Site icon Vistara News

Gubbi News: ಅರಣ್ಯ ಒತ್ತುವರಿ ತೆರವಿಗೆ ಮುಂದಾದ ಅಧಿಕಾರಿಗಳು, ಸಿಬ್ಬಂದಿ ಮೇಲೆರಗಿದ ರೈತರು; ಇಬ್ಬರಿಗೆ ತೀವ್ರ ಗಾಯ

Encroachment of forest area gubbi

#image_title

ಗುಬ್ಬಿ: ಚೇಳೂರು ಹೋಬಳಿಯ ಗಂಗಯ್ಯನಪಾಳ್ಯದಲ್ಲಿ ಅರಣ್ಯ ಪ್ರದೇಶ ಒತ್ತುವರಿ (Forest Department Encroachment) ವಿಚಾರದಲ್ಲಿ ಕಳೆದ 15 ದಿನಗಳಿಂದಲೂ ರೈತರು ಮತ್ತು ಅರಣ್ಯ ಇಲಾಖೆಯ ಮಧ್ಯೆ ನಡೆಯುತ್ತಿರುವ ಘರ್ಷಣೆ ಮುಂದುವರಿದಿದೆ.

ಅರಣ್ಯ ಇಲಾಖೆಯ ಅಧಿಕಾರಿಗಳು ಅರಣ್ಯ ಪ್ರದೇಶವನ್ನು ವಶಕ್ಕೆ ಪಡೆಯುವ ಸಂಬಂಧ ಗುರುವಾರ (ಮಾ.30) ಕಂದಕ ತೆಗೆಯಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ರೈತ ಮುಖಂಡ ದೊಡ್ಡನಂಜಯ್ಯನವರ ನೇತೃತ್ವದಲ್ಲಿ ಕೆಲಸಕ್ಕೆ ತಡೆ ಒಡ್ಡಲು ರೈತರೆಲ್ಲರು ಮುಂದಾದರು. ಅರಣ್ಯ ಇಲಾಖೆಯವರು ಅವರನ್ನು ವಶಕ್ಕೆ ಪಡೆದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ರೈತರು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿರುವುದು ವರದಿಯಾಗಿದೆ.

ಇದನ್ನೂ ಓದಿ: AAP Poster Campaign: ಮೋದಿ ಓಡಿಸಿ, ದೇಶ ಉಳಿಸಿ ಬಳಿಕ ದೇಶಾದ್ಯಂತ ಆಪ್‌ನಿಂದ ಪೋಸ್ಟರ್ ಕ್ಯಾಂಪೇನ್ ಶುರು!

ಈ ಘರ್ಷಣೆಯಲ್ಲಿ ಕುಣಿಗಲ್ ವಲಯ ಅರಣ್ಯ ಅಧಿಕಾರಿ ಮನ್ಸೂರ್ ಹಾಗೂ ಗಸ್ತು ವನಪಾಲಕರೊಬ್ಬರಿಗೆ ತೀವ್ರ ಗಾಯಗಳಾಗಿವೆ. ಗಾಯಾಳುಗಳಿಗೆ ಚೇಳೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಕ್ರಮ ತೆಗೆದುಕೊಂಡಿದ್ದಾರೆ. ಸದ್ಯ ಗಂಗಯ್ಯನಪಾಳ್ಯದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

Exit mobile version