Site icon Vistara News

Murder Case: ಮಾಲೂರಿನಲ್ಲಿ ಗ್ರಾಪಂ ಸದಸ್ಯನ ಬರ್ಬರ ಕೊಲೆ

Gram Panchayat member Anil

ಕೋಲಾರ: ಗ್ರಾಮ ಪಂಚಾಯಿತಿ ಸದಸ್ಯನನ್ನು ಮಚ್ಚಿನಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಜಿಲ್ಲೆ ಮಾಲೂರು ತಾಲೂಕಿನ ಕೋಡಿಹಳ್ಳಿ ಕ್ರಾಸ್ ಬಳಿ ನಡೆದಿದೆ. ಮಿಣಸಂದ್ರ ಗ್ರಾಪಂ ಸದಸ್ಯ ಅನಿಲ್ (40) ಮೃತ. ಇವರು ಕಾಂಗ್ರೆಸ್ ಬೆಂಬಲಿಗರಾಗಿದ್ದು, ಕೊಲೆಗೆ (Murder Case) ನಿಖರ ಕಾರಣ ತಿಳಿದುಬಂದಿಲ್ಲ ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಈಜಲು ಹೋಗಿ ಇಬ್ಬರು ಯುವಕರು ನೀರು ಪಾಲು

ಬೀದರ್: ಈಜಲು ಹೋಗಿ ಇಬ್ಬರು ಯುವಕರು ನೀರು ಪಾಲಾಗಿರುವ ಘಟನೆ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಪತ್ನಾಪುರ ಗ್ರಾಮದಲ್ಲಿ ನಡೆದಿದೆ. ಇಸ್ಮಾಯಿಲ್ (21), ಸಮೀರ್ (28) ಮೃತ ದುರ್ದೈವಿಗಳು. ಕಲ್ಲು ಗಣಿಗಾರಿಕೆ ನಡೆದ ಜಾಗದಲ್ಲಿ ಈಜಲು ಇಸ್ಮಾಯಿಲ್ ಹೋಗಿದ್ದ. ಆತ ಈಜು ಬಾರದೇ ನೀರಿಗೆ ಇಳಿದಿದ್ದ. ಹೀಗಾಗಿ ಆತ ಮುಳುಗುತ್ತಿದ್ದಾಗ ಆತನನ್ನು ರಕ್ಷಿಸಲು ಹೋಗಿ ಸಮೀರ್ ಕೂಡ ನೀರಿನಲ್ಲಿ ಮುಳುಗಿದ್ದಾನೆ.

ಇದನ್ನೂ ಓದಿ | Crime News : ಬ್ಯೂಟಿ ಪಾರ್ಲರ್‌ ನಡೆಸುತ್ತಿದ್ದ ಪತ್ನಿಯನ್ನು ಕೊಂದ ಪತಿ; ಟಾಟಾ ಏಸ್‌ ಪಲ್ಟಿಯಾಗಿ ಇಬ್ಬರು ಸಾವು

ಕೊಪ್ಪಳ ಭ್ರೂಣ ಪತ್ತೆ

ಕೊಪ್ಪಳ: ನಗರದ ಬೆಂಕಿ ನಗರ ಆಂಜನೇಯ ದೇವಸ್ಥಾನ ಬಳಿ ಗಂಡು ಭ್ರೂಣ ಪತ್ತೆಯಾಗಿದೆ. 7 ತಿಂಗಳದ ಗಂಡು ಭ್ರೂಣವನ್ನು ಎಸೆದು ಹೋಗಿದ್ದು, ಸ್ಥಳಕ್ಕೆ ಪೋಲಿಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಬೈಕ್‌ ಅಪಘಾತದಲ್ಲಿ ಇಬ್ಬರಿಗೆ ಗಾಯ

ಚಿಕ್ಕೋಡಿ: ಟಾಟಾ ಏಸ್ ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸವಾರರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಕೇರೂರ ಕ್ರಾಸ್ ಬಳಿ ನಡೆದಿದೆ. ಗಾಯಾಳುಗಳನ್ನು ಚಿಕ್ಕೋಡಿ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಪೊಲೀಸರು ಬೈಕ್ ಸವಾರರ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಭೀಮಾ ತೀರದಲ್ಲಿ ಮತ್ತೆ ನೆತ್ತರೋಕುಳಿ, ಯುವಕನ ರುಂಡ ಚೆಂಡಾಡಿದರು

ಕಲಬುರಗಿ: ಭೀಮಾ ತೀರದಲ್ಲಿ‌ ಮತ್ತೆ ನೆತ್ತರು ಹರಿದಿದೆ. ಅಫಜಲಪುರದಲ್ಲಿ ಒಬ್ಬ ಯುವಕನನ್ನು ಹಳೆ ದ್ವೇಷದ ಹಿನ್ನೆಲೆಯಲ್ಲಿ ಕೊಚ್ಚಿ ಕೊಲೆ (murder case) ಮಾಡಲಾಗಿದೆ.

ಇದನ್ನೂ ಓದಿ | Ballari News: ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿ ವಶ; ಆರೋಪಿಯ ಬಂಧನ

ಅಫಜಲಪುರ ತಾಲೂಕಿನ ಸಿಧನೂರ‌ ಗ್ರಾಮದಲ್ಲಿ ಯುವಕನ ಭೀಕರ ಕೊಲೆಯಾಗಿದ್ದು, ಹತ್ಯೆಗೀಡಾದ ಯುವಕನನ್ನು ಬಲಭೀಮ ಸಗರ (23) ಎಂದು ಗುರುತಿಸಲಾಗಿದೆ. ಹಳೆ‌ವೈಷಮ್ಯ‌ದ ಹಿನ್ನೆಲೆಯಲ್ಲಿ ‌ದುಷ್ಕರ್ಮಿಗಳು ಯುವಕನ ರುಂಡ ಚೆಂಡಾಡಿದ್ದಾರೆ. ಈತನೂ ಪೊಲೀಸ್‌ ದಾಖಲೆಗಳಲ್ಲಿ ಬೇಕಾದವನಾಗಿದ್ದು, ಎರಡು ತಂಡಗಳ ವೈಷಮ್ಯವೂ ಈ ಹತ್ಯೆಯ ಹಿಂದೆ ಇದೆ ಎಂದು ಹೇಳಲಾಗಿದೆ. ಸ್ಥಳಕ್ಕೆ ರೇವೂರ(ಬಿ) ಪೊಲೀಸರು ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾದಿಕಾರಿ‌ ಶ್ರೀನಿಧಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಗಾರರ ಪತ್ತೆಗಾಗಿ ಬಲೆ ಬೀಸಲಾಗಿದೆ.

Exit mobile version