Site icon Vistara News

Gruha Jyothi Scheme : ಫ್ರೀ ಕರೆಂಟ್‌ಗೆ ಅರ್ಜಿ ಸಲ್ಲಿಸಲು 3 ತಿಂಗಳು ಮಾತ್ರ ಅವಕಾಶ, ಆಮೇಲೆ ಸ್ಟಾಪ್: ಜಾರ್ಜ್‌

Gruha Jyothi Scheme Only 3 months to apply for free current

ಚಿಕ್ಕಮಗಳೂರು: ಜೂನ್‌ ತಿಂಗಳ ಕರೆಂಟ್‌ ಬಿಲ್‌ ಅನ್ನು ಎಲ್ಲರೂ ಕಟ್ಟಬೇಕು. ಆದರೆ, ಜುಲೈ 1ರಿಂದ ಬಳಕೆ ಮಾಡುವ ವಿದ್ಯುತ್‌ ನಿಗದಿತ ನೀತಿಯಂತೆ ಬಳಸಲ್ಪಟ್ಟಿದ್ದರೆ ಅದು ಉಚಿತ. ಸದ್ಯಕ್ಕೆ ಗೃಹ ಜ್ಯೋತಿ ಯೋಜನೆಯಡಿ (Gruha Jyothi Scheme) ಅರ್ಜಿ ಸಲ್ಲಿಸಲು ಯಾವುದೇ ಡೆಡ್‌ಲೈನ್‌ ನೀಡಿಲ್ಲ. ಆದರೆ, ಎಲ್ಲವನ್ನೂ ನೋಡಿಕೊಂಡು ಮತ್ತೆ ಮೂರು ತಿಂಗಳು ಕಾಲಾವಕಾಶ ನೀಡುತ್ತೇವೆ. ಆಗಲೂ ಅರ್ಜಿ ಸಲ್ಲಿಸದಿದ್ದರೆ ಅಂಥವರಿಗೆ ಯೋಜನೆಯನ್ನು ಸ್ಟಾಪ್‌ ಮಾಡುತ್ತೇವೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್‌ ವಿಸ್ತಾರ ನ್ಯೂಸ್‌ಗೆ ಹೇಳಿದ್ದಾರೆ.

ಚಿಕ್ಕಮಗಳೂರಿನಲ್ಲಿ ವಿಸ್ತಾರ ನ್ಯೂಸ್‌ ಜತೆ ಮಾತನಾಡಿದ ಇಂಧನ ಸಚಿವ ಕೆ.ಜೆ. ಜಾರ್ಜ್‌, ಜುಲೈ 1ರಿಂದ ಎಲ್ಲರಿಗೂ ವಿದ್ಯುತ್ ಫ್ರೀ ಆಗಲಿದೆ. ಆದರೆ, ಜೂನ್ ತಿಂಗಳಿನ ಕರೆಂಟ್ ಬಿಲ್ ಅನ್ನು ಗ್ರಾಹಕರು ಕಟ್ಟಬೇಕು ಎಂದು ಸ್ಪಷ್ಟಪಡಿಸಿದರು.

ಸರ್ವರ್ ಸಮಸ್ಯೆ ಈಗಾಗಲೇ ಬಗೆಹರಿದಿದೆ. ಯಾವುದು ಸಮಸ್ಯೆ ಇಲ್ಲ. ಈಗಾಗಲೇ 87 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು ಅರ್ಜಿ ಹಾಕಿದ್ದಾರೆ. ಪ್ರತಿ ದಿನವೂ ಅರ್ಜಿಯನ್ನು ಸಲ್ಲಿಕೆ ಮಾಡುತ್ತಲೇ ಇದ್ದಾರೆ. ಇನ್ನೂ ಸಮಯಾವಕಾಶ ಇದೆ. ಮುಂದಿನ ತಿಂಗಳು (ಜುಲೈ) 25ರ ತನಕ ಆ ತಿಂಗಳ ಫ್ರೀ ವಿದ್ಯುತ್‌ ಪಡೆಯಲು ಅರ್ಜಿ ಸಲ್ಲಿಕೆಗೆ ಅವಕಾಶವನ್ನು ನೀಡಲಾಗಿದೆ. ಒಂದು ವೇಳೆ ಅಷ್ಟರೊಳಗೆ ಆಗದೇ ಇದ್ದರೆ ಅವರು ಆ ತಿಂಗಳ ಬಿಲ್‌ ಅನ್ನು ಕಟ್ಟಬೇಕಾಗುತ್ತದೆ. ಹಾಗೇ ಅವರು ಮುಂದಿನ ತಿಂಗಳು ಸಹ ಅರ್ಜಿ ಸಲ್ಲಿಸಬಹುದು ಎಂದು ಕೆ.ಜೆ. ಜಾರ್ಜ್‌ ತಿಳಿಸಿದರು.

ಮೂರು ತಿಂಗಳಾದರೂ ಅರ್ಜಿ ಹಾಕದೇ ಇದ್ದರೆ ಸ್ಟಾಪ್!

ಅರ್ಜಿಯನ್ನು ಯಾವಾಗ ಬೇಕಾದರೂ ಸಲ್ಲಿಸಬಹುದು ಎಂದು ನಾವು ಹೇಳುತ್ತಿಲ್ಲ. ಈ ಹಂತದಲ್ಲಿ ನಾವು ಅರ್ಜಿ ಸಲ್ಲಿಸಲು ಯಾವುದೇ ಡೆಡ್‌ಲೈನ್ ಅನ್ನು ನೀಡಿಲ್ಲ. ಸದ್ಯಕ್ಕೆ ಎಲ್ಲ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದು. ಸದ್ಯಕ್ಕಂತೂ ಎರಡ್ಮೂರು ತಿಂಗಳು ನಾವು ನೋಡುತ್ತೇವೆ. ಅಷ್ಟರಲ್ಲಿ ಯಾರೂ ಅರ್ಜಿ ಹಾಕದೇ ಇದ್ದರೆ ಆಗ ನಾವು ಸ್ಟಾಪ್‌ ಮಾಡಬೇಕಾಗುತ್ತದೆ ಎಂದು ಸಚಿವ ಕೆ.ಜೆ. ಜಾರ್ಜ್‌ ಹೇಳಿದರು.

ಇದನ್ನೂ ಓದಿ: Video Viral : ಕೈಯಲ್ಲಿ ಗರುಡ ರೇಖೆ ಇದೆ, ನಂಗೇನೂ ಆಗಲ್ಲ ಎಂದು ಹಾವು‌ ಹಿಡಿದು ಕಚ್ಚಿಸಿಕೊಂಡ! ಸತ್ತೇ ಹೋದ್ನಾ?

ಭಾಗ್ಯ ಜ್ಯೋತಿ ಯೋಜನೆ ಸೇರಿದಂತೆ ಹಲವು ‌ಯೋಜನೆಗಳಿಗೆ ಫಲಾನುಭವಿಗಳು ಅರ್ಜಿ ಹಾಕಲೇಬೇಕು. ಅರ್ಜಿ ಹಾಕಿದರೆ ಮಾತ್ರ ವಿದ್ಯುತ್ ಫ್ರೀ ನೀಡಲಾಗುವುದು. ಇದಕ್ಕೆ ಯೋಜನೆಯಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಗಮನಕ್ಕೆ ಬಂದರೆ ಸರಿಪಡಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದರು.

Exit mobile version