ಬೆಂಗಳೂರು: ಸರ್ಕಾರಿ ನೌಕರರ ಜೊತೆ ಸೌಹಾರ್ದಯುತ ಸಭೆ ನಡೆದಿದ್ದು ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ.
ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಜೊತೆ ಸಭೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಹಿರಿಯ ಅಧಿಕಾರಿಗಳ ಜೊತೆ ಹಾಗೂ ನೌಕರರ ಸಂಘದವರ ಜೊತೆ ಸುದೀರ್ಘ ಚರ್ಚೆ ನಡೆಸಿದ್ದೇವೆ. ಅವರು ಹಲವಾರು ವಿಷಯ ಪ್ರಸ್ತಾಪ ಮಾಡಿದ್ದಾರೆ. ಸಾಕಷ್ಟು ವಿಷಯ ಚರ್ಚೆಯಾಗಿದೆ. ಅವರು ಯಾವುದಾದರೂ ಒಂದು ತೀರ್ಮಾನಕ್ಕೆ ಬಂದಮೇಲೆ ನಮ್ಮ ಹಣಕಾಸಿನ ನಿರ್ಧಾರ ತೆಗೆದುಕೊಳ್ಳಲು ಅನುಕೂಲವಾಗಲಿದೆ. ನಮ್ಮ ಮಾತುಕತೆಯ ಆಧಾರದ ಮೇಲೆ ಮಾತುಕತೆ ಸೌಹಾರ್ದಯುತವಾಗಿ ಮುಕ್ತಾಯವಾಗುವ ವಿಶ್ವಾಸವಿದೆ ಎಂದಿದ್ದಾರೆ.
ನೌಕರರು ಪದಾಧಿಕಾರಿಗಳ ಜೊತೆ ಚರ್ಚಿಸಿ ನಿರ್ಣಯ ತಿಳಿಸುವುದಾಗಿ ಹೇಳಿದ್ದಾರೆ. ಅವರ ನಿರ್ಣಯದ ಆಧಾರದ ಮೇಲೆ ನಾವು ನಿರ್ಣಯ ಕೈಗೊಳ್ಳುತ್ತೇವೆ. ವೇತನ ಆಯೋಗಕ್ಕೆ ಆದಷ್ಟು ಬೇಗ ಮಧ್ಯಂತರ ವರದಿ ನೀಡುವಂತೆ ಕೇಳಿದ್ದೇವೆ. ಆದಷ್ಟು ಬೇಗ ವರದಿ ಬರುವ ವಿಶ್ವಾಸ ಇದೆ ಎಂದು ಹೇಳಿದರು.
ಕೋವಿಡ್ ಸಮಯದಲ್ಲಿ ಸರ್ಕಾರ ನೌಕರರ ಸಂಬಳ ಕಡಿತ ಮಾಡಿಲ್ಲ. ಅಲ್ಲದೇ 24 ಗಂಟೆಯಲ್ಲಿ ಡಿಎ ಹೆಚ್ಚಳ ಮಾಡಿದ್ದೇವೆ. ಅದನ್ನು ಅವರು ಅಪ್ರಿಸಿಯೇಟ್ ಮಾಡಿದ್ದಾರೆ. ಮಾತುಕತೆಯ ಆಧಾರದಲ್ಲಿ ಅವರ ನಿರ್ಣಯದ ಆಧಾರದ ಮೇಲೆ ಸರ್ಕಾರ ಸೂಕ್ತ ನಿರ್ಣಯ ಕೈಗೊಳ್ಳಲಿದೆ ಎಂದರು.
ಇದನ್ನೂ ಓದಿ: Govt Employees Strike: ಬೊಮ್ಮಾಯಿ ಭರವಸೆಗೆ ಜಗ್ಗದ ನೌಕರರ ಸಂಘ, ಬುಧವಾರ ಮುಷ್ಕರ ನಿಶ್ಚಿತ; ಷಡಾಕ್ಷರಿ ಸ್ಪಷ್ಟೋಕ್ತಿ