Site icon Vistara News

ಬಿಸಿಯೂಟದಲ್ಲಿ ರಾಗಿ ಮುದ್ದೆ, ಜೋಳದ ರೊಟ್ಟಿ ನೀಡಲು ಸರ್ಕಾರ ಚಿಂತನೆ, ಕರಾವಳಿಯಲ್ಲಿ ಅಪಸ್ವರ

mid day meal ವಿಶೇಷ ಭೋಜನ ಶಾಲೆಗಾಗಿ ನಾವು ನೀವು ಕಾರ್ಯಕ್ರಮ

ಬೆಂಗಳೂರು: ರಾಜ್ಯ ಸರಕಾರ ಶೀಘ್ರವೇ ಶಾಲೆಗಳ ಬಿಸಿಯೂಟದಲ್ಲಿ ರಾಗಿ ಮುದ್ದೆ ಮತ್ತು ಜೋಳದ ರೊಟ್ಟಿ ನೀಡಲು ಚಿಂತನೆ ನಡೆಸಿದೆ. ಇದು ಶಾಲಾ ಮಕ್ಕಳಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ ಎಂದು ಪರಿಗಣಿಸಲಾಗಿದೆ. ಆದರೆ, ಇದರ ಬಗ್ಗೆ ಸಣ್ಣ ಮಟ್ಟಿನ ಅಪಸ್ವರವೂ ಕೇಳಿಬಂದಿದೆ.

ರಾಜ್ಯದಲ್ಲಿ 1 ರಿಂದ 10ನೇ ತರಗತಿ ಶಾಲಾ ವಿದ್ಯಾರ್ಥಿಗಳಿಗೆ ಪೌಷ್ಟಿಕಾಂಶದ ಆಹಾರ ನೀಡುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ. ಈ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಕೈಗೊಂಡು ಯೋಜನೆ ಆರಂಭಿಸಲು ಚಿಂತನೆ ನಡೆಸಲಾಗಿದೆ.

ಪ್ರಾದೇಶಿಕತೆಗೆ ಅನುಗುಣವಾಗಿ ಉತ್ತರ ಕರ್ನಾಟಕ ಭಾಗದ ಮಕ್ಕಳಿಗೆ ಜೋಳದ ರೊಟ್ಟಿ, ದಕ್ಷಿಣ ಕರ್ನಾಟಕ ಭಾಗದ ಮಕ್ಕಳಿಗೂ ರಾಗಿ ಮುದ್ದೆ ನೀಡುವುದು ಸರಕಾರ ಚಿಂತನೆ. ಇದು ಈ ಭಾಗದ ಸಹಜ ಮತ್ತು ಎಲ್ಲರೂ ಇಷ್ಟಪಡುವ ಆಹಾರವಾಗಿರುವುದರಿಂದ ಅದನ್ನೇ ನೀಡಲು ನಿರ್ಧರಿಸಲಾಗಿದೆ.

ಆದರೆ, ಉತ್ತರ ಕರ್ನಾಟಕಕ್ಕೆ ಜೋಳದ ರೋಟ್ಟಿ ಅಯಿತು, ದಕ್ಷಿಣ ಕರ್ನಾಟಕದ ಮಕ್ಕಳಿಗೆ ರಾಗಿ ಮುದ್ದೆ ಆಯಿತು. ಆದರೆ, ಕರಾವಳಿಗರಿಗೆ ಏನು ಎನ್ನುವ ಪ್ರಶ್ನೆಯನ್ನು ಕರಾವಳಿ ಭಾಗದ ಜನಪ್ರತಿನಿಧಿಗಳು ಕೇಳಿದ್ದಾರೆ. ಇದರ ಜತೆಗೆ ದಕ್ಷಿಣ ಕರ್ನಾಟಕದಲ್ಲೂ ರಾಗಿ ಮುದ್ದೆ ಹೊರತಾದ ಆಹಾರ ಪದ್ಧತಿಗಳು ಇರುವುದರಿಂದ ಇದು ಬೇಕೇ ಎಂಬ ಪ್ರಶ್ನೆಯನ್ನು ಕೇಳಲಾಗುತ್ತಿದೆ.

ಪ್ರಾದೇಶಿಕವಾದ ಆಹಾರವನ್ನು ಕೊಡುವುದಿದ್ದರೆ ಅಧ್ಯಯನ ಮಾಡಿ ಕೊಡಿ ಎನ್ನುವುದು ಆಯಾ ಭಾಗದ ಜನರ ಆಗ್ರಹ. ʻʻಮಕ್ಕಳ ಊಟದಲ್ಲಿ ಸಹ ಸಹ ರಾಜಕೀಯ ಮಾಡಬೇಡಿʼ ಎಂದು ಮನವಿ ಮಾಡಿರುವ ಕರಾವಳಿಯ ಜನರು, ʻʻರೊಟ್ಟಿ, ರಾಗಿ ಮುದ್ದೆ ನಮ್ಮ ಭಾಗದವರು ತಿನ್ನುವುದು ಕಡಿಮೆ. ಹಾಗಾಗಿ ಸರಕಾರ ಯೋಚಿಸಿ ಪ್ಲಾನ್‌ ಮಾಡುವುದು ಒಳಿತುʼ ಎಂದು ಸಲಹೆ ನೀಡಿದ್ದಾರೆ.

Exit mobile version