ಬೆಂಗಳೂರು: ರಾಜ್ಯ ಸರ್ಕಾರವು ಎಲ್ಲ 31 ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನು (District incharge secretary) ನೇಮಕ ಮಾಡಿ ಆದೇಶ ಹೊರಡಿಸಿದೆ.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಅವರಿಗೆ ವಹಿಸಿರುವ ಜಿಲ್ಲೆಗಳಿಗೆ ಭೇಟಿ ನೀಡಿ ಸರ್ಕಾರದ ಯೋಜನೆಗಳ ಬಗ್ಗೆ ಪರಿಶೀಲನೆ ನಡೆಸಬೇಕು, ಜಿಲ್ಲೆಯ ಅಭಿವೃದ್ಧಿ ಯೋಜನೆಗಳು ಹಾಗೂ ಜಿಲ್ಲೆ ಪರಿಸ್ಥಿತಿ ಬಗ್ಗೆ ಪರಿಶೀಲಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ವರದಿ ಸಲ್ಲಿಸಲು ಸೂಚನೆ ನೀಡಲಾಗಿದೆ. ಸರ್ಕಾರದ ಯೋಜನೆಗಳ ಅನುಷ್ಠಾನದ ಮೇಲ್ವಿಚಾರಣೆ ಇವರ ಪ್ರಮುಖ ಜವಾಬ್ದಾರಿ ಎಂದು ಸ್ಪಷ್ಟಪಡಿಸಲಾಗಿದೆ. ಹೆಚ್ಚಿನ ಅಧಿಕಾರಿಗಳು ಈ ಹಿಂದೆ ಆಯಾ ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಣೆ ಮಾಡಿದವರೇ ಆಗಿರುವುದು ವಿಶೇಷ.
ಯಾವ ಜಿಲ್ಲೆಗೆ ಯಾರು ಉಸ್ತುವಾರಿ ಕಾರ್ಯದರ್ಶಿ?
1.ಬೆಂಗಳೂರು ನಗರ: ಟಿ.ಕೆ. ಅನಿಲ್ ಕುಮಾರ್
2. ಬೆಂಗಳೂರು ಗ್ರಾಮಾಂತರ: ಸಲ್ಮಾ ಕೆ. ಫಾಹಿಂ
3. ರಾಮನಗರ: ವಿ. ರಶ್ಮಿ ಮಹೇಶ್
4.ಚಿತ್ರದುರ್ಗ: ಅಮಲಾನ್ ಆದಿತ್ಯ ಬಿಸ್ವಾಸ್
5.ಕೋಲಾರ: ಡಾ.ಏಕ್‌ರೂಪ್ ಕೌರ್
6.ಬೆಳಗಾವಿ: ಅಂಜುಂ ಪರ್ವೇಜ್
7.ಚಿಕ್ಕಬಳ್ಳಾಪುರ: ಡಾ.ಎನ್. ಮಂಜುಳ
8.ಶಿವಮೊಗ್ಗ: ಎಸ್.ಆರ್. ಉಮಾಶಂಕರ್
9.ದಾವಣಗೆರೆ: ಗುಂಜನ್ ಕೃಷ್ಣ
10. ಮೈಸೂರು: ಡಾ.ಎಸ್. ಸೆಲ್ವಕುಮಾರ್
11. ಮಂಡ್ಯ: ಡಾ. ಪಿ.ಸಿ. ಜಾಫರ್
12. ಚಾಮರಾಜನಗರ:ಮಂಜುನಾಥ್ ಪ್ರಸಾದ್
13.ಹಾಸನ: ಡಾ.ಎಂ.ಎನ್.ಅಜಯ್ ನಾಗಭೂಷಣ್
14.ಕೊಡಗು: ಡಾ.ಎನ್.ವಿ. ಪ್ರಸಾದ್
15.ಚಿಕ್ಕಮಗಳೂರು:ರಾಜೇಂದ್ರ ಕುಮಾರ್ ಕಟಾರಿಯಾ
16. ಉಡುಪಿ. ಡಾ.ಎಂ.ಟಿ. ರೇಜು
17.ದಕ್ಷಿಣ ಕನ್ನಡ: ಎಲ್.ಕೆ. ಅತೀಕ್
18. ತುಮಕೂರು: ಜಿ. ಸತ್ಯವತಿ
19.ಧಾರವಾಡ: ವಿ. ಅನ್ಬು ಕುಮಾರ್
20.ಗದಗ: ಸಿ. ಶಿಖಾ
21.ವಿಜಯಪುರ: ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ
22. ಉತ್ತರ ಕನ್ನಡ: ರಿತೇಶ್ ಕುಮಾರ್ ಸಿಂಗ್
23.ಬಾಗಲಕೋಟೆ: ಮೊಹಮ್ಮದ್ ಮೊಹ್ಸಿನ್
24.ಕಲಬುರಗಿ: ಪಂಕಜ್ ಕುಮಾರ್ ಪಾಂಡೇ
25. ಯಾದಗಿರಿ: ಮನೋಜ್ ಜೈನ್
26. ರಾಯಚೂರು: ಡಾ. ಜೆ. ರವಿಶಂಕರ್
27. ಕೊಪ್ಪಳ: ನವೀನ್ ರಾಜ್ ಸಿಂಗ್
28. ಬಳ್ಳಾರಿ: ಡಾ. ಕೆ.ವಿ ತ್ರಿಲೋಕ್ ಚಂದ್ರ ಜೈನ್
29. ಬೀದರ್: ಮೌನೀಶ್ ಮೌದ್ಗಿಲ್
30. ಹಾವೇರಿ: ಡಾ. ವಿಶಾಲ್ ಆರ್.
31. ವಿಜಯನಗರ: ಡಾ. ಕೆ.ಪಿ. ಮೋಹನ್ ರಾಜ್
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಜವಾಬ್ದಾರಿಗಳೇನು?
1.ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ನಡೆಸುವುದು.
2.ಸರ್ಕಾರವು ನೂತನವಾಗಿ ಘೋಷಣೆ ಮಾಡುವ ಯೋಜನೆಗಳ ಅನುಷ್ಟಾನದ ಪರಿಶೀಲನೆ.
3. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ವಿದ್ಯಾರ್ಥಿ ನಿಲಯಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಸುವ್ಯವಸ್ಥೆಗೊಳಿಸುವುದು ಹಾಗೂ ಬಾಡಿಗೆ ವಿದ್ಯಾರ್ಥಿ ನಿಲಯಗಳ ಕಟ್ಟಡ ನಿರ್ಮಾಣಕ್ಕಾಗಿ ಅಗತ್ಯತೆಗನುಗುಣವಾಗಿ ನಿವೇಶನಗಳನ್ನು ಒದಗಿಸಲು ಕ್ರಮವಹಿಸುವುದು.
4. ಆರೋಗ್ಯ ಸೇವೆಗಳ ಗುಣಮಟ್ಟವನ್ನು ಪರಿಶೀಲಿಸಲು ಆಗಾಗ್ಗೆ ಜಿಲ್ಲಾಸ್ಪತ್ರೆ ಹಾಗೂ ತಾಲ್ಲೂಕು ಆಸ್ಪತ್ರೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸುವುದು. ವೈದ್ಯರ ಅಥವಾ ಇತರೆ ನೌಕರರ ಕೊರತೆ ಇದ್ದಲ್ಲಿ ಅದನ್ನು ಸರಿಪಡಿಸುವ ಕುರಿತು ಕ್ರಮಕೈಗೊಳ್ಳುವುದು.
5. ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಶಾಲೆ ಕಾಲೇಜು ಹಾಗೂ ಐಟಿಐ ಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಅಧ್ಯಯಿಸಿ ಸೂಕ್ತ ಪರಿಹಾರ ಕ್ರಮ ಕೈಗೊಳ್ಳುವುದು.
6. ಶಾಲಾ ಕಟ್ಟಡ ದುರಸ್ತಿ, ಹೊಸ ಕಟ್ಟಡಗಳ ನಿರ್ಮಾಣ ಇತ್ಯಾದಿ ಕಾಮಗಾರಿಗಳನ್ನು ಪರಿಶೀಲಿಸುವುದು.
7. ಸ್ವಂತ ಕಟ್ಟಡ ಇಲ್ಲದಿರುವ ಅಂಗನವಾಡಿಗಳಿಗೆ ನಿವೇಶನವನ್ನು ಒದಗಿಸಲು ಹಾಗೂ ನಿರ್ಮಾಣ ಹಂತದಲ್ಲಿರುವ ಅಂಗನವಾಡಿ ಕಟ್ಟಡಗಳ ಕಾಮಗಾರಿಗಳನ್ನು ಪರಿಶೀಲಿಸುವುದು.
8. ಕರ್ನಾಟಕ ಶಾಸಕರ ಸ್ಥಳೀಯ ಪುದೇಶಾಭಿವೃದ್ಧಿ ಹಾಗೂ ಸಂಸತ್ ಸದಸ್ಯರ ಪ್ರದೇಶಾಭಿವೃದ್ಧಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಕಡ್ಡಾಯವಾಗಿ ಪರಿಶೀಲನೆ ನಡೆಸುವುದು.
9. ಆಯಾ ವರ್ಷದಲ್ಲಿ ಕನಿಷ್ಠ 2 ಗ್ರಾಮ ಸಭೆಗಳಲ್ಲಿ ಭಾಗವಹಿಸುವುದು.
10. ಗ್ರಾಮೀಣಾಭಿವೃದ್ಧಿ, ನಾಗರಾಭಿವೃದ್ಧಿ, ಇಂಧನ ಲೋಕೋಪಯೋಗಿ, ಕೃಷಿ జల ಸಂಪನ್ಮೂಲ, ತೋಟಗಾರಿಕೆ ಇಲಾಖೆಗಳಲ್ಲಿನ ಪುಮುಖ ಕಾರ್ಯಕ್ರಮಗಳಾದ ಕುಡಿಯುವ ನೀರು, ರಸ್ತೆಗಳು, ವಿದ್ಯುಚ್ಛಕ್ತಿ, ಮೇವು ಲಭ್ಯತೆ, ಬೀಜ ಮತ್ತು ರಸಗೊಬ್ಬರ, ಮಧ್ಯಾಹ್ನದ ಬಿಸಿಯೂಟ, ನರೇಗಾ, ಸಾಮಾಜಿಕ ಭದ್ರತೆಯಡಿ ನೀಡುತ್ತಿರುವ ಪಿಂಚಣಿ ಕಾರ್ಯಕ್ರಮಗಳ ಆರ್ಥಿಕ ಮತ್ತು ಭೌತಿಕ ಪ್ರಗತಿ ಪರಿಶೀಲನೆ ನಡೆಸುವುದು.
11. ಜಿಲ್ಲೆಯಲ್ಲಿನ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಯನ್ನು ಸುಧಾರಿಸಲು ಕ್ರಮ ವಹಿಸುವುದು.
12 ಮೋಜಣಿ ಮತ್ತು ಭೂದಾಖಲೆಗಳಿಗೆ ಸಂಬಂಧಿಸಿದ ಪುಕರಣಗಳನ್ನು ತ್ವರಿತ ಇತ್ಯರ್ಥಕ್ಕಾಗಿ ಸೂಕ್ತ ಪರಿಹಾರಗಳ ಬಗ್ಗೆ, ಕ್ರಮವಹಿಸುವುದು.
13.ಜಿಲ್ಲೆಗಳಲ್ಲಿನ ವಿವಿಧ ಇಲಾಖೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ತಪಾಸಣೆ ಕೈಗೊಂಡು ಉಲ್ಲಂಘನಗಳಾಗಿದ್ದಲ್ಲಿ ಶಿಸ್ತುಕ್ರಮದ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸುವುದು ಹಾಗೂ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳುವುದು.
14. ವಿಶೇಷ ಘಟಕ ಯೋಜನೆ (SCSP) ಮತ್ತು ಗಿರಿಜನ ಉಪಯೋಜನೆ (TSP) ಯೋಜನೆಗಳಡಿ ನಿಗಧಿಪಡಿಸಿರುವ ಅನುದಾನಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ಮತ್ತು ಕಾಮಗಾರಿಗಳನ್ನು ಪರಿಶೀಲಿಸುವುದು.
15. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಸಲ್ಲಿಸುವ ವರದಿಯನ್ನು ಸರ್ಕಾರದ ಅವರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರು ಪರಿಶೀಲಿಸುತ್ತಾರೆ.
ಇದನ್ನೂ ಓದಿ: Karnataka Politics : ಸಿದ್ದರಾಮಯ್ಯ ಟೀಮ್ ಡಿಕೆಶಿಯನ್ನು ಸನ್ಯಾಸಿ ಮಾಡಬಹುದೇ?: ಆರ್ ಅಶೋಕ್ ಗೇಲಿ