Site icon Vistara News

BJP Campaign‌ : ಕಮಿಷನ್ ಕೊಡದವರಿಗೆ ʼಸ್ಮಶಾನ ಗ್ಯಾರಂಟಿʼ; ಬಿಜೆಪಿ ಹೊಸ ಅಭಿಯಾನ

BJP Campaign for Graveyard guarantee

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಈಗ ಸೋಷಿಯಲ್‌ ಮೀಡಿಯಾ ಪೋಸ್ಟರ್‌ ವಾರ್‌ (Social Media Poster war), ಕ್ಯಾಂಪೇನ್‌ಗಳು (Social Media campaign) ಹೆಚ್ಚಳ ಆಗುತ್ತಿವೆ. ಈ ಮೊದಲು ಬಿಜೆಪಿ ಸರ್ಕಾರ ಇದ್ದಾಗ “ಪೇಸಿಎಂ” (PayCM), “40% ಕಮಿಷನ್‌ ಸರ್ಕಾರ” (40 percent Commission Government) ಅಭಿಯಾನವನ್ನು ಕಾಂಗ್ರೆಸ್‌ ನಡೆಸಿತ್ತು. ಆ ಮೂಲಕ ಈ ಬಾರಿಯ ಚುನಾವಣೆಯಲ್ಲಿ ಅಧಿಕಾರದ ಚುಕ್ಕಾಣಿಯನ್ನೂ ಹಿಡಿಯಿತು. ಈಗ ಅದಕ್ಕೆ ಪ್ರತಿಯಾಗಿ ಬಿಜೆಪಿ ಸಹ ಹಲವಾರು ಪೋಸ್ಟರ್‌ಗಳನ್ನು ಮಾಡುವ ಮೂಲಕ ಆಡಳಿತ ಪಕ್ಷ ಕಾಂಗ್ರೆಸ್‌ ಮೇಲೆ ಪ್ರಯೋಗ ಮಾಡುತ್ತಿದೆ. ಈಗಾಗಲೇ “ಪೇ ಸಚಿವರೇ” (Pay Ministers) ಅಭಿಯಾನವನ್ನು ಹಮ್ಮಿಕೊಂಡಿರುವ ಬಿಜೆಪಿಯಿಂದ ಈಗ ಮತ್ತೊಂದು ಪೋಸ್ಟರ್‌ ಹೊರಬಿದ್ದಿದ್ದು, ಕಮಿಷನ್ ಕೊಡದವರಿಗೆ “ಸ್ಮಶಾನ ಗ್ಯಾರಂಟಿ” (Graveyard guarantee) ಎಂಬ ಅಭಿಯಾನವನ್ನು (BJP Campaign‌) ಆರಂಭಿಸಿದೆ.

ಮಾಜಿ ಕಾರ್ಪೋರೇಟರ್‌ ಒಬ್ಬರ ಪುತ್ರ ಗೌತಮ್ ‌ಎಂಬ ಯುವಕ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗ ಬಿಜೆಪಿ ಸ್ಮಶಾನ ಗ್ಯಾರಂಟಿ ಪೋಸ್ಟರ್‌ ಅಭಿಯಾನವನ್ನು ಆರಂಭಿಸಿದೆ. ಬಿಜೆಪಿ‌ ಬೆಂಬಲಿಗರಿಂದ ಪೋಸ್ಟರ್ ವಾರ್ ಶುರುವಾಗಿದೆ. ಗೌತಮ್‌ ಒಬ್ಬ ಗುತ್ತಿಗೆದಾರನಾಗಿದ್ದು, ಸರ್ಕಾರದಿಂದ ಬಾಕಿ ಬಿಲ್‌ ಪಾವತಿಯಾಗದ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೊದಲು ಸುದ್ದಿಯಾಗಿತ್ತು. ಆದರೆ, ಬಳಿಕ ಗೌತಮ್‌ ಮಾವ ಸ್ಪಷ್ಟೀಕರಣ ನೀಡಿದ್ದು, ಆತ ಗುತ್ತಿಗೆದಾರ ಅಲ್ಲ. ಇದು ಬಿಜೆಪಿ ಪಿತೂರಿ ಎಂದು ಹೇಳಿದ್ದರು. ಆದರೆ, ಆತ ಗುತ್ತಿಗೆದಾರ ಎಂದೇ ಬಿಜೆಪಿ ವಾದಿಸುತ್ತಿದ್ದು, ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ತಂತ್ರಗಾರಿಕೆ ಹೂಡಿದೆ.

ಇದನ್ನೂ ಓದಿ: Basavaraja Bommai : ಕೈ ಸರ್ಕಾರದಲ್ಲಿ 65% ಕಮಿಷನ್‌, ಡಿಕೆಶಿ ಸೂಪರ್‌ ಸಿಎಂ; ಬೊಮ್ಮಾಯಿ ವಾಗ್ದಾಳಿ

ಕಮಿಷನ್ ಕೊಡದವರಿಗೆ ಸ್ಮಶಾನ ಗ್ಯಾರಂಟಿ ಎಂದು ಡಿ.ಕೆ. ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಅವರ ಫೋಟೊ ಸಹಿತ ಪೋಸ್ಟರ್ ಅನ್ನು ಬಿಜೆಪಿ ಹರಿಬಿಟ್ಟಿದೆ.

ರಾಜ್ಯಾದ್ಯಂತ ಪೇ ಸಚಿವರೇ ಅಭಿಯಾನ

ಕೃಷಿ ಸಚಿವ ಚಲುವರಾಯಸ್ವಾಮಿ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಕಮಿಷನ್ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪೇ ಸಚಿವರೇ ಅಭಿಯಾನವನ್ನು ಆರಂಭಿಸಿರುವ ಬಿಜೆಪಿ, ಸೋಷಿಯಲ್ ಮೀಡಿಯಾವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಮುಂದಾಗಿದೆ.

ಇದನ್ನೂ ಓದಿ: Gruha Lakshmi Scheme : ಆಗಸ್ಟ್‌ 27ಕ್ಕೆ ಎಲ್ಲರ ಮನೆಗೆ ಗೃಹಲಕ್ಷ್ಮಿ; ಸಿಗಲಿದೆ ಪಿಂಕ್‌ ಸ್ಮಾರ್ಟ್‌ ಕಾರ್ಡ್‌!

ರಾಜ್ಯಾದ್ಯಂತ ಅಭಿಯಾನ ನಡೆಸುವ ಬಗ್ಗೆ ತೀರ್ಮಾನ ತೆಗೆದುಕೊಂಡಿರುವ ಬಿಜೆಪಿ, ಈ ಸಚಿವರ ರಾಜೀನಾಮೆ ಪಡೆಯುವವರೆಗೂ ಅಸ್ತ್ರ ಕೈ ಬಿಡದಂತೆ ಸೂಚನೆ ನೀಡಿದೆ.

Exit mobile version