನ್ನಾಭರಣದ ಅಸಲಿತನ ಖಚಿತಪಡಿಸಿಕೊಳ್ಳುವುದು ಉತ್ತಮ. ಯಾಕೆಂದರೆ ನೀವು ಖರೀದಿಸುತ್ತಿರುವುದು ಬಹುಕಾಲ ಉಳಿಯುವ, ಹೂಡಿಕೆ ಎಂದು ಪರಿಗಣಿಸಬಹುದಾದ ವಸ್ತು. ಎಲ್ಲೇ ಆಗಲಿ ಚಿನ್ನ ಖರೀದಿಸುವ ಮುನ್ನ ಗುಣಮಟ್ಟದ ಬಗ್ಗೆ ಗಮನ ಹರಿಸಬೇಕು. ಕೆಲವು ದಶಕಗಳ ಹಿಂದೆ, ಚಿನ್ನವನ್ನು ಖರೀದಿಸುವಾಗ ಸುಲಭವಾಗಿ ಮೋಸ ಹೋಗಬಹುದಾಗಿತ್ತು. ಆದರೆ ಇಂದು ಹೆಚ್ಚಿನ ಚಿನ್ನವು ಹಾಲ್ಮಾರ್ಕ್ ಆಗಿದೆ. ಪ್ರತಿಷ್ಠಿತ ಅಂಗಡಿಗಳಲ್ಲಿ ಈ ಬಗ್ಗೆ ಹೆಚ್ಚಿನ ಎಚ್ಚರ ಇರುತ್ತದೆ.