Site icon Vistara News

Govt Holidays : 2024ರಲ್ಲಿ ಸರ್ಕಾರಿ ನೌಕರರಿಗೆ ಭರ್ಜರಿ ರಜೆ; ಇಲ್ಲಿದೆ ಸರ್ಕಾರಿ ರಜೆಗಳ ಪಟ್ಟಿ

List of general holidays for 2024 released

ಬೆಂಗಳೂರು: ಕರ್ನಾಟಕ ಸರ್ಕಾರವು 2024ನೇ ಸಾಲಿಗೆ ಮಂಜೂರು ಮಾಡಿರುವ ಸಾರ್ವತ್ರಿಕ ರಜಾ ದಿನಗಳ (Govt Holidays) ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ರಜಾ ಪಟ್ಟಿಯಲ್ಲಿ ಭಾನುವಾರಗಳಂದು ಬರುವ ಡಾ. ಬಿ.ಆರ್‌ ಅಂಬೇಡ್ಕರ್‌ ಜಯಂತಿ ಹಾಗೂ ಮಹಾವೀರ ಜಯಂತಿ, ಎರಡನೇ ಶನಿವಾರದಂದು ಬರುವ ವಿಜಯದಶಮಿ ರಜೆಯನ್ನು ಈ ಪಟ್ಟಿಯಲ್ಲಿ ನಮೂದಿಸಿಲ್ಲ.

ಸಾರ್ವತ್ರಿಕ ರಜಾ ದಿನಗಳಲ್ಲಿ ರಾಜ್ಯಾದ್ಯಂತ ಸರ್ಕಾರಿ ಕಚೇರಿಗಳು ಮುಚ್ಚಲ್ಪಡುತ್ತವೆ. ಕಚೇರಿಯ ಜರೂರು ಕೆಲಸವನ್ನು ವಿಲೇವಾರಿ ಮಾಡುವ ಬಗ್ಗೆ ಇಲಾಖಾ ಮುಖ್ಯಸ್ಥರು ಸೂಕ್ತ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಲಾಗಿದೆ. ಇನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿರುವ ಮುಸ್ಲಿಂ ಸಮುದಾಯದವರ ಹಬ್ಬಗಳು ನಿಗಧಿತ ದಿನಾಂಕದಂದು ಬೀಳದಿದ್ದರೆ, ಸರ್ಕಾರಿ ಸೇವೆಯಲ್ಲಿರುವ ಮುಸ್ಲಿಂ ಬಾಂಧವರಿಗೆ ನಿಗಧಿತ ರಜೆಗೆ ಬದಲಾಗಿ ಹಬ್ಬದ ದಿವಸ ರಜಾ ಮಂಜೂರು ಮಾಡಬಹುದು.

ಸೆ.9ರಂದು ಕೈಲ್‌ ಮೂಹರ್ತ, ಅ.17ರಂದು ತುಲಾ ಸಂಕ್ರಮಣ ಹಾಗೂ ಡಿ.14ರ ಹುತ್ತರಿ ಹಬ್ಬವನ್ನು ಆಚರಿಸಲು ಕೊಡುಗು ಜಿಲ್ಲೆಗ ಮಾತ್ರ ಅನ್ವಯವಾಗುವಂತೆ ಸ್ಥಳೀಯ ಸಾರ್ವತ್ರಿಕ ರಜೆಯನ್ನು ಸರ್ಕಾರ ಘೋಷಿಸಿದೆ.

ಇದನ್ನೂ ಓದಿ: Gold Rate Today: ಚಿನ್ನದ ಬೆಲೆಯಲ್ಲಿ ಏರಿಳಿತ ಇಲ್ಲ, ಬೆಳ್ಳಿಯ ಬೆಲೆಯೂ ಸ್ಥಿರ

ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಹೀಗಿದೆ

1) 15-1-2024- ಮಕರ ಸಂಕ್ರಾಂತಿ, ಉತ್ತರಾಯಣ ಪುಣ್ಯಕಾಲ
2) 26-1-2024- ಗಣರಾಜ್ಯೋತ್ಸವ
3) 08-3-2024- ಮಹಾಶಿವರಾತ್ರಿ
4) 29-3-2024- ಗುಡ್‌ಫ್ರೈಡೆ
5) 09-4-2024- ಯುಗಾದಿ ಹಬ್ಬ
6) 11-4-2024- ಖುತುಬ್‌-ಎ-ರಂಜಾನ್‌
7) 01-5-2024- ಕಾರ್ಮಿಕ ದಿನಚಾರಣೆ
8) 10-5-2024-ಬಸವ ಜಯಂತಿ ಹಾಗೂ ಅಕ್ಷಯ ತೃತೀಯ
9) 17-6-2024- ಬಕ್ರೀದ್‌
10) 17-7-2024-ಮೊಹರಂ ಕಡೇ ದಿನ
11) 15-8-2024-ಸ್ವಾತಂತ್ರ್ಯ ದಿನಾಚರಣೆ
12) 07-9-2024-ಗಣೇಶ ಚತುರ್ಥಿ
13) 16-9-2024- ಈದ್‌-ಮಿಲಾದ್‌
14) 02-10-2024- ಗಾಂಧಿ ಜಯಂತಿ/ಮಹಾಲಯ ಅಮವಾಸ್ಯೆ
15) 11-10-2024-ಮಹಾನವಮಿ, ಆಯುಧಪೂಜೆ
16) 17-10-2024-ಮಹರ್ಷಿ ವಾಲ್ಮೀಕಿ ಜಯಂತಿ
17) 31-10-2024-ನರಕ ಚತುರ್ದಶಿ
18) 01-11-2024- ಕನ್ನಡ ರಾಜ್ಯೋತ್ಸವ
19) 02-11-2024-ಬಲಿಪಾಡ್ಯಮಿ, ದೀಪಾವಳಿ
20) 18-11-2024-ಕನಕದಾಸ ಜಯಂತಿ
21) 25-12-2024- ಕ್ರಿಸ್‌ಮಸ್‌

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Exit mobile version