ಬೆಂಗಳೂರು: ಚುನಾವಣೆಗೆ ಮುನ್ನ ನೀಡಿದ್ದ ಗ್ಯಾರಂಟಿ ಘೋಷಣೆಗಳನ್ನು ಜಾರಿ ಮಾಡಬೇಕೆಂಬ ಒತ್ತಡ ಒಂದೆಡೆಯಾದರೆ, ಜಾರಿಗೆ ಮುನ್ನ ಯಾವ್ಯಾವ ಷರತ್ತುಗಳನ್ನು ವಿಧಿಸಬೇಕು ಎಂಬುದರ ಕುರಿತು ಸರ್ಕಾರ ತಲೆಕೆಡಿಸಿಕೊಂಡಿದೆ.
ಯೋಜನೆಗಳನ್ನು ಹಾಗೆಯೇ ಜಾರಿ ಮಾಡುವುದಕ್ಕೆ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಹಣ ಬೇಕಾಗುತ್ತದೆ. ಹಾಗೂ ಒಂದು ಸರ್ಕಾರಿ ಯೋಜನೆಯಲ್ಲಿ ಫಲಾನುಭವಿಯಾಗಿದ್ದವರು ಮತ್ತೊಂದರಲ್ಲೂ ಹಣ ಪಡೆಯುವ ಸಾಧ್ಯತೆ ಇರುತ್ತದೆ. ಇಂತಹದ್ದನ್ನು ತಪ್ಪಿಸಲು ಯಾವ ಮಾರ್ಗ ಅನುಸರಿಸಬೇಕುಎ ಎಂಬ ಕುರಿತು ಮಾರ್ಗಸೂಚಿ ಸಿದ್ಧಪಡಿಸಿಕೊಂಡು ಬರಲು ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಎರಡು ಯೋಜನೆಗಳು ಜೂನ್ ತಿಂಗಳಿಂದ ಜಾರಿ ಮಾಡಲು ನಿರ್ಧಾರ ಮಾಡಲಾಗಿದೆ ಎನ್ನಲಾಗಿದೆ. ಈಗಾಗಲೇ ಷರತ್ತು ಏನು ಹಾಕಬೇಕು ಎನ್ನುವ ಬಗ್ಗೆ ಮಾಹಿತಿ ಸಂಗ್ರಹ ಮಾಡಲು ಮುಂದಾಗಲಾಗಿದೆ. ಅಂಗನವಾಡಿ ಕಾರ್ಯಕರ್ತರೇ ಮನೆ ಯಾಜಮಾನಿಯನ್ನು ಗುರುತಿಸಬೇಕು, ಅದನ್ನ ತಹಸಿಲ್ದಾರರಿಗೆ ಮಾಹಿತಿ ನೀಡಬೇಕು. ತಹಸಿಲ್ದಾರರು ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮಾಹಿತಿ ಕೊಡಬೇಕು.
ಕಡ್ಡಾಯವಾಗಿ ಬಿಪಿಎಲ್ ಕಾರ್ಡ್ ಇರುವವರಿಗೆ ಮಾತ್ರ ಅನ್ವಯವಾಗಲಿದೆ. ಬಿಪಿಎಲ್ ಕಾರ್ಡ್ ಇದ್ದೂ ಈಗಾಗಲೇ ಸರ್ಕಾರದಿಂದ ಪೆನ್ಷನ್ ಪಡೆಯುತ್ತಿದ್ದರೆ ಅಂಥವರಿಗೆ ಹೊಸ ಯೋಜನೆ ಅನ್ವಯ ಆಗುವುದಿಲ್ಲ. ವಿಧವಾ ವೇತನ ಅಥವಾ ಅಂಗವೈಕಲ್ಯತೆಯ ವೇತನ ಪಡೆಯುತ್ತಿದ್ದರೆ ಅಂಥವರಿಗೆ ಸಿಗುವುದಿಲ್ಲ. ಸರ್ಕಾರಿ ನೌಕರಿಯಲ್ಲಿದ್ದರೆ ಅನ್ವಯ ಆಘುವುದಿಲ್ಲ ಎನ್ನಲಾಗುತ್ತಿದೆ.
ಯುವನಿಧಿ ಜಾರಿ ತಡವಾಗುವ ಸಾಧ್ಯತೆ ಇದೆ. ಯುವನಿಧಿ ಅಡಿ ಫಲಾನುಭವಿ ಗುರುತಿಸುವ ಟಾರ್ಗೆಟ್ ಉನ್ನತ ಶಿಕ್ಷಣ ಇಲಾಖೆಗೆ ನೀಡಲಾಗಿದೆ. ಈ ವರ್ಷ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳ ಬಗ್ಗೆ ಮಾಹಿತಿಯನ್ನು ಕೇಳಲಾಗಿದೆ. ಪ್ರತಿ ತಿಂಗಳು ಮೂರು ಸಾವಿರ ರೂಪಾಯಿ ಕೊಡುವ ಯೋಜನೆ ಇದಾಗಿದ್ದು, ಈ ಯೋಜನೆ ಅಡಿಯಲ್ಲಿ ಫಲಾನುಭವಿ ಆಗಲೂ ಕುಟುಂಬದಲ್ಲಿ ಬಿಪಿಎಲ್ ಕಾರ್ಡ್ ಇರಬೇಕು. ಇದರ ಜತೆಗೆ ಡಿಪ್ಲೊಮಾ ಪದವೀಧರರಿಗೆ ಮಾಸಿಕ ನಿರುದ್ಯೋಗ ಭತ್ಯೆ ನೀಡಲು ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಮಾಹಿತಿ ಕೇಳಲಾಗಿದೆ. ಈ ಭತ್ಯೆ ಪಡೆಯಲು ಪದವೀಧರ ಅಥವಾ ಡಿಪ್ಲೊಮಾ ಪದವೀಧರರ ತಂದೆ ಅಥವಾ ತಾಯಿ ಸರ್ಕಾರಿ ಉದ್ಯೋಗದಲ್ಲಿ ಇರಬಾರದು ಎಂಬ ಷರತ್ತನ್ನು ವಿಧೀಸುವ ಸಾಧಯತೆಯೂ ಇದೆ ಎನ್ನಲಾಗುತ್ತಿದೆ.
ಎಲ್ಲರಿಗೂ ಬಸ್ ಪಾಸ್ ಸಿಗಲ್ಲ?
ಬಸ್ ಪಾಸ್ ಫ್ರೀ ಎಂದು ಘೋಷಣೆ ಮಾಡಿದ್ದ ಕೈ ನಾಯಕರು ಇದೀಗ ಅನೇಖ ಷರತ್ತು ವಿಧೀಸಲು ಮುಂದಾಗಿದ್ದಾರೆ. ಒಂದು ವಾರದಿಂದ ರಾಜ್ಯಾದ್ಯಂತ ಬಸ್ ಟಿಕೆಟ್ ಖರೀದಿಯಲ್ಲಿ ಕಿರಿಕಿರಿ ಶುರುವಾಗಿದೆ. ಸಾರಿಗೆ ಇಲಾಖೆ ವ್ಯಾಪ್ತಿಗೆ ಈ ಹೊಣೆ ಬರಲಿದ್ದು, ಈ ಪಾಸ್ ನೀಡಲೂ ಬಿಪಿಎಲ್ ಕಾರ್ಡ್ ಕಡ್ಡಾಯ ಆಗುವ ಸಾಧ್ಯತೆಯಿದೆ. ಮಹಿಳೆಯರು ಕರ್ನಾಟಕದವರೇ ಆಗಿರಬೇಕು ಎಂದು ಈಗಾಗಲೆ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇದರ ಜತೆಗೆ, ಇಡೀ ರಾಜ್ಯದಲ್ಲಿ ಸಂಚರಿಸಲು ಉಚಿತ ನೀಡುವ ಬದಲಿಗೆ ತಮ್ಮ ವಿಳಾಸದಿಂದ ನಿರ್ದಿಷ್ಟ ಕಿಲೋಮೀಟರ್‌ವರೆಗೆ ಮಾತ್ರ ಉಚಿತ ಮಾಡಲು ಚಿಂತನೆ ನಡೆದಿದೆ. ಅದರಲ್ಲೂ ಸಾಮಾನ್ಯ ವೇಗಧೂತ (ಕೆಂಪು ಬಸ್) ಬಸ್‌ಗಳಲ್ಲಿ ಮಾತ್ರ ಇದು ಅನ್ವಯವಾಗಲಿದ್ದು, ವಿಳಾಸದಿಂದ 50 ಕಿಲೋಮೀಟರ್‌ವರೆಗೆ ಉಚಿತ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.
ಇದನ್ನೂ ಓದಿ: congress guarantee: ಗ್ಯಾರಂಟಿಗಳ ಅನುಷ್ಠಾನವು ಸಿದ್ದರಾಮಯ್ಯ ಚೆಕ್‌ಗೆ ಸಹಿ ಹಾಕುವಷ್ಟು ಸುಲಭ ಅಲ್ಲ: ಸಚಿವ ಡಾ. ಸುಧಾಕರ್