ಬೆಂಗಳೂರು: ಗೃಹ ಜ್ಯೋತಿ ನೋಂದಣಿಗೆ ಗ್ರಾಮ ಒನ್, ಕರ್ನಾಟಕ ಒನ್ ಹಾಗು ಬೆಂಗಳೂರು ಒನ್ ಕೇಂದ್ರಗಳಲ್ಲಿ ಸಾರ್ವಜನಿಕರಿಂದ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ದೂರುಗಳು ಕೇಳಿ ಬಂದಿದ್ದು, ಹಣ ವಸೂಲಿ ಮಾಡುವ ಕೇಂದ್ರಗಳ ವಿರುದ್ಧ ಕಠಿನ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಗೃಹ ಜ್ಯೋತಿ ನೋಂದಣಿ ಸಂಪೂರ್ಣ ಉಚಿತವಾಗಿದ್ದು, ಗ್ರಾಮ ಒನ್, ಕರ್ನಾಟಕ ಒನ್ ಹಾಗು ಬೆಂಗಳೂರು ಒನ್ ಕೇಂದ್ರಗಳಲ್ಲಿ ಸೇವಾ ಶುಲ್ಕ 20 ರೂ. ಮಾತ್ರ ವಿಧಿಸಲಾಗುತ್ತಿದೆ. ಸೇವಾ ಶುಲ್ಕದ ಹೊರತಾಗಿ ಹೆಚ್ಚಿನ ಹಣ ಕೇಳಿದರೆ ಸಾರ್ವಜನಿಕರು 1912 ಸಹಾಯವಾಣಿಗೆ ಕರೆ ಮಾಡಿ ದೂರು ನೀಡಲು ಕೋರಲಾಗಿದೆ. ಹಣ ವಸೂಲಿ ಮಾಡುವ ಕೇಂದ್ರಗಳ ವಿರುದ್ಧ ಸರ್ಕಾರ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಿದೆ ಎಂದು ಸರ್ಕಾರ ತಿಳಿಸಿದೆ.
ಇದನ್ನೂ ಓದಿ: Congress Guarantee: ಗೃಹಜ್ಯೋತಿಯಲ್ಲ ಇದು ಸುಡುಜ್ಯೋತಿ: ವಿದ್ಯುತ್ ದರ ಅರ್ಧ ಕಡಿಮೆ ಮಾಡಿ ಎಂದ ಎಚ್.ಡಿ. ಕುಮಾರಸ್ವಾಮಿ
ಈ ಕುರಿತು ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ. ಶಿವಕುಮಾರ್, ಸೇವಾಸಿಂಧು ಅರ್ಜಿ ಹಾಕಲು 200 ರೂ., 300 ರೂ. ಹಣ ಪಡೆಯುತ್ತಿದ್ದಾರೆ ಎಂಬ ದೂರು ಬಂದಿದೆ. ಅರ್ಜಿ ಉಚಿತವಾಗಿ ಹಾಕಬೇಕು. ನಾನು ಇಂಧನ ಸಚಿವರ ಕಡೆಯಿಂದ ಹೇಳಿಸುತ್ತೇನೆ. ಸರ್ಕಾರದಿಂದ ಒಂದು ಅರ್ಜಿಗೆ 22 ರೂಪಾಯಿ ಕೊಡ್ತಾ ಇದ್ದೇವೆ. ಲಂಚಮುಕ್ತ ಆಡಳಿತದ ನಮ್ಮದು ಎಂದಿದ್ದಾರೆ.