Site icon Vistara News

Govindraj Nagar Election Results : ಗೋವಿಂದರಾಜನಗರದಲ್ಲಿ ಕಾಂಗ್ರೆಸ್​ನ ಪ್ರಿಯಾ ಕೃಷ್ಣಗೆ ಜಯ

Govindraj Nagar Election Results winner priya krishna

#image_title

ಬೆಂಗಳೂರು: ನಗರದ ಹೃದಯಭಾಗದಲ್ಲಿರುವ ಮತ್ತೊಂದು ಕ್ಷೇತ್ರ ಗೋವಿಂದರಾಜನಗರ (Govindraj Nagar Election Results) . ಇಲ್ಲಿ ಕಾಂಗ್ರೆಸ್ ಪಕ್ಷದ ಪ್ರಿಯಾ ಕೃಷ್ಣ ಅವರು ಗೆಲುವು ಸಾಧಿಸಿದ್ದಾರೆ. ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಉಮೇಶ್​ ಶೆಟ್ಟಿ ವಿರುದ್ಧ ಗೆಲುವು ಸಾಧಿಸಿದ್ದಾರೆ. 2018ರಲ್ಲಿ ಈ ಕ್ಷೇತ್ರದಲ್ಲಿ ಮಾಜಿ ವಸತಿ ಸಚಿವ ಬಿಜೆಪಿಯ ವಿ. ಸೋಮಣ್ಣ ಅವರು ಗೆಲುವು ಸಾಧಿಸಿದ್ದರು. ಅವರು ಚಾಮರಾಜನಗರ ಹಾಗೂ ವರುಣ ಕ್ಷೇತ್ರಕ್ಕೆ ವಲಸೆ ಹೋದ ಕಾರಣ ಉಮೇಶ್​ ಶೆಟ್ಟಿ ಬಿಜೆಪಿಯಿಂದ ಟಿಕೆಟ್​ ಪಡೆದುಕೊಂಡಿದ್ದರು.

ಈ ಕ್ಷೇತ್ರ ಹಿಂದೆ ಬಿನ್ನಿಪೇಟೆ ಕ್ಷೇತ್ರ ವ್ಯಾಪ್ತಿಯಲ್ಲಿತ್ತು. ಈ ವೇಳೆ ವಿ ಸೋಮಣ್ಣ ಅವರು ಮೂರು ಬಾರಿ ಗೆಲುವು ಸಾಧಿಸಿದ್ದರು. 2008ರಲ್ಲಿ ಈ ಕ್ಷೇತ್ರ ಗೋವಿಂದರಾಜನಗರವಾಗಿ ಬದಲಾಯಿತು. ಈ ವೇಳೆಯೂ ಸೋಮಣ್ಣ ಅವರು ಕಾಂಗ್ರೆಸ್​​ನಿಂದ ಗೆದ್ದಿದ್ದರು. ಬಳಿಕ ಅವರು ಬಿಜೆಪಿ ಸೇರಿಕೊಂಡರು. ಅಂತೆಯೇ 2009ರಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್​​ನಿಂದ ಪ್ರಿಯಾಕೃಷ್ಣ ಅವರು ಗೆಲುವು ಸಾಧಿಸಿದ್ದರು. 2013ರಲ್ಲಿ ಮತ್ತೆ ಅವರೇ ವಿಜಯ ಸಾಧಿಸಿದ್ದರು. ಅದರೆ, 2018ರಲ್ಲಿ ಸೋಮಣ್ಣ ಬಿಜೆಪಿ ಮೂಲಕ ಕ್ಷೇತ್ರವನ್ನು ಮತ್ತೆ ತಮ್ಮ ತೆಕ್ಕೆಗೆ ತೆಗೆದುಕೊಂಡರು.

ಈ ಹಿಂದೆ 2018ರ ಚುನಾವಣೆಯಲ್ಲಿ ಸಚಿವ ವಿ ಸೋಮಣ್ಣ 79,135 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್ ಅಭ್ಯರ್ಥಿ ಪ್ರಿಯಕೃಷ್ಣ ಅವರು 67,760 ಮತ ಪಡೆದಿದ್ದರೆ, ಜೆಡಿಎಸ್‌ನ ನಾಗೇಂದ್ರ ಪ್ರಸಾದ್ ಅವರು ಬರೀ 7,090 ಮತಗಳನ್ನು ಪಡೆದಿದ್ದರು.

ಗೋವಿಂದರಾಜನಗೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,34,550 ಮತದಾರರು ಇದ್ದಾರೆ. ಇದರಲ್ಲಿ 56,000 ಒಕ್ಕಲಿಗರು, 18,000 ಲಿಂಗಾಯತರು, 13,000 ಬ್ರಾಹ್ಮಣ ಮತದಾರರು ಇದ್ದಾರೆ. ಉಳಿದಂತೆ ಒಬಿಸಿ 58,500, ಎಸ್ಸಿ, ಎಸ್ಟಿ 46,750 ಹಾಗೂ ಮುಸ್ಲಿಂ ಮತದಾರರು 24,000 ಮಂದಿ ಇದ್ದಾರೆ. ಜೊತೆಗೆ ಇತರೆ ವರ್ಗದ 15,600 ಮಂದಿ ಮತದಾರಿದ್ದಾರೆ.

Read more: Terdal Election Results: ಬಾಗಲಕೋಟೆಯಲ್ಲಿ ಬಿಜೆಪಿಯ ಪತಾಕೆ ಹಾರಿಸಿದ ಸಿದ್ದು ಸವದಿ

Exit mobile version