Site icon Vistara News

Self Harming : ಶಾಸಕ ಚಂದ್ರಪ್ಪ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಂಡ ಗ್ರಾಪಂ ನೌಕರ!

Self harming

ಚಿತ್ರದುರ್ಗ: ತನ್ನನ್ನು ವಿನಾಕಾರಣ ಗ್ರಾಮ ಪಂಚಾಯಿತಿ (Grama Panchayat) ನೌಕರಿಯಿಂದ ಅಮಾನತು ಮಾಡಿಸುವುದಾಗಿ ಶಾಸಕ ಎಂ. ಚಂದ್ರಪ್ಪ (MLA M Chandrappa) ಅವರು ಬೆದರಿಕೆ ಹಾಕುತ್ತಿದ್ದಾರೆ ಎಂದು ಅವರ ಹೆಸರನ್ನು ಉಲ್ಲೇಖಿಸಿ ಗ್ರಾಪಂ ನೌಕರರೊಬ್ಬರು ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾರೆ. ಈ ಬಗ್ಗೆ ಡೆತ್ ನೋಟ್‌ ಬರೆದಿಟ್ಟಿದ್ದು, ಶಾಸಕರ ಮೇಲೆ ಗಂಭೀರ ಆರೋಪವನ್ನು ಮಾಡಲಾಗಿದೆ.

ತಿಪ್ಪೇಸ್ವಾಮಿ ಆತ್ಮಹತ್ಯೆಗೆ ಶರಣಾದ ಗ್ರಾಮ ಪಂಚಾಯಿತಿಯ ಎಸ್‌ಡಿಎ ನೌಕರರಾಗಿದ್ದಾರೆ. ಬಿಜೆಪಿಯ ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ಅವರು ಕಿರುಕುಳ ನೀಡಿದ್ದಾಗಿ ಗಂಭೀರ ಆರೋಪ ಮಾಡಿದ್ದು, ಈ ಬಗ್ಗೆ ಡೆತ್‌ ನೋಟ್‌ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇದನ್ನೂ ಓದಿ: Karnataka Politics : ಮೇಲ್ಮನೆ ನಾಮನಿರ್ದೇಶನ; ಉಮಾಶ್ರೀ, ಸೀತಾರಾಂ, ಸುಧಾಮ್ ದಾಸ್ ಹೆಸರು ಫೈನಲ್

ಹೊಸದುರ್ಗ ತಾಲೂಕಿನ ಜಾನಕಲ್ ಗ್ರಾಮದಲ್ಲಿ (Janakal Village) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ತಿಪ್ಪೇಸ್ವಾಮಿ ಅವರು ಉಪ್ಪರಿಗೇನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಮಾಡುತ್ತಿದ್ದರು.

ಡೆತ್‌ನೋಟ್‌ನಲ್ಲೇನಿದೆ?

ವಿನಾಕಾರಣ ಶಾಸಕ ಎಂ. ಚಂದ್ರಪ್ಪ ಅವರು ನನ್ನನ್ನು ಸಸ್ಪೆಂಡ್ ಮಾಡಿಸ್ತೀನಿ ಎಂದು ಬೆದರಿಸಿದ್ದಾರೆ. ಅವರು ತಾಲೂಕು ಪಂಚಾಯಿತಿ ಇಒ ಮೂಲಕ ಒತ್ತಡ ಹಾಕುತ್ತಿದ್ದಾರೆ. ಎಸ್‌ಸಿಗಳಿಗೆ ಮಾತ್ರ ಕೆಲಸ ಮಾಡಿಕೊಡು ಎಂದು ಪಿಡಿಒ ಮೂಲಕ ಹಿಂಸೆ ಮಾಡುತ್ತಿದ್ದರು ಎಂದು ತಿಪ್ಪೇಸ್ವಾಮಿ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ.

30 ಜನರ ಹೆಸರು ಉಲ್ಲೇಖ

ಡೆತ್ ನೋಟ್‌ನಲ್ಲಿ ಬಿಜೆಪಿ ಶಾಸಕ ಎಂ. ಚಂದ್ರಪ್ಪ ಹೆಸರು ಮಾತ್ರವಲ್ಲದೆ, ಮೂವತ್ತು ಜನರ ಹೆಸರನ್ನು ಪ್ರಸ್ತಾಪ ಮಾಡಿದ್ದಾರೆನ್ನಲಾಗಿದೆ. ಉಪ್ಪರಿಗೇನಹಳ್ಳಿಯ ಮೋಹನ್ ಕುಮಾರ್, ಮೂರ್ತಿ, ಉಗ್ರಪ್ಪ, ರಾಜಪ್ಪ ಹಾಗೂ 30 ಜನ ಸ್ನೇಹಿತರಿಂದ ಬೆದರಿಕೆ ಬಂದಿದೆ. ತಮ್ಮನ್ನ ಬೆದರಿಸಿ ಖಾತೆ ಮಾಡಿಸಿಕೊಂಡಿದ್ದಾರೆ ಎಂದು ಉಲ್ಲೇಖ ಮಾಡಲಾಗಿದೆ.

Tippeswamy self Harming case death note

ಬೆದರಿಕೆ ಕರೆಗಳ ಬಗ್ಗೆ ಉಲ್ಲೇಖ

9449423143 ನಂಬರ್‌ನಿಂದ ಶಿವಮೂರ್ತಿ ಎಂದು ಹೇಳಿಕೊಂಡು ಒಬ್ಬಾತ ಕರೆ ಮಾಡಿದ್ದಾನೆ. 7760113201 ನಂಬರ್‌ನಿಂದ ಪ್ರಸನ್ನ ಎಂದು ಹೇಳಿಕೊಂಡು ಮತ್ತೊಬ್ಬ ಕರೆ ಮಾಡಿ ಬೆದರಿಕೆ ಒಡ್ಡಿದ್ದಾನೆ. ಖಾತೆ ಮಾಡಿಕೊಡುವಂತೆ ಹಲವರು ನನ್ನನ್ನು ಪೀಡಿಸುತ್ತಿದ್ದಾರೆ ಎಂದು ತಿಪ್ಪೇಸ್ವಾಮಿ ಅವರು ಡೆತ್ ನೋಟ್‌ನಲ್ಲಿ ಉಲ್ಲೇಖ ಮಾಡಿದ್ದಾರೆ.

ಇದನ್ನೂ ಓದಿ: Karnataka Politics : ರಾಜ್ಯ ಸರ್ಕಾರಕ್ಕೆ ಬಿಜೆಪಿ ಮೂರನೇ ಬಾಣ;‌ ಕೃಷಿ ನೀತಿ ವಿರುದ್ಧ ಜನಾಂದೋಲನ

ಈ ಕುರಿತು ತಾಲೂಕು ಪಂಚಾಯಿತಿ ಇಒ ಮೇಲೆ ಸೂಕ್ತ ತನಿಖೆಯಾಗಬೇಕು. ಲಿಂಗಾಯತರು ಕೆಲಸ ಮಾಡುವುದು ಕಷ್ಟವಾಗುತ್ತಿದೆ ತಿಪ್ಪೇಸ್ವಾಮಿ ಅಳಲು ತೋಡಿಕೊಂಡಿದ್ದಾರೆ. ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸತ್ಯಕ್ಕೆ ದೂರ ಎಂದ ಶಾಸಕ ಚಂದ್ರಪ್ಪ

ಈ ಬಗ್ಗೆ ಶಾಸಕ ಚಂದ್ರಪ್ಪ ಸ್ಪಷ್ಟೀಕರಣ ನೀಡಿದ್ದು, ತಮಗೂ ಈ ಪ್ರಕರಣಕ್ಕೂ ಸಂಬಂಧವೇ ಇಲ್ಲ. ನಾನು ಆತನನ್ನು ನೋಡಿಯೇ ಇಲ್ಲ. ಒಳ್ಳೆ ಹುಡುಗ ಎಂದು ಕೇಳಿದ್ದೇನೆ. ಯಾವ ಒತ್ತಡವನ್ನೂ ನಾನು ಹಾಕಿಲ್ಲ ಎಂದು ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.

Exit mobile version