AAP Poster Campaign: ಮೋದಿ ಓಡಿಸಿ, ದೇಶ ಉಳಿಸಿ ಬಳಿಕ ದೇಶಾದ್ಯಂತ ಆಪ್‌ನಿಂದ ಪೋಸ್ಟರ್ ಕ್ಯಾಂಪೇನ್ ಶುರು! - Vistara News

ದೇಶ

AAP Poster Campaign: ಮೋದಿ ಓಡಿಸಿ, ದೇಶ ಉಳಿಸಿ ಬಳಿಕ ದೇಶಾದ್ಯಂತ ಆಪ್‌ನಿಂದ ಪೋಸ್ಟರ್ ಕ್ಯಾಂಪೇನ್ ಶುರು!

ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ವಿರುದ್ಧ ತಿರುಗಿ ಬಿದ್ದಿರುವ ಆಮ್ ಆದ್ಮಿ ಪಾರ್ಟಿ(AAP), ದೇಶಾದ್ಯಂತ ಅವರ ವಿರುದ್ಧ ಪೋಸ್ಟರ್ ವಾರ್ ಆರಂಭಿಸಿದೆ. ಏಪ್ರಿಲ್ 10ರಿಂದ ದೇಶ ಎಲ್ಲ ವಿಶ್ವವಿದ್ಯಾಲಯಗಳಲ್ಲೂ ಈ ಕ್ಯಾಂಪೇನ್ ಆರಂಭವಾಗಲಿದೆ ಎಂದು ಆಪ್ ಹೇಳಿದೆ(AAP Poster Campaign).

VISTARANEWS.COM


on

AAP's pan-India poster campaign targeting PM starts today
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಮೋದಿಯನ್ನು ಓಡಿಸಿ, ದೇಶವನ್ನು ಉಳಿಸಿ ಅಭಿಯಾನದ ಬಳಿಕ ಆಮ್ ಆದ್ಮಿ ಪಾರ್ಟಿ(AA), ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ (PM Narendra Modi) ವಿರುದ್ಧ ಪೋಸ್ಟರ್ ಕ್ಯಾಂಪೇನ್ (poster campaign) ಗುರುವಾರ ಆರಂಭಿಸಿದೆ. ಒಟ್ಟು 11 ಭಾಷೆಗಳಲ್ಲಿ ದೇಶಾದ್ಯಂತ ಮೋದಿ ವಿರೋಧಿ ಪೋಸ್ಟರ್‌ಗಳನ್ನು ಪ್ರದರ್ಶಿಸಿದೆ. ಈ ಹಿಂದೆ, ಮೋದಿಯನ್ನು ಓಡಿಸಿ, ದೇಶವನ್ನು ಉಳಿಸಿ ಪೋಸ್ಟರ್‌ಗಳನ್ನು ದಿಲ್ಲಿಯ ಬೀದಿಗಳಲ್ಲಿ ಅಂಟಿಸಲಾಗಿತ್ತು. ಈ ಸಂಬಂಧ ದಿಲ್ಲಿ ಪೊಲೀಸರು ಹಲವರನ್ನು ಬಂಧಿಸಿದ್ದಾರೆ. ನೂರು ಎಫ್ಐಆರ್‌ಗಳನ್ನು ದಾಖಲಿಸಿದ್ದಾರೆ(AAP Poster Campaign).

ಪೋಸ್ಟರ್ ವಾರ್ ಲಾಂಚ್ ಮಾಡಿದ ಆಪ್, ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ಟೀಕೆ ಮಾಡಿದೆ. ಮೋದಿ ಅವರ ಶೈಕ್ಷಣಿಕ ಅರ್ಹತೆಗಳ ಬಗ್ಗೆ ಪ್ರಶ್ನೆ ಎತ್ತಲಾಗಿದೆ. ಭಾರತದ ಪ್ರಧಾನಿ ಓದು ಬರಹ ಕಲಿತವರು ಆಗಬೇಕೆ ಬೇಡ್ವೇ ಎಂದು ಕೇಳಿದೆ. ಎಎಪಿ ಮಾರ್ಚ್ 30 ರಂದು ದೇಶಾದ್ಯಂತ ರಾಜ್ಯಗಳಲ್ಲಿ ಪೋಸ್ಟರ್‌ಗಳನ್ನು ಪ್ರದರ್ಶಿಸುತ್ತದೆ. ಪಕ್ಷದ ಎಲ್ಲಾ ರಾಜ್ಯ ಘಟಕಗಳಿಗೆ ಆಯಾ ರಾಜ್ಯಗಳಲ್ಲಿ ಪೋಸ್ಟರ್‌ಗಳನ್ನು ಅಂಟಿಸಲು ಸೂಚಿಸಲಾಗಿದೆ. ಪೋಸ್ಟರ್‌ಗಳನ್ನು 11 ಭಾಷೆಗಳಲ್ಲಿ ಮುದ್ರಿಸಲಾಗಿದೆ ಎಂದು ದೆಹಲಿ ಎಎಪಿ ಮುಖ್ಯಸ್ಥ ಗೋಪಾಲ್ ರೈ ಪಿಟಿಐಗೆ ತಿಳಿಸಿದ್ದಾರೆ.

ಭಾರತದ ಎಲ್ಲ ವಿಶ್ವವಿದ್ಯಾಲಯಗಳಲ್ಲೂ ಆಪ್ ಮೋದಿ ವಿರೋಧಿ ಪೋಸ್ಟರ್ ಕ್ಯಾಂಪೇನ್ ಆರಂಭಿಸಲಿದೆ. ಆಪ್ 22 ರಾಜ್ಯಗಳಲ್ಲಿ ಪೋಸ್ಟರ್‌ಗಳನ್ನು ಪ್ರದರ್ಶಿಸಲಿದೆ. ಆಪ್ ಹಾಕಿರುವ ಪೋಸ್ಟರ್‌ಗಳು ಹಿಂದಿ ಮತ್ತು ಇತರ ಪ್ರಾದೇಶಿಕ ಭಾಷೆಗಳಾದ ಪಂಜಾಬಿ, ಗುಜರಾತಿ, ಒಡಿಯಾ ಇತ್ಯಾದಿ ಭಾಷೆಗಳಲ್ಲಿ ಇರಲಿದೆ ಎಂದು ಗೋಪಾಲ್ ರೈ ಹೇಳಿದ್ದಾರೆ.

ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಂತ್ಯ ಮಾಡುತ್ತಿದ್ದಾರೆ. ಭಾರತವನ್ನು ಪ್ರತಿಪಕ್ಷ ಮುಕ್ತ ರಾಷ್ಟ್ರವನ್ನಾಗಿ ಮಾಡಲು ಮೋದಿ ಹೊರಟಿದ್ದಾರೆ. ಪ್ರತಿಪಕ್ಷದ ನಾಯಕರನ್ನು ಗುರಿಯಾಗಿಸಿಕೊಂಡು ಕೇಂದ್ರ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಆಪ್ ದೂರಿದೆ. ಮೋದಿ ಅವರು ಅಧಿಕಾರದಲ್ಲಿರುವತನಕ ಭಾರತವು ಬಿಕ್ಕಟ್ಟು ಎದುರಿಸಲಿದೆ ಎಂದು ಮತದಾರರಿಗೆ ಅನಿಸುತ್ತಿದೆ. ಮೋದಿ ಪ್ರಧಾನಿಯಾಗಿ ಇರುವ ತನಕ ಯುವಕರು, ರೈತರ ಮತ್ತು ಹಣದುಬ್ಬರ ಸಮಸ್ಯೆ ಬಗೆಹರಿಯುವುದಿಲ್ಲ. ಏಪ್ರಿಲ್ 10ರಿಂದ ಆಪ್ ದೇಶದ ಎಲ್ಲ ವಿವಿಗಳಲ್ಲಿ ಪೋಸ್ಟರ್ ಕ್ಯಾಂಪ್ ಆರಂಭಿಸಲಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: AAP : ಆಪ್‌ ರಾಜ್ಯ ಘಟಕದ ಮುಖಂಡನ ಮೇಲೆ ಹಲ್ಲೆಗೆ ಯತ್ನ

ಕಳೆದ ವಾರ, ರಾಷ್ಟ್ರ ರಾಜಧಾನಿಯಾದ್ಯಂತ ಗೋಡೆಗಳು ಮತ್ತು ವಿದ್ಯುತ್ ಕಂಬಗಳ ಮೇಲೆ ಮೋದಿ ಹಟಾವೋ, ದೇಶ್ ಬಚಾವೋ (ಮೋದಿಯನ್ನು ಓಡಿಸಿ, ಭಾರತವನ್ನು ಉಳಿಸಿ) ಎಂಬ ಪೋಸ್ಟರ್‌ಗಳು ಕಾಣಿಸಿಕೊಂಡವು, ಈ ಘಟನೆಗೆ ಸಂಬಂಧಿಸಿದಂತೆ ದಿಲ್ಲಿ ಪೊಲೀಸರು ಆರು ಜನರನ್ನು ಬಂಧಿಸಿದ್ದಾರೆ. ಪ್ರಧಾನಿ ಮೋದಿಯನ್ನು ಪದಚ್ಯುತಗೊಳಿಸುವಂತೆ ಕೋರಿ ಸಾವಿರಾರು ಪೋಸ್ಟರ್‌ಗಳು ರಾಷ್ಟ್ರ ರಾಜಧಾನಿಯಲ್ಲಿ ಕಂಡುಬಂದ ನಂತರ ದೆಹಲಿ ಪೊಲೀಸರು 100 ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ.

ಆಪ್‌ನ ಪ್ರಮುಖ ಸಚಿವರಾಗಿದ್ದ ಸತ್ಯೇಂದ್ರ ಜೈನ್ ಮತ್ತು ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಅವರನ್ನು ಕೇಂದ್ರ ತನಿಖಾ ಸಂಸ್ಥೆಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿವೆ. ಇವರಿಬ್ಬರ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಹೊರಿಸಲಾಗಿದೆ. ಏತನ್ಮಧ್ಯೆ, ದೇಶದ ಬಹಳಷ್ಟು ಪ್ರತಿಪಕ್ಷಗಳ ನಾಯಕರು ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿವೆ. ಪ್ರತಿಪಕ್ಷ ನಾಯಕರನ್ನು ಟಾರ್ಟೆಗ್ ಮಾಡಲಾಗುತ್ತಿದೆ. ಕೇಂದ್ರ ಸಂಸ್ಥೆಗಳಾದ ಸಿಬಿಐ, ಇಡಿಗಳನ್ನು ಬಳಸಿಕೊಂಡು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಾರ್ಟಿ ಮೋದಿ ವಿರುದ್ದ ದೇಶಾದ್ಯಂತ ತನ್ನ ಕ್ಯಾಂಪೇನ್ ಆರಂಭಿಸಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ತಂತ್ರಜ್ಞಾನ

Deep Fakes: ಶೇ. 75 ಭಾರತೀಯರು ಡೀಪ್‌ಫೇಕ್‌ಗೆ ಒಳಗಾಗಿದ್ದಾರೆ; ಗೊತ್ತಾಗಿದ್ದು ಶೇ.22 ಮಂದಿಗೆ ಮಾತ್ರ!

Deep Fakes Report: ಲೋಕಸಭಾ ಚುನಾವಣೆ, ಇಂಡಿಯನ್ ಪ್ರೀಮಿಯರ್ ಲೀಗ್ ನಂತಹ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವವವರು ಹೆಚ್ಚಾಗಿ ಡೀಪ್‌ಫೇಕ್‌ಗಳಿಗೆ ಒಳಗಾಗಿದ್ದಾರೆ. ಇದರ ನೈಜ್ಯ ಅಂಕಿ ಅಂಶಗಳು ಮತ್ತಷ್ಟು ಹೆಚ್ಚಿರಬಹುದು ಎಂದು ಕಂಪ್ಯೂಟರ್ ಭದ್ರತಾ ಕಂಪೆನಿ ಮ್ಯಾಕ್‌ಅಫೀ ತಿಳಿಸಿದೆ.

VISTARANEWS.COM


on

By

deepfake
Koo

ನವದೆಹಲಿ: ಭಾರತೀಯರಲ್ಲಿ (indian’s) ಶೇ. 75ರಷ್ಟು ಮಂದಿ ಡೀಪ್‌ಫೇಕ್‌ (Deep Fakes) ಪಿಡುಗಿಗೆ ಒಳಗಾಗಿದ್ದು, ಶೇಕಡಾ 22ರಷ್ಟು ಮಂದಿಗೆ ಮಾತ್ರ ಇದು ಗಮನಕ್ಕೆ ಬಂದಿದೆ. ತಮ್ಮ ಡೀಪ್ ಫೇಕ್ ಮಾಡಿರುವ ವಿಡಿಯೋ, ಚಿತ್ರ ಅಥವಾ ರೆಕಾರ್ಡಿಂಗ್ ಅನ್ನು ಕೆಲವರು ಮಾತ್ರ ನೋಡಿ ಅದರ ವಿರುದ್ಧ ಕ್ರಮ ಕೈಗೊಂಡಿದ್ದಾರೆ ಎಂದು ಕಂಪ್ಯೂಟರ್ ಭದ್ರತಾ ಕಂಪನಿ (Computer security company) ಮ್ಯಾಕ್‌ಅಫೀಯ (McAfee) ಸಂಶೋಧನೆಗಳು ತಿಳಿಸಿದೆ.

ಲೋಕಸಭಾ ಚುನಾವಣೆ (lok sabha election), ಇಂಡಿಯನ್ ಪ್ರೀಮಿಯರ್ ಲೀಗ್ (IPL) ನಂತಹ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವವರು ಹೆಚ್ಚಾಗಿ ಡೀಪ್‌ಫೇಕ್‌ಗಳಿಗೆ ಒಳಗಾಗಿದ್ದಾರೆ. ಇವರ ನೈಜ್ಯ ಪ್ರಮಾಣ ಮತ್ತಷ್ಟು ಹೆಚ್ಚಾಗಿರಬಹುದು. ಅನೇಕ ಭಾರತೀಯರಿಗೆ ನಿಜ ಮತ್ತು ನಕಲಿ ಏನೆಂದು ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನಗಳ ಬಗ್ಗೆ ಹೆಚ್ಚಿನವರಿಗೆ ಅರಿವಿಲ್ಲ. ಹೀಗಾಗಿ ಈ ರೀತಿ ಆಗಿದೆ ಎನ್ನಲಾಗಿದೆ.

ಶೇ. 22ರಷ್ಟು ಮಾತ್ರ ಬಹಿರಂಗ

ಕೃತಕ ಬುದ್ಧಿಮತ್ತೆಯ ಪ್ರಭಾವ ಮತ್ತು ಗ್ರಾಹಕರ ದೈನಂದಿನ ಜೀವನದಲ್ಲಿ ಡೀಪ್‌ಫೇಕ್‌ಗಳ ಹೆಚ್ಚಳವನ್ನು ಕಂಡುಹಿಡಿಯಲು 2024 ರ ಆರಂಭದಲ್ಲಿ ಸಂಶೋಧನೆಯನ್ನು ನಡೆಸಲಾಯಿತು. ಈ ಸಮೀಕ್ಷೆಯ ಸಮಯದಲ್ಲಿ, ಸುಮಾರು 1ರಲ್ಲಿ 4 ಭಾರತೀಯರು ಅಂದರೆ ಸರಿಸುಮಾರು ಶೇ. 22ರಷ್ಟು ಮಂದಿ ಇತ್ತೀಚೆಗೆ ನಕಲಿ ಎಂದು ಕಂಡುಹಿಡಿದ ವಿಡಿಯೋಗಳನ್ನು ನೋಡಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: WhatsApp: ಭಾರತ ತೊರೆಯುವುದಾಗಿ ವಾಟ್ಸ್‌ಆ್ಯಪ್‌ ಎಚ್ಚರಿಕೆ; ಶೀಘ್ರದಲ್ಲೇ ಆ್ಯಪ್‌ ಅಲಭ್ಯ?


ವರ್ಷದಿಂದ ಹೆಚ್ಚಾಗಿದೆ ಕಾಳಜಿ

ಒಂದು ವರ್ಷದಲ್ಲಿ 10ರಲ್ಲಿ 8 ಮಂದಿ, ಅಂದರೆ ಸರಿ ಸುಮಾರು ಶೇ. 80ರಷ್ಟು ಮಂದಿ ಇದ್ದಕ್ಕಿಂತ ಡೀಪ್‌ಫೇಕ್‌ಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ.

ಅರ್ಧಕ್ಕಿಂತ ಹೆಚ್ಚು ಜನರಲ್ಲಿ ಶೇ. 64ರಷ್ಟು ಮಂದಿಗೆ ಕೃತಕ ಬುದ್ಧಿಮತ್ತೆಯ ಆನ್‌ಲೈನ್ ಸ್ಕ್ಯಾಮ್‌ಗಳನ್ನು ಗುರುತಿಸಲು ಕಷ್ಟಕರವಾಗಿದೆ ಎಂದು ಹೇಳುತ್ತಾರೆ. ಆದರೆ ಸುಮಾರು ಶೇ. 30ರಷ್ಟು ಮಂದಿ ಕೃತಕ ಬುದ್ಧಿಮತ್ತೆಯೊಂದಿಗೆ ರಚಿಸಲಾದ ಧ್ವನಿ ಮೇಲ್ ಅಥವಾ ಧ್ವನಿ ಟಿಪ್ಪಣಿಯನ್ನು ಹಂಚಿಕೊಂಡರೆ ಮಾತ್ರ ನಕಲಿ ಎಂದು ಗುರುತಿಸಬಹುದು ಎಂದು ಹೇಳಿದ್ದಾರೆ.


ಶೇ. 75ರಷ್ಟು ಮಂದಿಗೆ ಗೊತ್ತಾಗಿದೆ

ಮ್ಯಾಕ್‌ಅಫೀಯ ಪ್ರಕಾರ ಕಳೆದ 12 ತಿಂಗಳುಗಳಲ್ಲಿ ಶೇ. 75ರಷ್ಟು ಮಂದಿ ತಾವು ಡೀಪ್‌ಫೇಕ್ ವಿಷಯವನ್ನು ನೋಡಿದ್ದೇವೆ ಎಂದು ಹೇಳುತ್ತಾರೆ. ಶೇ. 38ರಷ್ಟು ಮಂದಿ ಡೀಪ್‌ಫೇಕ್ ಹಗರಣವನ್ನು ಎದುರಿಸಿದ್ದಾರೆ.

ಶೇ. 57ರಷ್ಟು ಸೆಲೆಬ್ರಿಟಿಗಳು

ಡೀಪ್‌ಫೇಕ್ ವಂಚನೆಗೆ ಒಳಗಾದವರಲ್ಲಿ 57 ಪ್ರತಿಶತದಷ್ಟು ಸೆಲೆಬ್ರಿಟಿಗಳಾಗಿದ್ದಾರೆ. ವಿಡಿಯೋ ಚಿತ್ರ ಅಥವಾ ಆಡಿಯೋವನ್ನು ನೋಡಿ ಅದು ನಿಜವೆಂದು ಭಾವಿಸಿ ಶೇ. 31 ರಷ್ಟು ಮಂದಿ ಹಣವನ್ನು ಕಳೆದುಕೊಂಡಿದ್ದಾರೆ. ಶೇ. 40ರಷ್ಟು ಮಂದಿ ಜನರು ತಮ್ಮ ಧ್ವನಿಯನ್ನು ಕಾಪಿ ಮಾಡಲಾಗಿದೆ. ವೈಯಕ್ತಿಕ ಮಾಹಿತಿ ಅಥವಾ ಹಣದ ಲೆಕ್ಕವನ್ನು ಬಹಿರಂಗಪಡಿಸಲು ತಮಗೆ ತಿಳಿದಿರುವ ಯಾರನ್ನಾದರೂ ದಾರಿತಪ್ಪಿಸಲು ಬಳಸುತ್ತಾರೆ ಎಂದು ಕಂಡುಹಿಡಿಯಲಾಗಿದೆ. ಶೇ. 39ರಷ್ಟು ಜನರು ಕರೆ, ಧ್ವನಿಮೇಲ್ ಅಥವಾ ಧ್ವನಿ ಟಿಪ್ಪಣಿಯನ್ನು ಸ್ವೀಕರಿಸಿದ್ದಾರೆಂದು ವರದಿ ಮಾಡಿದ್ದಾರೆ.

ಡೀಪ್‌ಫೇಕ್‌ ಅಪಾಯ

ಡೀಪ್‌ಫೇಕ್‌ ನಿಂದಾಗುವ ಅಪಾಯಗಳ ಬಗ್ಗೆ ಕೇಳಿದಾಗ ಶೇ. 55ರಷ್ಟು ಮಂದಿ ಸೈಬರ್‌ ವಂಚನೆಗೆ ಒಳಗಾಗುತ್ತಾರೆ ಎಂದು ಹೇಳಿದರು. ಶೇ. 52ರಷ್ಟು ಮಂದಿ ನಕಲಿ ಅಶ್ಲೀಲ ವಿಷಯವನ್ನು ರಚಿಸುತ್ತಿರುವುದಾಗಿ ಹೇಳಿದರು. ಶೇ. 37 ರಷ್ಟು ಮಂದಿ ಮಾಧ್ಯಮದ ಮೇಲಿನ ಸಾರ್ವಜನಿಕ ನಂಬಿಕೆಯನ್ನು ದುರ್ಬಲಗೊಳಿಸಿರುವುದಾಗಿ ತಿಳಿಸಿದ್ದಾರೆ. ಶೇ.31ರಷ್ಟು ಮಂದಿ ಚುನಾವಣೆಯ ಮೇಲೆ ಪ್ರಭಾವ ಬೀರುವುದಾಗಿ ಹೇಳಿದ್ದು, ಶೇ.27ರಷ್ಟು ಮಂದಿ ಐತಿಹಾಸಿಕ ಸತ್ಯಗಳನ್ನು ತಿರುಚುತ್ತಿದ್ದಾರೆ ಎಂದು ತಿಳಿಸಿದ್ದಾರೆ.

Continue Reading

ದೇಶ

X Server Down: ದೇಶಾದ್ಯಂತ ಎಕ್ಸ್‌ ಜಾಲತಾಣದ ಸರ್ವರ್‌ ಡೌನ್;‌ ನಿಮ್ಮ ಖಾತೆ ಚೆಕ್‌ ಮಾಡಿಕೊಳ್ಳಿ

X Server Down: ಎಕ್ಸ್‌ ಸಾಮಾಜಿಕ ಜಾಲತಾಣದ ಸರ್ವರ್‌ ಡೌನ್‌ ಆಗಿದ್ದು, ಬಳಕೆದಾರರು ಪರದಾಡುತ್ತಿದ್ದಾರೆ. ಭಾರತದಲ್ಲಿ ಮಾತ್ರ ಸರ್ವರ್‌ ಡೌನ್‌ ಆಗಿದೆ ಎಂದು ಹೇಳಲಾಗುತ್ತಿದೆ. ಆದಾಗ್ಯೂ, ಇದರ ಕುರಿತು ಎಕ್ಸ್‌ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ, ಸರ್ವರ್‌ ಡೌನ್‌ ಆಗಿರುವ ಬಗ್ಗೆ ಜಾಲತಾಣಗಳಲ್ಲಿ ಟ್ರೋಲ್‌ಗಳು, ಮೀಮ್‌ಗಳು ಹರಿದಾಡುತ್ತಿವೆ.

VISTARANEWS.COM


on

X Server Down
Koo

ಬೆಂಗಳೂರು: ಕರ್ನಾಟಕ (Karnataka) ಸೇರಿ ದೇಶಾದ್ಯಂತ ಎಕ್ಸ್‌ (ಮೊದಲು ಟ್ವಿಟರ್)‌ ಸಾಮಾಜಿಕ ಜಾಲತಾಣದ ಸರ್ವರ್‌ ಡೌನ್‌ (X Server Down) ಆಗಿದೆ. ಅದರಲ್ಲೂ, ವೆಬ್‌ ಯೂಸರ್‌ಗಳು (ಲ್ಯಾಪ್‌ಟಾಪ್‌, ಕಂಪ್ಯೂಟರ್ ಬಳಕೆದಾರರು)‌ ಹೆಚ್ಚಿನ ತೊಂದರೆ ಅನುಭವಿಸಿದ್ದು, ಬಳಕೆದಾರರು ಪರದಾಡುವಂತಾಗಿದೆ. ಕೆಲವರಿಗೆ ಅಪ್ಲಿಕೇಶನ್‌ನಲ್ಲೂ ಸಮಸ್ಯೆಯಾಗಿದೆ ಎಂದು ವರದಿಯಾಗಿದೆ.

ಶುಕ್ರವಾರ (ಏಪ್ರಿಲ್‌ 26) ಮಧ್ಯಾಹ್ನ 3.23ರ ಸುಮಾರಿಗೆ ಟ್ವಿಟರ್‌ ಸರ್ವರ್‌ ಡೌನ್‌ ಆಗಿದೆ ಎಂದು ಡೌನ್‌ಡಿಟೆಕ್ಟರ್‌ ಮಾಹಿತಿ ನೀಡಿದೆ. ಶೇ.53ರಷ್ಟು ಜನ ವೆಬ್‌ನಲ್ಲಿ ಸಮಸ್ಯೆ ಎದುರಿಸಿದರೆ, ಶೇ.29ರಷ್ಟು ಮಂದಿಗೆ ಸರ್ವರ್‌ನಲ್ಲಿ ಸಮಸ್ಯೆ ಎದುರಾಗಿದೆ ಹಾಗೂ ಶೇ.18ರಷ್ಟು ಬಳಕೆದಾರರು ಅಪ್ಲಿಕೇಶನ್‌ನಲ್ಲಿ (App) ಸಮಸ್ಯೆ ಎದುರಿಸಿದ್ದಾರೆ. ಒಂದಷ್ಟು ಜನರಿಗೆ ಪೋಸ್ಟ್‌ಗಳು, ಅಪ್‌ಡೇಟ್‌ಗಳು ಕಾಣಿಸಿಲ್ಲ. ಇನ್ನೂ ಒಂದಷ್ಟು ಜನರ ಖಾತೆಗಳು ಲಾಗೌಟ್‌ ಆಗಿವೆ. ಕೆಲವೊಂದಿಷ್ಟು ಮಂದಿಗೆ ತಮ್ಮ ಪೋಸ್ಟ್‌ಗಳು ಅಪ್‌ಲೋಡ್‌ ಆಗಿಲ್ಲ.

ಎಕ್ಸ್‌ ಸಾಮಾಜಿಕ ಜಾಲತಾಣದ ಸರ್ವರ್‌ ಡೌನ್‌ ಆಗುತ್ತಲೇ ಬೇರೆ ಸಾಮಾಜಿಕ ಜಾಲತಾಣಗಳಲ್ಲಿ ಸರ್ವರ್‌ ಡೌನ್‌ ಕುರಿತು ದೂರುಗಳು, ಮೀಮ್‌ಗಳು ಹರಿದಾಡಿವೆ. ಇನ್ನೊಂದಿಷ್ಟು ಜನ ಎಕ್ಸ್‌ನಲ್ಲೂ ಟ್ರೋಲ್‌ ಮಾಡಿದ್ದಾರೆ. ಸರ್ವರ್‌ ಡೌನ್‌ ಆಗಿರುವ ಕುರಿತು ಇದುವರೆಗೆ ಟ್ವಿಟರ್‌ ಯಾವುದೇ ಮಾಹಿತಿ ನೀಡಿಲ್ಲ. ಬೇರೆ ದೇಶಗಳಲ್ಲೂ ಸಮಸ್ಯೆಯಾಗಿದೆ ಎಂಬುದರ ಕುರಿತು ಮಾಹಿತಿ ಲಭ್ಯವಾಗಿಲ್ಲ.

ಕೆಲ ತಿಂಗಳ ಹಿಂದಷ್ಟೇ ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಹಾಗೂ ಯುಟ್ಯೂಬ್‌ ಸರ್ವರ್‌ಗಳು ಒಂದೇ ಕಾಲಕ್ಕೆ ಡೌನ್‌ ಆಗಿದ್ದವು. ಇಂಟರ್‌ನೆಟ್‌ ಟ್ರಾಫಿಕ್‌ ಮೇಲೆ ನಿಗಾ ಇರಿಸುವ ಡೌನ್‌ ಡಿಟೆಕ್ಟರ್‌ ಸಂಸ್ಥೆಯು ಯುಟ್ಯೂಬ್‌ ಬಳಕೆದಾರರ ಸಮಸ್ಯೆ ಕುರಿತು ಮಾಹಿತಿ ನೀಡಿತ್ತು. ಗೂಗಲ್‌ ಕಂಪನಿಯ ಯುಟ್ಯೂಬ್‌ನಲ್ಲಿ ವಿಡಿಯೊಗಳು ಸ್ಟ್ರೀಮ್‌ ಆಗುತ್ತಿಲ್ಲ. ಹೊಸ ವಿಡಿಯೊಗಳನ್ನು ಅಪ್‌ಲೋಡ್‌ ಮಾಡಲು ಕೂಡ ಆಗುತ್ತಿಲ್ಲ ಎಂಬುದಾಗಿ ನೂರಾರು ಜನ ದೂರುತ್ತಿದ್ದಾರೆ ಎಂಬುದಾಗಿ ತಿಳಿಸಿತ್ತು. ಯುಟ್ಯೂಬ್‌ ಬಳಕೆದಾರರು ಕೂಡ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊಗಳು ಸ್ಟ್ರೀಮ್‌, ಡೌನ್‌ಲೋಡ್‌ ಆಗದಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: Banking service down : ಸರ್ವರ್‌ ಸಮಸ್ಯೆಯಿಂದ ನೆಟ್ ಬ್ಯಾಂಕಿಂಗ್‌ ಸೇವೆಗಳಿಗೆ ಅಡಚಣೆ, ಗ್ರಾಹಕರ ಪರದಾಟ

Continue Reading

ದೇಶ

Congress Manifesto: ಮುಸಲ್ಮಾನರಿಗೆ ಸಂಪತ್ತು ಹಂಚಿಕೆ; ಮನಮೋಹನ್‌ ಸಿಂಗ್‌ ಹಳೆಯ ವಿಡಿಯೋ ಶೇರ್‌ ಮಾಡಿದ ಬಿಜೆಪಿ!

Congress Manifesto: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿ ಗೆ ಪತ್ರ ಬರೆದಿರುವ ಬೆನ್ನಲ್ಲೇ ಬಿಜೆಪಿ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಹಳೆಯ ವಿಡಿಯೋವೊಂದನ್ನು ಶೇರ್‌ ಮಾಡುವ ಮೂಲಕ ತಿರುಗೇಟು ಕೊಟ್ಟಿದೆ.

VISTARANEWS.COM


on

By

Koo

ನವದೆಹಲಿ: ಕೈ-ಕಮಲ ಪಾಳಯದಲ್ಲಿ ಪರಸ್ಪರ ವಾಕ್ಸಮರಕ್ಕೆ ಕಾರಣವಾಗಿರುವ ಕಾಂಗ್ರೆಸ್‌ ಪ್ರಣಾಳಿಕೆ (Congress Manifesto) ವಿಚಾರಕ್ಕೆ ಸಂಬಂಧಿಸಿದಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಪ್ರಧಾನಿ ನರೇಂದ್ರ ಮೋದಿ (Narendra Modi)ಗೆ ಪತ್ರ ಬರೆದಿರುವ ಬೆನ್ನಲ್ಲೇ ಬಿಜೆಪಿ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ (Manamohan Singh) ಅವರ ಹಳೆಯ ವಿಡಿಯೋವೊಂದನ್ನು ಶೇರ್‌ ಮಾಡುವ ಮೂಲಕ ತಿರುಗೇಟು ಕೊಟ್ಟಿದೆ. ವಿಡಿಯೋದಲ್ಲಿ ಅಲ್ಪಸಂಖ್ಯಾತರು ಇತರರಿಗಿಂತ ಹೆಚ್ಚು ವಿಶೇಷ ಸವಲತ್ತು ಪಡೆಯಲು ಅರ್ಹರು ಎಂದು ಮನಮೋಹನ್‌ ಸಿಂಗ್‌ ಹೇಳುತ್ತಿರುವುದು ಸ್ಪಷ್ಟವಾಗಿದೆ.

ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಕಾಂಗ್ರೆಸ್‌ ಸಂಪತ್ತಿನ ಮರು ಹಂಚಿಕೆ ಭರವಸೆ ನೀಡಿರುವ ವಿಚಾರವನ್ನೇ ಅಸ್ತ್ರವನ್ನಾಗಿಸಿಕೊಂಡಿರುವ ಬಿಜೆಪಿ, ಕಾಂಗ್ರೆಸ್‌ ಮುಸ್ಲಿಂ ಓಲೈಕೆ ಪಕ್ಷ ಎಂಬುದನ್ನು ಮತ್ತೆ ಸಾಬೀತು ಪಡಿಸಿದೆ ವಾಗ್ದಾಳಿ ನಡೆಸಿದೆ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿಯವರು ಕೂಡ ಇದೇ ವಿಚಾರದ ಬಗ್ಗೆ ಮತ್ತೆ ಮತ್ತೆ ಪ್ರಸ್ತಾಪಿಸಿ, ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಜನ ಕಷ್ಟ ಪಟ್ಟು ದುಡಿದ ಹಣ, ಸಂಪತ್ತನ್ನು ತನ್ನ ಸ್ವಾರ್ಥಕ್ಕಾಗಿ ಒಳ ನುಸುಳುಕೋರರು ಮತ್ತು ಅತಿ ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ಹಂಚಲಿದೆ ಎಂದು ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದ ಮಲ್ಲಿಕಾರ್ಜುನ ಖರ್ಗೆ, ಮುಖತಃ ಭೇಟಿಯಾಗಿ ಕಾಂಗ್ರೆಸ್‌ ಪ್ರಣಾಳಿಕೆಯನ್ನು ತಮಗೆ ವಿವರಿಸುವುದಾಗಿ ಹೇಳಿದ್ದರು.

ಇದರ ಬೆನ್ನಲ್ಲೇ ಬಿಜೆಪಿ 2009ರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿದೆ. ಈ ವಿಡಿಯೋದಲ್ಲಿ ಅಲ್ಪಸಂಖ್ಯಾತರು, ಅದರಲ್ಲೂ ಮುಸ್ಲಿಂ ಅಲ್ಪ ಸಂಖ್ಯಾತರು ಒಂದು ವೇಳೆ ಬಡವರಾಗಿದ್ದರೆ ಅವರಿಗೆ ಮೊದಲ ಆದ್ಯತೆ ಕೊಟ್ಟು ಸವಲತ್ತುಗಳನ್ನು ಕೊಡಬೇಕು. ರಾಷ್ಟ್ರೀಯ ಸಂಪತ್ತಿನ ಹಂಚಿಕೆ ವಿಚಾರ ಬಂದಾಗ ಮುಸ್ಲಿಮರಿಗೆ ಮೊದಲ ಆದ್ಯತೆ ಕೊಡಬೇಕು. ರಾಷ್ಟ್ರೀಯ ಸಂಪತ್ತಿನಲ್ಲಿ ಮೊದಲ ಹಕ್ಕು ಮುಸ್ಲಿಮರದ್ದು ಎಂದು ಮನಮೋಹನ್‌ ಸಿಂಗ್‌ ಹೇಳಿದ್ದಾರೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ಸಂಪತ್ತಿನ ಹಂಚಿಕೆ ಬಗ್ಗೆ ನೀಡಿರುವ ಹೇಳಿಕೆಗೆ ಸ್ಪಷ್ಟನೆ ನೀಡುತ್ತಿರುವ ಕಾಂಗ್ರೆಸ್‌ ನಿಜವಾದ ಉದ್ದೇಶ ಏನಿದೆ ಏಂಬುದಕ್ಕೆ ಈ ವಿಡಿಯೋ ಸಾಕ್ಷಿ. ಎಲ್ಲಾ ವಿಚಾರದಲ್ಲಿ ಕಾಂಗ್ರೆಸ್‌ ಮುಸ್ಲಿಂ ಓಲೈಕೆ ಮನಸ್ಥಿತಿಹ ಹೊಂದಿರುರುವುದು ಸ್ಪಷ್ಟವಾಗಿದೆ. ಕಾಂಗ್ರೆಸ್‌ ಇದೀಗ ಮೀಸಲಾತಿಯಿಂದ ಸಂಪನ್ಮೂಲ ಹಂಚಿಕೆಯತ್ತ ತನ್ನ ಗುರಿಯನ್ನು ಹೊಂದಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದ್ದಾರೆ.

ಮನಮೋಹನ್‌ ಸಿಂಗ್‌ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ದೇಶದ ಸಂಪತ್ತಿನಲ್ಲಿ ಮುಸ್ಲಿಮರಿಗೇ ಮೊದಲ ಅಧಿಕಾರ ಇತ್ತು. ಕಾಂಗ್ರೆಸ್‌ನವರು ದೇಶದ ಸಂಪತ್ತನ್ನು ಒಟ್ಟುಗೂಡಿಸಿ ಅಕ್ರಮ ವಲಸಿಗರು, ಹೆಚ್ಚು ಮಕ್ಕಳನ್ನು ಹೊಂದಿರುವ ಸಮುದಾಯಕ್ಕೆ ನೀಡಲಿದೆ. ನಿಮ್ಮ ಶ್ರಮದ ಹಣವನ್ನು ಅಕ್ರಮ ವಲಸಿಗರಿಗೆ ನೀಡಬೇಕೆ? ನೀವು ಇದನ್ನು ಒಪ್ಪುವಿರೇ? ಕಾಂಗ್ರೆಸ್‌ ಪ್ರಣಾಳಿಕೆ ಇದನ್ನು ಹೇಳುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರ ಭಾಷಣದಲ್ಲಿ ಹೇಳಿದ್ದರು.

ಇದನ್ನು ಓದಿ: Palki Sharma: ಬ್ರಿಟನ್‌ನಲ್ಲಿ ಭಾರತದ ಏಳಿಗೆ ಬಿಚ್ಚಿಟ್ಟ ಪತ್ರಕರ್ತೆ ಪಾಲ್ಕಿ ಶರ್ಮಾಗೆ ಮೋದಿ ಮೆಚ್ಚುಗೆ!

ಈ ವಿಚಾರ ರಾಜಕೀಯ ತಿರುವು ಪಡ್ದುಕೊಳ‍್ಳುತಿದ್ದಂತೆ ಸ್ಪಷ್ಟನೆ ಕೊಟ್ಟ ಕಾಂಗ್ರೆಸ್‌, ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಅಂತಹ ಯಾವುದೇ ಭರವಸೆ ನೀಡಿಲ್ಲ ಎಂದು ಹೇಳಿದೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ರಾಷ್ಟ್ರ್ರವ್ಯಾಪಿ ಸಾಮಾಜಿಕ-ಆರ್ಥಿಕ ಮತ್ತು ಜಾತಿ ಸಮೀಕ್ಷೆ ನಡೆಸುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಭರವಸೆ ಕೊಟ್ಟಿದೆ.

Continue Reading

ಪ್ರಮುಖ ಸುದ್ದಿ

PM Narendra Modi: “ಇವಿಎಂ ಅಪಪ್ರಚಾರ ಮಾಡುವವರಿಗೆ ಕಪಾಳಮೋಕ್ಷ…” ಸುಪ್ರೀಂ ಕೋರ್ಟ್‌ ತೀರ್ಪಿಗೆ ಪ್ರಧಾನಿ ಸ್ವಾಗತ

PM Narendra Modi: ಇಂದು ಮುಂಜಾನೆ, ಸುಪ್ರೀಂ ಕೋರ್ಟ್ ಪೇಪರ್ ಬ್ಯಾಲೆಟ್ ಮತದಾನದ ಮನವಿಗಳನ್ನು ತಿರಸ್ಕರಿಸಿತು. ಇವಿಎಂಗಳ ವಿಶ್ವಾಸಾರ್ಹತೆ ಮತ್ತು ವಿವಿಪ್ಯಾಟ್‌ಗಳೊಂದಿಗೆ ಅವುಗಳ ಸಂಯೋಜನೆಯನ್ನು ದೃಢಪಡಿಸಿತು. ಚುನಾವಣಾ ಮತಯಂತ್ರಗಳಲ್ಲಿ (EVM) ದಾಖಲಾದ ಎಲ್ಲ ಮತಗಳನ್ನು ವಿವಿಪ್ಯಾಟ್‌ಗಳ ಜತೆ ತಾಳೆ (VVPAT Verification) ಮಾಡಬೇಕು ಎಂದು ಸಲ್ಲಿಸಿದ ಎಲ್ಲ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ.

VISTARANEWS.COM


on

Modi in Karnataka PM Modi to address rally in Bengaluru Here live video
Koo

ಹೊಸದಿಲ್ಲಿ: ಇವಿಎಂ- ವಿವಿಪ್ಯಾಟ್ (EVM- VVPAT) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ (Supreme Court) ತೀರ್ಪನ್ನು ಶುಕ್ರವಾರ ಸ್ವಾಗತಿಸಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi), “ಈ ಆದೇಶವು ನಿರಂತರವಾಗಿ ಇವಿಎಂ ಬಗ್ಗೆ ಅಪಪ್ರಚಾರ ಮಾಡಲು ಪ್ರಯತ್ನಿಸುತ್ತಿರುವ ಜನತೆಗೆ ನೀಡಿದ ಬಿಗಿಯಾದ ಕಪಾಳಮೋಕ್ಷವಾಗಿದೆ” ಎಂದು ಹೇಳಿದ್ದಾರೆ.

“ಈ ಜನರು ನಿರಂತರವಾಗಿ ಇವಿಎಂ ಮೇಲೆ ದೋಷ ಹೇರಲು ಪ್ರಯತ್ನಿಸಿದರು. ಆದರೆ ಇಂದು ಸುಪ್ರೀಂ ಕೋರ್ಟ್‌ ಅವರಿಗೆ ಬಹಳ ಬಿಗಿಯಾದ ತಪರಾಕಿ ನೀಡಿದೆ. ಅವರು ಸತ್ಯವನ್ನು ನೋಡಲು ಇಷ್ಟಪಡುವುದಿಲ್ಲ. ಇಂದು ಪ್ರಜಾಪ್ರಭುತ್ವಕ್ಕೆ ಒಳ್ಳೆಯ ದಿನ” ಎಂದು ಬಿಹಾರದ ಅರಾರಿಯಾದಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಪ್ರಧಾನಿ ಹೇಳಿದರು.

“ಇಂಡಿಯಾ ಮೈತ್ರಿಕೂಟʼದ ಪ್ರತಿಯೊಬ್ಬ ನಾಯಕನೂ ಇವಿಎಂ ಬಗ್ಗೆ ಸಾರ್ವಜನಿಕರ ಮನಸ್ಸಿನಲ್ಲಿ ಅನುಮಾನಗಳನ್ನು ಹುಟ್ಟುಹಾಕುವ ಪಾಪವನ್ನು ಮಾಡಿದ್ದಾರೆ. ಆದರೆ ಇಂದು, ದೇಶದ ಪ್ರಜಾಪ್ರಭುತ್ವದ ಶಕ್ತಿ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಶಕ್ತಿಯನ್ನು ನೋಡಿ. ಇಂದು ಅವರ ಕನಸುಗಳೆಲ್ಲವೂ ನುಚ್ಚುನೂರಾಗುವಂತೆ, ಮತಪೆಟ್ಟಿಗೆಯನ್ನು ಲೂಟಿ ಮಾಡಲು ಉದ್ದೇಶಿಸಿರುವವರಿಗೆ ಸುಪ್ರೀಂ ಕೋರ್ಟ್ ತೀವ್ರ ಹೊಡೆತ ನೀಡಿದೆ” ಎಂದಿದ್ದಾರೆ ಮೋದಿ.

“ಇಂದು ಇಡೀ ಜಗತ್ತು ಭಾರತದ ಪ್ರಜಾಪ್ರಭುತ್ವ, ಭಾರತದ ಚುನಾವಣಾ ಪ್ರಕ್ರಿಯೆ ಮತ್ತು ಚುನಾವಣೆಯಲ್ಲಿ ತಂತ್ರಜ್ಞಾನದ ಬಳಕೆಯನ್ನು ಹೊಗಳುತ್ತಿರುವಾಗ, ಈ ಜನರು ತಮ್ಮ ವೈಯಕ್ತಿಕ ಹಿತಾಸಕ್ತಿಗಳಿಗಾಗಿ ಇವಿಎಂ ಅನ್ನು ದೂಷಿಸುವಲ್ಲಿ ನಿರತರಾಗಿದ್ದರು. ಅವರು ನಿರಂತರವಾಗಿ ಪ್ರಜಾಪ್ರಭುತ್ವಕ್ಕೆ ದ್ರೋಹ ಮಾಡಲು ಪ್ರಯತ್ನಿಸಿದ್ದರು” ಎಂದು ಅವರು ಹೇಳಿದರು.

ಇಂದು ಮುಂಜಾನೆ, ಸುಪ್ರೀಂ ಕೋರ್ಟ್ ಪೇಪರ್ ಬ್ಯಾಲೆಟ್ ಮತದಾನದ ಮನವಿಗಳನ್ನು ತಿರಸ್ಕರಿಸಿತು. ಇವಿಎಂಗಳ ವಿಶ್ವಾಸಾರ್ಹತೆ ಮತ್ತು ವಿವಿಪ್ಯಾಟ್‌ಗಳೊಂದಿಗೆ ಅವುಗಳ ಸಂಯೋಜನೆಯನ್ನು ದೃಢಪಡಿಸಿತು. ಚುನಾವಣಾ ಮತಯಂತ್ರಗಳಲ್ಲಿ (EVM) ದಾಖಲಾದ ಎಲ್ಲ ಮತಗಳನ್ನು ವಿವಿಪ್ಯಾಟ್‌ಗಳ ಜತೆ ತಾಳೆ (VVPAT Verification) ಮಾಡಬೇಕು ಎಂದು ಸಲ್ಲಿಸಿದ ಎಲ್ಲ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ. ಹಾಗೆಯೇ, ದೇಶದಲ್ಲಿ ಬ್ಯಾಲಟ್‌ ಪೇಪರ್‌ ವ್ಯವಸ್ಥೆಯನ್ನು ಜಾರಿಗೊಳಿಸಬೇಕು ಎಂಬ ಕುರಿತು ಸಲ್ಲಿಸಿದ ಅರ್ಜಿಗಳನ್ನು ಕೂಡ ಸುಪ್ರೀಂ ಕೋರ್ಟ್‌ ತಿರಸ್ಕರಿಸಿದೆ. ಇದರೊಂದಿಗೆ ದೇಶದಲ್ಲಿ ಬ್ಯಾಲಟ್‌ ಪೇಪರ್‌ ವ್ಯವಸ್ಥೆ ಬರಬೇಕು, ಇವಿಎಂ ಸುರಕ್ಷತೆ ಇಲ್ಲ ಎಂದು ವಾದಿಸುವವರಿಗೆ, ಅರ್ಜಿ ಸಲ್ಲಿಸಿದವರಿಗೆ ಭಾರಿ ಹಿನ್ನಡೆಯಾಗಿದೆ.

ಅರ್ಜಿದಾರರ ವಾದ-ಪ್ರತಿವಾದವನ್ನು ಆಲಿಸಿದ್ದ, ಚುನಾವಣೆ ಆಯೋಗದ ಮಾಹಿತಿಯನ್ನೂ ಪಡೆದಿದ್ದ ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಹಾಗೂ ದೀಪಾಂಕರ್‌ ದತ್ತ ಅವರು, ಎಲ್ಲ ಅರ್ಜಿಗಳನ್ನು ತಿರಸ್ಕರಿಸಿದರು. “ನಾವು ತಾಂತ್ರಿಕ ವಿಭಾಗದ ಎಲ್ಲ ಮಾಹಿತಿಯನ್ನು ಗಮನಿಸಿದ್ದೇವೆ. ಹಾಗಾಗಿ, ಇವಿಎಂ ಮತಗಳನ್ನು ವಿವಿಪ್ಯಾಟ್‌ ಜತೆ ತಾಳೆ ಮಾಡುವ ಅವಶ್ಯಕತೆ ಇಲ್ಲ. ಹಾಗಾಗಿ, ಎಲ್ಲ ಅರ್ಜಿಗಳನ್ನು ತಿರಸ್ಕರಿಸಿದ್ದೇವೆ” ಎಂದು ನ್ಯಾಯಮೂರ್ತಿಗಳು ತಿಳಿಸಿದರು.

ಇದನ್ನೂ ಓದಿ: VVPAT Verification: ಬ್ಯಾಲಟ್‌ ಪೇಪರ್‌ ಬೇಕಿಲ್ಲ, ವಿವಿಪ್ಯಾಟ್‌ 100% ತಾಳೆಯೂ ಬೇಡ ಎಂದ ಸುಪ್ರೀಂ; ಇವಿಎಂ ವಿರೋಧಿಗಳಿಗೆ ಹಿನ್ನಡೆ

Continue Reading
Advertisement
Udupi Sri Krishna Temple
ಕರ್ನಾಟಕ10 mins ago

Udupi Sri Krishna Temple: ಮತದಾನದ ದಿನ ಕಮಲಾರೂಢನಾದ ಉಡುಪಿ ಕೃಷ್ಣ! ಇಲ್ಲಿದೆ ಫೋಟೊ ಝಲಕ್‌

IPL 2024
ಕ್ರೀಡೆ19 mins ago

IPL 2024 : ಅಂಕಪಟ್ಟಿಯ ಅಗ್ರಸ್ಥಾನಿ ರಾಜಸ್ಥಾನ್​ಗೆ ಸವಾಲೊಡ್ಡುವುದೇ ಲಕ್ನೊ ಸೂಪರ್​ ಜೈಂಟ್ಸ್​​

Lok Sabha Election 2024 2 villagers who boycotted voting cast their votes in evening
ಕರ್ನಾಟಕ43 mins ago

Lok Sabha Election 2024: ಮತದಾನ ಬಹಿಷ್ಕರಿಸಿದ್ದ 2 ಗ್ರಾಮದ ಜನ, ಸಂಜೆಗೆ ಮನವೊಲಿಕೆ; 7 ಗಂಟೆ ದಾಟಿದರೂ ಮುಗಿಯದ ಮತದಾನ

Modi in Karnataka stay in Belagavi tomorrow and Huge gatherings at five places
Lok Sabha Election 20241 hour ago

Modi in Karnataka: ನಾಳೆ ರಾಜ್ಯಕ್ಕೆ ಮೋದಿ, ಬೆಳಗಾವಿಯಲ್ಲಿ ವಾಸ್ತವ್ಯ; 2 ದಿನ ಪ್ರವಾಸ, 5 ಕಡೆ ಬೃಹತ್‌ ಸಮಾವೇಶ

BJP National President JP Nadda Election campaign in Surapura
ಕರ್ನಾಟಕ1 hour ago

Lok Sabha Election 2024: ದೇಶದ ರಕ್ಷಣೆಗಾಗಿ ಮತ್ತೆ ಬಿಜೆಪಿಯನ್ನು ಬೆಂಬಲಿಸಿ: ಜೆ.ಪಿ.ನಡ್ಡಾ

deepfake
ತಂತ್ರಜ್ಞಾನ1 hour ago

Deep Fakes: ಶೇ. 75 ಭಾರತೀಯರು ಡೀಪ್‌ಫೇಕ್‌ಗೆ ಒಳಗಾಗಿದ್ದಾರೆ; ಗೊತ್ತಾಗಿದ್ದು ಶೇ.22 ಮಂದಿಗೆ ಮಾತ್ರ!

Lok Sabha Election 2024 Bjp workers clash in Chikmagalur
Lok Sabha Election 20242 hours ago

Lok Sabha Election 2024: ಚಿಕ್ಕಮಗಳೂರಲ್ಲಿ ಬಿಜೆಪಿ ಕಾರ್ಯಕರ್ತರ ಮಧ್ಯೆಯೇ ಮಾರಾಮಾರಿ; ಮುಖಂಡನ ತಲೆಗೆ ಏಟು!

lok sabha election
ಪ್ರಮುಖ ಸುದ್ದಿ2 hours ago

Lok Sabha Election : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಮುಕ್ತಾಯ; ದಾಖಲೆ ಪ್ರಮಾಣದಲ್ಲಿ ಮತ ಚಲಾವಣೆ

Karnataka weather Forecast
ಮಳೆ2 hours ago

Karnataka Weather : ಹಾಟ್‌ ಸಿಟಿಯಾದ ಬೆಂಗಳೂರು; ಇನ್ನು 3 ದಿನಗಳು ಈ ಜಿಲ್ಲೆಗಳು ಕಾದ ಕೆಂಡ

Lok Sabha Election 2024
ಕರ್ನಾಟಕ2 hours ago

Lok Sabha Election 2024: ಸಂಜೆ 5 ಗಂಟೆವರೆಗೆ ಶೇ.63.90 ಮತದಾನ; ಮಂಡ್ಯ ಕ್ಷೇತ್ರದಲ್ಲಿ ಗರಿಷ್ಠ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election 2024 congress booth agent allegation for Fake voting in Hassan Lok Sabha constituency
ಹಾಸನ9 hours ago

Lok Sabha Election 2024: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ! ಏನಿದು ಕಾಂಗ್ರೆಸ್‌ ಬೂತ್‌ ಏಜೆಂಟ್‌ ಆರೋಪ?

Lok Sabha Election 2024 Woman suffers cardiac arrest at polling booth Doctor who came to cast his vote saved life
Lok Sabha Election 20249 hours ago

Lok Sabha Election 2024: ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ; ಮತ ಹಾಕಲು ಬಂದಿದ್ದ ವೈದ್ಯನಿಂದ ಪ್ರಾಣ ರಕ್ಷಣೆ

Lok Sabha Election 2024 Youth Congress protest
Lok Sabha Election 202410 hours ago

Lok Sabha Election 2024 : ಮತಗಟ್ಟೆ ಬಳಿ ಚೆಂಬು, ಗ್ಯಾಸ್ ಸಿಲಿಂಡರ್ ಪ್ರದರ್ಶಿಸಿದ ಯೂತ್‌ ಕಾಂಗ್ರೆಸ್‌

Dina bhavishya
ಭವಿಷ್ಯ16 hours ago

Dina Bhavishya : ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರ

Neha Murder Case in hubblli
ಹುಬ್ಬಳ್ಳಿ1 day ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ1 day ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

Neha Murder case CID Officer
ಹುಬ್ಬಳ್ಳಿ1 day ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

Lok sabha election 2024
Lok Sabha Election 20241 day ago

Lok Sabha Election 2024 : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ; ಪ್ರವಾಸಿ ತಾಣಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ

Dina Bhavishya
ಭವಿಷ್ಯ3 days ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

ಟ್ರೆಂಡಿಂಗ್‌