Site icon Vistara News

Gruha lakshmi Scheme : 2ನೇ ದಿನವೂ ಗೃಹಲಕ್ಷ್ಮಿಯರಿಗೆ ಸರ್ವರ್‌ ಕಾಟ; ಹಲವೆಡೆ ಗೋಳಾಟ!

Gruha lakshmi Scheme in vijayapura problem

ಬೆಂಗಳೂರು: ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ (Congress Guarantee) ಒಂದಾಗಿರುವ “ಗೃಹಲಕ್ಷ್ಮಿ “ಯೋಜನೆಗೆ (Gruha lakshmi Scheme) ಗುರುವಾರದಿಂದ (ಜುಲೈ 20) ಅರ್ಜಿ ಸಲ್ಲಿಕೆ ಪ್ರಾರಂಭ ಆಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಫಲಾನುಭವಿಗಳು ಬೆಂಗಳೂರು ಒನ್ (Bangalore One), ಗ್ರಾಮ ಒನ್‌ (Grama One), ಕರ್ನಾಟಕ ಒನ್‌ (Karnataka One) ಹಾಗೂ ಬಾಪೂಜಿ ಸೇವಾ ಕೇಂದ್ರಗಳತ್ತ (Bapuji seva kendra) ಧಾವಿಸುತ್ತಿದ್ದಾರೆ. ಆದರೆ, ಮೊದಲ ದಿನ ಕಾಡಿದ್ದ ಸರ್ವರ್ ಸಮಸ್ಯೆ (Server problem) ಎರಡನೇ ದಿನವೂ ಮುಂದುವರಿದಿದೆ. ಇದು ಜನಾಕ್ರೋಶಕ್ಕೂ ಕಾರಣವಾಗಿದೆ. ಗಂಟೆಗಟ್ಟಲೆ ಕಾದರೂ ಅರ್ಜಿ ಹಾಕಲು ಗೃಹಿಣಿಯರು ಪರದಾಡಿದ್ದಾರೆ.

ರಾಜ್ಯದ ಹಲವು ಕಡೆ ಗೊಂದಲ, ಗಲಾಟೆಗಳು ನಡೆದಿವೆ. ಯೋಜನೆಯ ಫಲಾನುಭವಿಗಳಾಗಲು ಮಹಿಳೆಯರು ಮುಗಿಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಒಮ್ಮೆಲೆಗೆ ಟ್ರಾಫಿಕ್‌ ಸೃಷ್ಟಿಯಾಗಿದ್ದರಿಂದ ಸರ್ವರ್‌ ಡೌನ್‌ ಆಗಿದೆ. ಒಂದೊಂದು ಅರ್ಜಿಯನ್ನು ಅಪ್ಲೋಡ್‌ ಮಾಡಲು ಸಾಕಷ್ಟು ಸಮಯವನ್ನು ತೆಗೆದುಕೊಂಡಿದೆ. ಐದು ನಿಮಿಷದೊಳಗೆ ಮುಗಿಯಬೇಕಾದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ವಿಳಂಬವಾಗುತ್ತಾ ಹೋಗಿದೆ. ಇದರಿಂದ ಸಾಲುಗಟ್ಟಿ ನಿಂತ ಮಹಿಳೆಯರು ತಾಳ್ಮೆ ಕಳೆದುಕೊಳ್ಳುವಂತಾಗಿದೆ. ಇದು ಆಕ್ರೋಶ, ಗಲಾಟೆಗಳಿಗೆ ಎಡೆ ಮಾಡಿಕೊಟ್ಟಿದೆ. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಬಂದಿದ್ದ ಮಹಿಳೆಯರನ್ನು ಆಧಾರ್ ಕೇಂದ್ರದ ಸಿಬ್ಬಂದಿ ಕತ್ತು ಹಿಡಿದು ಆಚೆ ತಳ್ಳಿದ ಘಟನೆ ವಿಜಯನಗರದಲ್ಲಿ ನಡೆದಿದೆ.

ಮನೆ ಯಜಮಾನಿಗೆ 2000 ರೂಪಾಯಿ ನೆರವು ನೀಡುವ ‘ಗೃಹಲಕ್ಷ್ಮಿ’ ಯೋಜನೆಗೆ ಮೊದಲ ದಿನವೇ 60,222 ಮಹಿಳೆಯರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಆದರೆ, ಮೊದಲ ದಿನದಂತೆ ಸರ್ವರ್ ಸಮಸ್ಯೆ ಎರಡನೇ ದಿನವೂ ಮುಂದುವರಿದಿದೆ. ಇದನ್ನು ಕೂಡಲೇ ಸರಿಪಡಿಸಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.

ವಿಜಯಪುರದಲ್ಲಿ ಮಹಿಳೆಯರನ್ನೇ ಆಚೆ ಹಾಕಿದ ಸಿಬ್ಬಂದಿ; ಇಲ್ಲಿದೆ ವಿಡಿಯೊ

ಗೃಹಜ್ಯೋತಿ ಯೋಜನೆಯ ರೀತಿ ಮೊಬೈಲ್ ಮೂಲಕ ಅರ್ಜಿ ಸಲ್ಲಿಕೆಗೆ ಅವಕಾಶ ಕೂಡ ಇಲ್ಲ. ಕೇವಲ ಮಿಸ್‌ ಕಾಲ್‌ ನೀಡಿ ಸೇವಾಕೇಂದ್ರ ಕಂಡುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಬೆಳಗಾದ್ರೆ ಬೆಂಗಳೂರು ಒನ್, ನಾಡ ಕಚೇರಿ ಹೀಗೆ ಕೆಲಸ ಕಾರ್ಯ ಬಿಟ್ಟು ಮಹಿಳೆಯರು ಕಾದರೂ ಸರ್ವರ್ ಸಮಸ್ಯೆ ಬಗೆಹರಿಯುತ್ತಿಲ್ಲ ಎಂದು ಆಕ್ರೋಶವನ್ನು ಹೊರಹಾಕಲಾಗಿದೆ.

ವಿಜಯಪುರದಲ್ಲಿ ಮಹಿಳೆಯರ ಆಕ್ರೋಶ

ಬಿಪಿ, ಶುಗರ್ ಇರೋರು, ಏನಾದ್ರೂ ಹೆಚ್ಚು ಕಡಿಮೆ ಆದ್ರೆ ಏನ್ ಗತಿ?

ಅರ್ಜಿ ಸಲ್ಲಿಕೆಗೆ ತುಂಬಾ ವಿಳಂಬವಾಗುತ್ತಿದೆ. ಬಿಪಿ, ಶುಗರ್ ಇರೋರು, ಏನಾದ್ರೂ ಹೆಚ್ಚು ಕಡಿಮೆ ಆದ್ರೆ ಏನ್ ಗತಿ? ಎಂದು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಲು ಬಂದಿದ್ದ ತುಮಕೂರಿನ ಮಹಿಳೆಯೊಬ್ಬರು ವಿಸ್ತಾರ ಪ್ರತಿನಿಧಿಯೊಂದಿಗೆ ಅಳಲು ತೋಡಿಕೊಂಡಿದ್ದಾರೆ.

ತುಮಕೂರಿನಲ್ಲಿ ಮಹಿಳೆಯೊಬ್ಬರ ಅಸಮಾಧಾನ; ಇಲ್ಲಿದೆ ವಿಡಿಯೊ

ಎಸ್‌ಎಂಎಸ್‌ ಮೂಲಕ ಮಾಹಿತಿ

ಇನ್ನು ಫಲಾನುಭವಿಗಳಿಗೆ SMS ಮೂಲಕ ಮಾಹಿತಿ ನೀಡಲಾಗುತ್ತಿದ್ದು, ನಿಗದಿತ ಸೇವಾ ಕೇಂದ್ರದಲ್ಲಿ ನೋಂದಣಿಗೆ ಅವಕಾಶ ಇದೆ. ಆದರೆ ಆ ಪ್ರಕಾರ ಬಂದರೂ ಬೆಳಗ್ಗೆಯಿಂದ ಮಧ್ಯಾಹ್ನ ಅಥವಾ ಸಂಜೆವರೆಗೂ ಕಾಯೋ ಸ್ಥಿತಿ ಬಹುತೇಕ ಕಡೆ ಆಗಿದೆ. ಬೆಂಗಳೂರಿನಲ್ಲಿ ಕೆಲ ಮಂದಿಗೆ ತಮ್ಮ ವಾರ್ಡ್ ಬದಲು ದೂರದ ಸೇವಾ ಕೇಂದ್ರಗಳಿಗೆ ಭೇಟಿ ನೀಡುವಂತೆ ಎಸ್‌ಎಂಎಸ್‌ನಲ್ಲಿ ಹೇಳಲಾಗಿದೆ. ಇದರಿಂದ ದೂರದ ಸ್ಥಳದಿಂದ ಬಂದು ನೋಂದಣಿ ಹೇಗೆ ಮಾಡಿಸುವುದು ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಅರ್ಜಿ ಸಲ್ಲಿಕೆಗೆ ಸಾಕಷ್ಟು ಅಡೆತಡೆ ಆಗುತ್ತಿರುವ ಬೆನ್ನಲ್ಲೇ ಸ್ತ್ರೀ ಶಕ್ತಿ ಸಂಘಗಳ ಮೂಲಕವೂ ಒಂದಷ್ಟು ಮಂದಿ ಅರ್ಜಿ ಸಲ್ಲಿಕೆ ಮಾಡುತ್ತಿದ್ದಾರೆ.

ಬೆಂಗಳೂರು ಒನ್ ಸೇರಿದಂತೆ ಅರ್ಜಿ ಅಪ್ಪೋಡ್‌ ಮಾಡುತ್ತಿರುವ ಗ್ರಾಮ ಒನ್‌, ಕರ್ನಾಟಕ ಒನ್‌ ಸಿಬ್ಬಂದಿ ಸಹ ಸರ್ವರ್ ಸಮಸ್ಯೆ ಎಂದು ಕೈಚೆಲ್ಲಿ ಕೂತಿದ್ದಾರೆ.

Exit mobile version