ಬಳ್ಳಾರಿ: ತಾಲೂಕಿನ ಕೊಳಗಲ್ ಗ್ರಾಮದಲ್ಲಿ ಎರ್ರೆಪ್ಪ ದೇವರ ಪ್ರತಿಷ್ಠಾಪನೆ ಮತ್ತು ಜಾತ್ರೆ ವಿಚಾರಕ್ಕೆ ಎರಡು ಗುಂಪುಗಳ ಮಧ್ಯೆ ಘರ್ಷಣೆ (Group Clash) ನಡೆದು ಪಿಎಸ್‌ಐ ಸೇರಿ ಮೂವರು ಗಾಯಗೊಂಡಿದ್ದಾರೆ. ಗಲಭೆ ಸಂಬಂಧ ಎರಡು ಗುಂಪಿನ ಕಡೆಯ 20ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪಿಎಸ್‌ಐ ಸಂತೋಷ್ ಡಬ್ಬಿನ್, ಸಿಪಿಐ ಸತೀಶ್ ಸೇರಿದಂತೆ ಮೂವರಿಗೆ ಗಾಯಗಳಾಗಿದೆ. ತಲೆಗೆ ಪೆಟ್ಟಾದ ಹಿನ್ನೆಲೆ ಪಿಎಸ್‌ಐ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಇನ್ನಿಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಘಟನಾ ಸ್ಥಳಕ್ಕೆ ಎಸ್ಪಿ ಮತ್ತು ಎಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ 144 ಸೆಕ್ಷನ್ ಜಾರಿ ಸಾಧ್ಯತೆ ಇದ್ದು, ಭದ್ರತೆಗಾಗಿ ಸ್ಥಳದಲ್ಲಿ ಎರಡು ಡಿಎಆರ್, ಒಂದು ಕೆಎಸ್‌ಆರ್‌ಪಿ ತುಕಡಿ ನಿಯೋಜಿಸಲಾಗಿದೆ.
ಇದನ್ನೂ ಓದಿ | Kudligi News: ಕೂಡ್ಲಿಗಿಯಲ್ಲಿ ಇಸ್ಪೀಟ್ ಆಡುತ್ತಿದ್ದ 12 ಮಂದಿ ಬಂಧನ; 12 ಬೈಕ್, 65,530 ರೂ. ವಶಕ್ಕೆ
ಕೆಲ ತಿಂಗಳ ಹಿಂದೆ ವಿಗ್ರಹ ಪ್ರತಿಷ್ಠಾಪನೆ ವಿಚಾರ ಗಲಾಟೆ ನಡೆದಿತ್ತು. ಇದೀಗ ಏ.15ರಂದು ಜಾತ್ರೆ ನಿಗದಿಯಾಗಿತ್ತು, ಇದಕ್ಕೆ ಸಂಬಂಧಿಸಿ ಗಲಾಟೆ ನಡೆದು, ಎರಡು ಗುಂಪಿನವರು ಹೊಡೆದಾಡಿಕೊಂಡಿದ್ದಾರೆ.