Site icon Vistara News

Gruhalakshmi Scheme : ಆ. 18ರಂದು ಖಾತೆಗೆ 2000 ರೂ. ಗ್ಯಾರಂಟಿ; ಪಂಚಾಯತಲ್ಲೂ ಅರ್ಜಿ ಹಾಕ್ಬೋದು

Lakshmi hebbalkar

#image_title

ಚಿಕ್ಕಮಗಳೂರು: ಗೃಹ ಲಕ್ಷ್ಮಿ ಯೋಜನೆಯಡಿ (Gruhalakshmi Scheme) ಆಗಸ್ಟ್‌ 18ರ ಹೊತ್ತಿಗೆ ಕುಟುಂಬದ ಯಜಮಾನಿಯ ಖಾತೆಗೆ 2000 ರೂ. ಜಮಾ ಆಗಲಿದೆ ಎಂಬ ಖಚಿತ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ (Lakshmi Hebbalkar).

ಕೊಪ್ಪ ತಾಲೂಕಿನ ಗೌರಿಗದ್ದೆ ದತ್ತಾಶ್ರಮಕ್ಕೆ ಆಗಮಿಸಿದ್ದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಧ್ಯಮಗಳ ಜತೆ ಮಾತನಾಡಿದರು. ಗೃಹಲಕ್ಷ್ಮಿ ಯೋಜನೆ ಎಲ್ಲರಿಗೂ ತಲುಪಬೇಕು ಮತ್ತು ಅರ್ಜಿ ಸಲ್ಲಿಕೆ ಸರಳವಾಗಿರಬೇಕು ಎಂಬ ಕಾರಣಕ್ಕಾಗಿ ಕೆಲವೊಂದು ಬದಲಾವಣೆಗಳನ್ನು ಮಾಡಲಾಗುತ್ತಿದ್ದು, ಹೀಗಾಗಿ ವಿಳಂಬವಾಗುತ್ತಿದೆ ಅಷ್ಟೆ ಎಂಬ ವಿವರಿಸಿದರು.

ಪಂಚಾಯತ್‌ನಲ್ಲೂ ಅರ್ಜಿ ಸಲ್ಲಿಸಬಹುದು

ಗೃಹಲಕ್ಷ್ಮಿ ಯೋಜನೆಗೆ ಜೂನ್‌ 15ರಿಂದ ಅರ್ಜಿ ಸಲ್ಲಿಕೆಗೆ ಅವಕಾಶ ನೀಡುವ ಚಿಂತನೆ ನಡೆದಿತ್ತು. ಲಕ್ಷ್ಮಿ ಹೆಬ್ಬಾಳ್ಕರ್‌ ಅವರು ಅದನ್ನು ಒಂದು ದಿನ ಮುಂದಕ್ಕೆ ಹಾಕಿ ಜೂನ್‌ 16ರಿಂದ ಅರ್ಜಿ ಸಲ್ಲಿಕೆ ಆರಂಭ ಎಂದಿದ್ದರು. ಆದರೆ, ಮತ್ತೊಂದು ಸಭೆ ನಡೆಸಿದ ಬಳಿಕ ಅದನ್ನು ನಾಲ್ಕೈದು ದಿನಗಳ ಕಾಲಕ್ಕೆ ಮುಂದೂಡಲಾಗಿತ್ತು.

ʻʻಅಧಿಕಾರಿಗಳಿಗೆ ಕೆಲವು ಬದಲಾವಣೆಗಳನ್ನು ಮಾಡಲು ಸೂಚನೆ ನೀಡಿದ್ದೇವೆ. ಮೊದಲು ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್​​ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಇದೀಗ ಇದರ ಜೊತೆಗೆ ಗ್ರಾಮ ಪಂಚಾಯತ್‌ಗಳಲ್ಲಿರುವ ಬಾಪೂಜಿ ಸೇವಾ ಕೇಂದ್ರದಲ್ಲೂ (Bapooji Seva Kendra) ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಹೀಗಾಗಿ ಅರ್ಜಿ ಸಲ್ಲಿಸಲು ವಿಳಂಬವಾಗುತ್ತಿದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್‌ ತಿಳಿಸಿದರು.

ಸರ್ಕಾರದ ಯೋಜನೆಯನ್ನ ಯಾರು ಮನೆ ಮನೆ ಮುಟ್ಟಿಸಲು ಆಸಕ್ತರಿರುವ ಒಬ್ಬ ವ್ಯಕ್ತಿಯನ್ನು ಗ್ರಾಮ ಮಟ್ಟದಲ್ಲಿ ಪ್ರಜಾ ಪ್ರತಿನಿಧಿ ಎಂದು ನೇಮಿಸಲಾಗುತ್ತದೆ. ಅಧಿಕಾರಿಗಳು ಸಾಫ್ಟ್‌ವೇರ್‌ ಮತ್ತು ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ ಎಂದು ಅವರು ವಿವರಿಸಿದರು.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಅವರು ಗೌರಿಗದ್ದೆ ಆಶ್ರಮದಲ್ಲಿ ಮಳೆಗಾಗಿ ಚಂಡಿಕಾಯಾಗ ನಡೆಸಿದರು. ಯಾಗದ ಪೂರ್ಣಾಹುತಿಯಲ್ಲಿ ಸಚಿವ ಡಿ.ಸುಧಾಕರ್​ ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಯ ಶಾಸಕರು ಭಾಗಿಯಾಗಿದ್ದರು.

ಅರ್ಜಿ ಸಲ್ಲಿಸುವುದು ಎಲ್ಲಿ? ಹೇಗೆ ಮತ್ತು ದಾಖಲೆ ಏನೇನು ಬೇಕು?

  1. ಅರ್ಜಿಯನ್ನು ಆನ್ ಲೈನ್ ಮೂಲಕ ಅಥವಾ ಭೌತಿಕವಾಗಿ ಗ್ರಾಮ ಒನ್/ ಬೆಂಗಳೂರು ಒನ್/ ಕರ್ನಾಟಕ ಒನ್ ಕೇಂದ್ರಗಳಲ್ಲಿ ಸೇವಾ ಸಿಂಧು ಪೋರ್ಟಲ್ ಮೂಲಕ ಸಲ್ಲಿಸಬಹುದು.
    (ಸೇವಾಸಿಂಧು ಪೋರ್ಟಲ್‌: https://sevasindhugs.karnataka.gov.in/gruhalakshmi)
  2. ಮುಂದೆ ನಿಗದಿಪಡಿಸಿದ ದಿನಾಂಕದಂದು ಅರ್ಜಿ ಸಲ್ಲಿಕೆಗೆ ಚಾಲನೆ ಸಿಗಲಿದ್ದು, ಬಳಿಕ ಅರ್ಜಿ ಸಲ್ಲಿಸಬಹುದು.
  3. ಅರ್ಜಿ ಸಲ್ಲಿಕೆಗೆ ಎಸ್ಎಂಎಸ್ ಮೂಲಕ ಹಾಗೂ ಸೇವಾಸಿಂಧು ಪೋರ್ಟಲ್ ಮೂಲಕ ಅಟೋ ಜನರೇಟೆಡ್ ಸ್ವೀಕೃತಿಗಳನ್ನು ಪಡೆಯಬಹುದಾಗಿದೆ.
  4. ಅರ್ಜಿ ಸಲ್ಲಿಸಲು ಅರ್ಜಿದಾರರ ಹಾಗೂ ಪತಿಯ ಆಧಾರ್ ಕಾರ್ಡ್ ಸಂಖ್ಯೆ, ಮೊಬೈಲ್ ಸಂಖ್ಯೆ ಹಾಗೂ ಅರ್ಜಿದಾರರ ಬ್ಯಾಂಕ್ ಖಾತೆ ವಿವರಗಳು ಅಗತ್ಯವಾಗಿದೆ.
  5. ಮಂಜೂರಾತಿಯ ನಂತರ ಡಿಬಿಟಿ ಮೂಲಕ ನೇರ ನಗದು ವರ್ಗಾವಣೆ ಆಗಲಿದೆ.
  6. ಅರ್ಜಿ ಸಲ್ಲಿಕೆಗೆ ಯಾವುದೇ ಶುಲ್ಕ ವಿಧಿಸಲಾಗಿಲ್ಲ, ಬದಲಾಗಿ ಸಂಪೂರ್ಣ ಉಚಿತ.
  7. ಅರ್ಜಿ ಸಲ್ಲಿಕೆಗೆ ಯಾವುದೇ ಕೊನೆಯ ದಿನಾಂಕ ನಿಗದಿ ಮಾಡಿಲ್ಲ. ಹೀಗಾಗಿ ನಿರಂತರವಾಗಿ ಹೊಸ ಅರ್ಜಿ ಸಲ್ಲಿಕೆಗೆ ಅವಕಾಶವಿದೆ.
  8. ಯೋಜನೆಯ ಕುರಿತಂತೆ ಸಂದೇಹ/ ಕುಂದುಕೊರತೆಗಳಿದ್ದಲ್ಲಿ ಸಹಾಯವಾಣಿ (Helpline) – 1902 ಗೆ ಸಂಪರ್ಕಿಸಬಹುದಾಗಿದೆ.

ಇದನ್ನು ಓದಿ : Free Electricity : ಉಚಿತ ವಿದ್ಯುತ್‌ ಬೇಕಾ? ಜೂ. 18ರಿಂದಲೇ ಅರ್ಜಿ ಸಲ್ಲಿಸಲು ಅವಕಾಶ

Exit mobile version