ರಾಮನಗರ: ನಗರದ ರೈಲ್ವೆ ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲಿನಿಂದ ಬೋಗಿಗಳು ಬೇರ್ಪಟ್ಟ ಘಟನೆ ಭಾನುವಾರ ರಾತ್ರಿ ನಡೆದಿದ್ದು, ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದೆ. ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ತೂತುಕುಡಿ ಎಕ್ಸ್‌ಪ್ರೆಸ್ ರೈಲು (Ramanagara News), ರಾಮನಗರದಲ್ಲಿ ನಿಲ್ಲಿಸಿ ಮತ್ತೆ ಮುಂದೆ ಸಾಗುವಾಗ ರೈಲಿನಿಂದ 6 ಬೋಗಿಗಳು ಬೇರ್ಪಟ್ಟಿವೆ. ಬೋಗಿಗಳು ಬೇರ್ಪಟ್ಟ ಹಿನ್ನೆಲೆಯಲ್ಲಿ ಕೆಲಕಾಲ ಪ್ರಯಾಣಿಕರು ಆತಂಕಕ್ಕೊಳಗಾದರು. ಕೂಡಲೇ ಎಚ್ಚೆತ್ತ ರೈಲ್ವೆ ಸಿಬ್ಬಂದಿ, ಬೋಗಿಗಳ ಜೋಡಣಾ ಕಾರ್ಯ ಮಾಡಿದರು. ಬಳಿಕ ಬೆಂಗಳೂರಿನತ್ತ ತೂತುಕುಡಿ ಎಕ್ಸ್‌ಪ್ರೆಸ್ ತೆರಳಿತು.
ಸರ್ಕಾರಿ ವೈದ್ಯ ಅಸ್ಪತ್ರೆಯಲ್ಲಿಯೇ ಆತ್ಮಹತ್ಯೆಗೆ ಶರಣು
ಬೆಂಗಳೂರು: ಸರ್ಕಾರಿ ವೈದ್ಯ ಅಸ್ಪತ್ರೆಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಯನಗರದಲ್ಲಿ ನಡೆದಿದೆ. ಡಾ.ಎಸ್.ರೇಣುಕಾನಂದ (43) ಮೃತ ವೈದ್ಯ. ಕುಟುಂಬಸ್ಥರಿಗೆ ಕ್ಷಮಿಸಿ, ನನ್ನ ಸಾವಿಗೆ ನಾನೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು, ಆಸ್ಪತ್ರೆಯಲ್ಲಿ ಫ್ಯಾನ್‌ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಜಯನಗರ ಆಸ್ಪತ್ರೆಯಲ್ಲಿ ರೇಣುಕಾನಂದ ಮಕ್ಕಳ ವೈದ್ಯರಾಗಿದ್ದರು. ವಿಶೇಷಚೇತನರಾದ ಇವರಿಗೆ ಸಕ್ಕರೆ ಕಾಯಿಲೆಯಿಂದ ಕಣ್ಣಿನ ಸಮಸ್ಯೆಯಿತ್ತು. ಕಣ್ಣಿನ ಸಮಸ್ಯೆ ಉಲ್ಬಣಿಸಿದ್ದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಇವರಿಗೆ ಪತ್ನಿ, ಮೂವರು ಮಕ್ಕಳಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಜಯನಗರ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಭಾನುವಾರ ಮಧ್ಯಾಹ್ನ ಹಲವು ಬಾರಿ ಪತ್ನಿ ಕರೆ ಮಾಡಿದರೂ ಕರೆ ಮಾಡಿದರೂ ವೈದ್ಯ ಕರೆ ಸ್ವೀಕರಿಸಿಲ್ಲ. ನಂತರ ಪತ್ನಿ ಗಾಬರಿಗೊಂಡು ಪತಿಯ ಸಹೋದ್ಯೋಗಿಗಳಿಗೆ ಕರೆ ಮಾಡಿದ್ದಾರೆ. ಆಗ ಸಹೋದ್ಯೋಗಿಗಳು ತೆರಳಿ ನೋಡಿದಾಗ ವೈದ್ಯ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ. ವೈದ್ಯರ ಪತ್ನಿ ಸಾಫ್ಟ್‌ವೇರ್ ಕಂಪನಿ ಉದ್ಯೋಗಿಯಾಗಿದ್ದು, ಇವರಿಗೆ ಇಬ್ಬರು ಮಕ್ಕಳು, ತಂದೆ-ತಾಯಿ, ಸೋದರಿ ಇದ್ದಾರೆ.
ಇದನ್ನೂ ಓದಿ | Karnataka Election 2023: ಗೋವಾದಿಂದ ಅಕ್ರಮ ಮದ್ಯ ಸಾಗಾಟಕ್ಕೆ ಯತ್ನ; ಮಾಲು ಸಮೇತ ಆರೋಪಿಯ ಬಂಧನ
ಪೋಲಿಯೋದಿಂದ ಬಾಲ್ಯದಿಂದಲೇ ಅಂಗವೈಕಲ್ಯತೆ ಹೊಂದಿದ್ದ ಡಾ.ಎಸ್.ರೇಣುಕಾನಂದ, ಪೋಲಿಯೋ ಮೆಟ್ಟಿನಿಂತು ವೈದ್ಯರಾಗಿದ್ದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಯನಗರ ಶವಾಗಾರದಿಂದ ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಸೋಮವಾರ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಲಿದ್ದಾರೆ.