Site icon Vistara News

ದಲಿತರಿಗೊಬ್ಬ, ಮುಂದುವರಿದವರಿಗೊಬ್ಬ ಸಿಎಂ ಇರಲು ಸಾಧ್ಯವೇ: ಸಚಿವ ಗೋವಿಂದ ಕಾರಜೋಳ ಪ್ರಶ್ನೆ

karnataka-elections-‌congress will die when congressmen starts saying truth

ವಿಜಯಪುರ: ರಾಜ್ಯದಲ್ಲಿ ಈಗಿರುವ ಸಿಎಂ ಬದಲಾವಣೆಯಾಗಿ ದಲಿತ ಸಿಎಂ ಆಗುತ್ತಾರೆ ಎನ್ನುವ ಬಗ್ಗೆ ನನಗೆ ಗೊತ್ತಿಲ್ಲ. ಕೇವಲ ಊಹಾಪೋಹ ಸುದ್ದಿಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ದಲಿತರಿಗೊಬ್ಬ ಸಿಎಂ, ಮುಂದುವರಿದವರಿಗೊಬ್ಬ ಸಿಎಂ ಇರಲು ಸಾಧ್ಯವಿದೆಯಾ ಎಂದು ಸಚಿವ ಗೋವಿಂದ ಕಾರಜೋಳ ಪ್ರಶ್ನಿಸಿದ್ದಾರೆ.

ದಲಿತ ಸಿಎಂ ವಿಚಾರಕ್ಕೆ ನಾಗಠಾಣದಲ್ಲಿ ಭಾನುವಾರ ಪ್ರತಿಕ್ರಿಯೆ ನೀಡಿದ ಅವರು, ನನಗೆ ಗೊತ್ತಿರುವ ಹಾಗೆ ರಾಜ್ಯದ ಆರೂವರೆ ಕೋಟಿಗೊಬ್ಬ ಸಿಎಂ ಇರುತ್ತಾನೆ ಎಂದ ಅವರು, ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ವಿಸ್ತರಣೆ ಬಗ್ಗೆ ಹೆಚ್ಚಿನ ಮಾಹಿತಿ ನನಗೆ ಗೊತ್ತಿಲ್ಲ, ಮುಖ್ಯಮಂತ್ರಿಗಳು ಬಂದಾಗ ಕೇಳಿ ಎಂದು ಹೇಳಿದರು.

ಇದನ್ನೂ ಓದಿ | Weather Report | ರಾಜ್ಯದಲ್ಲಿ ಗುಡುಗು ಸಹಿತ ಭಾರಿ ಮಳೆ ಮುನ್ಸೂಚನೆ; ಆರೆಂಜ್‌ ಅಲರ್ಟ್‌ ಘೋಷಣೆ

ಕಾಂಗ್ರೆಸಿಗರು ವಿಶ್ವಾಸ ಕಳೆದುಕೊಂಡಿದ್ದಾರೆ: ಸವದಿ

ಬೆಳಗಾವಿ ಮೇಯರ್ ಎಲೆಕ್ಷನ್ ವಿಳಂಬದಿಂದಾಗಿ ಬಿಜೆಪಿ ಶಾಸಕರಿಗೆ ಗೌನ್ ಕೊಡ್ತೀವಿ ಎಂಬ ಸತೀಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಸತೀಶ್ ಜಾರಕಿಹೊಳಿಗೆ ಕಾನೂನು ಜ್ಞಾನ ಕೊರತೆ ಇರುವುದು ಕಾಣುತ್ತದೆ. ಸುಪ್ರೀಂ ಕೋರ್ಟ್ ಈಗಾಗಲೇ ಒಂದು ನಿರ್ದೇಶನ ಕೊಟ್ಟಿದೆ. ಬ್ಯಾಕ್ ವರ್ಡ್ ಕ್ಲಾಸ್ ರಿಸರ್ವೇಶನ್ ತೆಗೆದು ಹಾಕಿದೆ. ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿ, ಹಿಂದುಳಿದ ವರ್ಗಕ್ಕೆ ನ್ಯಾಯ ಕೊಡಿಸುವ ಪ್ರಯತ್ನದಲ್ಲಿದ್ದೇವೆ ಎಂದು ಸತೀಶ್ ಜಾರಕಿಹೊಳಿ ಹೇಳಿಕೆಗೆ ತಿರುಗೇಟು ನೀಡಿದರು.

ದೇಶದಲ್ಲಿ ಕಾಂಗ್ರೆಸಿಗರು ಸಂಪೂರ್ಣವಾಗಿ ಜನರ ವಿಶ್ವಾಸ ಕಳೆದುಕೊಂಡಿದ್ದಾರೆ. ಜನ ಅವರ ಮೇಲಿಟ್ಟಿರೋ ಪ್ರೀತಿ ಕಡಿಮೆಯಾಗಿದೆ. ಜನರ ದಿಕ್ಕು ಬೇರೆಡೆ ತಿರುಗಿಸಲು ಈ ರೀತಿ ಮಾತನಾಡುತ್ತಿದ್ದಾರೆ ಎಂದರು.

ಜಮಖಂಡಿ ಅಥವಾ ಬಬಲೇಶ್ವರ ಕ್ಷೇತ್ರದಿಂದ ಸ್ಪರ್ಧಿಸುವ ವಿಚಾರಕ್ಕೆ ನಾನೀಗ ವಿಧಾನಪರಿಷತ್ ಸದಸ್ಯನಿದ್ದೇನೆ. ಅದರ ಅವಧಿ ಇನ್ನೂ ಆರು ವರ್ಷವಿದೆ. ಪಕ್ಷ ಏನು ತೀರ್ಮಾನ ತೆಗೆದುಕೊಳ್ಳುತ್ತದೋ ಆ ತೀರ್ಮಾನಕ್ಕೆ ಬದ್ಧನಾಗಿ ನಡೆಯುತ್ತೇನೆ. ಪಕ್ಷ ಸೂಚನೆ ಕೊಟ್ಟರೆ ಬಬಲೇಶ್ವರದಿಂದ ಸ್ಪರ್ಧೆ ಮಾಡುತ್ತೇನೆ ಎಂದವರು ಹೇಳಿದರು.

ಬಬಲೇಶ್ವರ ಕರ್ನಾಟಕದಲ್ಲಿದೆ ತಾನೇ? ಪಾಕಿಸ್ತಾನದಲ್ಲಂತೂ ಇಲ್ಲ ಎಂದ ಅವರು, ಪಕ್ಷದ ಕೆಲಸ ಮಾಡುತ್ತಾ ಸಾಗುವ ಕಾರ್ಯ ನನ್ನದು. ಅದನ್ನು ಮಾಡುತ್ತೇನೆ. ಎಂಎಲ್‌ಸಿಯಾಗಿ ಮುಂದುವರಿ ಎಂದರೆ ಮುಂದುವರಿಯುತ್ತೇನೆ ಎಂದು ತಿಳಿಸಿದರು.

ಇದನ್ನೂ ಓದಿ | Heavy Rain | ರಾಜ್ಯದಲ್ಲಿ ಭಾರಿ ಮಳೆ, ಅಪಾರ ನಷ್ಟಕ್ಕೀಡಾದ ಬೆಳೆ

Exit mobile version