Site icon Vistara News

Graveyard problem | ಸ್ಮಶಾನ ನಿರ್ಮಾಣಕ್ಕೆ ಜಾಗ ನೀಡಲು ಒತ್ತಾಯಿಸಿ ತಾಲೂಕು ಕಚೇರಿ ಎದುರು ಪ್ರತಿಭಟನೆ

Ramanagar chennapattana taluk office demanding Cemetery

ರಾಮನಗರ: ಚನ್ನಪಟ್ಟಣದ ಹಲವು ಕಡೆ ಸ್ಮಶಾನ ಸಮಸ್ಯೆ (Graveyard problem) ತಲೆದೋರಿದೆಯಾ ಎಂಬ ಪ್ರಶ್ನೆ ಎದುರಾಗಿದೆ. ಇಲ್ಲಿನ ಕೋಡಂಬಳ್ಳಿಯಲ್ಲಿ ದಲಿತ ಸಮುದಾಯದವರಿಗೆ ಶವ ಹೂಳಲು ಸ್ಮಶಾನ ಸಿಗದ ಹಿನ್ನೆಲೆಯಲ್ಲಿ ನೇರವಾಗಿ ತಾಲೂಕು ಕಚೇರಿಗೆ ಮೃತದೇಹವನ್ನು ತಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದು, ಕೆಲ ಕಾಲ ಗೊಂದಲದ ಸ್ಥಿತಿ ನಿರ್ಮಾಣವಾಗಿತ್ತು.

ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕು ಜೈಬೀರಯ್ಯ (45) ಎಂಬುವವರು ಮೃತಪಟ್ಟಿದ್ದಾರೆ. ಕೋಡಂಬಳ್ಳಿ ನಿವಾಸಿ ದಲಿತರಿಗೆ ಅಂತ್ಯಕ್ರಿಯೆ ಮಾಡಲು ಸ್ಮಶಾನ ಇಲ್ಲದ ಹಿನ್ನೆಲೆಯಲ್ಲಿ ಸ್ಮಶಾನಕ್ಕೆ ಜಾಗ ನೀಡಿ ಎಂದು ಒತ್ತಾಯಿಸಿ ತಾಲೂಕು ಕಚೇರಿಯ ಆವರಣದಲ್ಲಿ ಮೃತದೇಹವನ್ನು ಇಟ್ಟು ಆಕ್ರೋಶವನ್ನು ವ್ಯಕ್ತಪಡಿಸಲಾಗಿತ್ತು. ಈ ವೇಳೆ ಪರಿಸ್ಥಿತಿ ಕೈಮೀರಿದ್ದು, ಮೃತ ವ್ಯಕ್ತಿಯ ಕುಟುಂಬದ ಸದಸ್ಯರು ಕಚೇರಿ ಒಳಗೆ ನುಗ್ಗಿ ಅಸಮಾಧಾನವನ್ನು ಹೊರಹಾಕಿದ್ದಾರೆ. ಇದಕ್ಕೆ ಗ್ರಾಮಸ್ಥರು ಸಾಥ್‌ ನೀಡಿದ್ದಾರೆ.

ಗ್ರಾಮಸ್ಥರು ತಹಸೀಲ್ದಾರ್ ಸುದರ್ಶನ್ ಅವರ ಜತೆ ಮಾತುಕತೆ ನಡೆಸಿದರು. ಗ್ರಾಮಕ್ಕೆ ಸ್ಮಶಾನವನ್ನು ಒದಗಿಸಿಕೊಡುವಂತೆ ಮನವಿ ಮಾಡಿದರು. ಸ್ಥಳಕ್ಕೆ ಪೊಲೀಸರು ಆಗಮಿಸಿ, ಸಾರ್ವಜನಿಕರ ಮನವೊಲಿಸಿ ಬಳಿಕ ವಾಪಸ್‌ ಕಳುಹಿಸಿದ್ದಾರೆ.

ಇದನ್ನೂ ಓದಿ | CT Ravi vs Siddaramaiah | ಸಿದ್ರಾಮುಲ್ಲಾ ಖಾನ್‌ ಹೇಳಿಕೆಗೆ ಬಿಜೆಪಿ ಸಮರ್ಥನೆ, ಮತ್ತೇನು ಮೀರ್‌ ಸಾದಕ್‌ ಅನ್ನಬೇಕಾ?

Exit mobile version