Site icon Vistara News

Govt Employees | 2023ರ ಸಾರ್ವತ್ರಿಕ ರಜೆ ಪಟ್ಟಿ ಪ್ರಕಟ: ಸರ್ಕಾರಿ ನೌಕರರಿಗೆ 98 ದಿನ ರಜೆ

govt-employee-holidays list for 2023

ಬೆಂಗಳೂರು: ಮುಂಬರುವ ಕ್ಯಾಲೆಂಡರ್‌ ವರ್ಷದಲ್ಲಿ ಸಾಂದರ್ಭಿಕ ರಜಾ ಪಟ್ಟಿಯನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದ್ದು, ರಾಜ್ಯ ಸರ್ಕಾರಿ ನೌಕರರಿಗೆ (Govt Employee) ವೈಯಕ್ತಿಕ ರಜೆಗಳನ್ನು ಹೊರತುಪಡಿಸಿ 99 ರಜಾ ದಿನಗಳನ್ನು ಘೋಷಿಸಲಾಗಿದೆ. ಇದರಲ್ಲಿ 19 ದಿನ ಸಾರ್ವತ್ರಿಕ ರಜಾ ದಿನಗಳಿವೆ.

ಜನವರಿ 26ರ ಗಣರಾಜ್ಯೋತ್ಸವದಿಂದ ಆರಂಭವಾಗುವ ರಜೆಗಳ ಪಟ್ಟಿಯು ಡಿಸೆಂಬರ್‌ 25ರ ಕ್ರಿಸ್‌ಮಸ್‌ವರೆಗೂ ಘೋಷಣೆ ಮಾಡಲಾಗಿದೆ.

ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರದಂತೆ ಒಟ್ಟು 24 ರಜೆಗಳು, 53 ಭಾನುವಾರಗಳು ರಜೆ ಇರಲಿವೆ. 19 ಸಾರ್ವತ್ರಿಕ ರಜೆಗಳ ಜತೆಗೆ 2 ಪರಿಮಿತ ರಜೆ ಪಡೆಯಬಹುದಾಗಿದೆ. ಒಟ್ಟು 99 ರಜೆಗಳನ್ನು ನೀಡಲಾಗಿದೆ. ವೈಯಕ್ತಿಕವಾಗಿ ಪಡೆಯಬಹುದಾದ ಸಾಮಾನ್ಯ ರಜೆಗಳು, ಅನಾರೋಗ್ಯ ರಜೆಗಳು ಈ ಪಟ್ಟಿಯಲ್ಲಿ ಸೇರ್ಪಡೆಯಾಗಿಲ್ಲ.

6 ರಜೆ ಲಾಸ್‌

2023ರಲ್ಲಿ ಎರಡನೇ ಮತ್ತು ನಾಲ್ಕನೇ ಶನಿವಾರ ಹಾಗೂ ಭಾನುವಾರ ಬಂದ ಹಬ್ಬ ಹರಿದಿನಗಳ ಕಾರಣಕ್ಕೆ 6 ರಜೆಗಳು ಕೈತಪ್ಪಿವೆ. ಜನವರಿ 15ರಂದು ಮಕರ ಸಂಕ್ರಾಂತಿಯು ಭಾನುವಾರ, ಏಪ್ರಿಲ್‌ 23ರಂದು ಬಸವ ಜಯಂತಿಯು ಭಾನುವಾರ, ನವೆಂಬರ್‌ 12ರಂದು ನರಕ ಚತುರ್ದಶಿ ಭಾನುವಾರ, ಅಕ್ಟೋಬರ್‌ 14ರಂದು ಮಹಾಲಯ ಅಮಾವಾಸ್ಯೆ ಎರಡನೇ ಶನಿವಾರ, ಏಪ್ರಿಲ್‌ 22ರಂದು ರಂಜಾನ್‌ ನಾಲ್ಕನೇ ಶನಿವಾರ ಹಾಗೂ ಅಕ್ಟೋಬರ್‌ 28ರ ನಾಲ್ಕನೇ ಶನಿವಾರ ರಜೆಗಳು ಸರ್ಕಾರಿ ನೌಕರರ ಕೈತಪ್ಪಿವೆ.

ಸಾರ್ವತ್ರಿಕ ರಜಾ ದಿನಗಳ ಪಟ್ಟಿ

ಕ್ರಮ.ಸಂ.ದಿನಾಂಕವಾರಗಳುರಜಾ ದಿನ
1.ಜನವರಿ 26ಗುರುವಾರಗಣರಾಜ್ಯೋತ್ಸವ
2.ಫೆಬ್ರವರಿ 18ಶನಿವಾರಮಹಾ ಶಿವರಾತ್ರಿ
3.ಮಾರ್ಚ್ 22ಬುಧವಾರಯುಗಾದಿ ಹಬ್ಬ
4.ಏಪ್ರಿಲ್‌ 3ಸೋಮವಾರಮಹಾವೀರ ಜಯಂತಿ
5.ಏಪ್ರಿಲ್‌ 7ಶುಕ್ರವಾರಗುಡ್‌ ಫ್ರೈಡೇ
6.ಏಪ್ರಿಲ್‌ 14ಶುಕ್ರವಾರಡಾ. ಬಿ.ಆರ್‌. ಅಂಬೇಡ್ಕರ್‌ ಜಯಂತಿ
7.ಮೇ 1ಸೋಮವಾರಕಾರ್ಮಿಕ ದಿನಾಚರಣೆ
8.ಜೂನ್‌ 29ಗುರುವಾರಬಕ್ರೀದ್‌
9.ಜುಲೈ 29ಶನಿವಾರಮೊಹರಂ ಕಡೇ ದಿನ
10.ಆಗಸ್ಟ್‌ 15ಮಂಗಳವಾರಸ್ವಾತಂತ್ರ ದಿನ
11.ಸೆಪ್ಟೆಂಬರ್‌ 18ಸೋಮವಾರವರಸಿದ್ಧಿ ವಿನಾಯಕ ವ್ರತ
12.ಸೆಪ್ಟೆಂಬರ್‌ 28ಗುರುವಾರಈದ್‌- ಮಿಲಾದ್‌
13.ಅಕ್ಟೋಬರ್‌ 2ಸೋಮವಾರಗಾಂಧಿ ಜಯಂತಿ
14.ಅಕ್ಟೋಬರ್‌ 23ಸೋಮವಾರಮಹಾನವಮಿ, ಆಯುಧ ಪೂಜೆ
15.ಅಕ್ಟೋಬರ್‌ 24ಮಂಗಳವಾರವಿಜಯದಶಮಿ
16.ನವೆಂಬರ್‌ 1ಬುಧವಾರಕನ್ನಡ ರಾಜ್ಯೋತ್ಸವ
17.ನವೆಂಬರ್‌ 14ಮಂಗಳವಾರಬಲಿಪಾಢ್ಯಮಿ, ದೀಪಾವಳಿ
18.ನವೆಂಬರ್‌ 30ಗುರುವಾರಕನಕದಾಸ ಜಯಂತಿ
19.ಡಿಸೆಂಬರ್‌ 25ಸೋಮವಾರಕ್ರಿಸ್‌ಮಸ್‌

Exit mobile version