Site icon Vistara News

Guest Lecturer: 13,000 ಅತಿಥಿ ಶಿಕ್ಷಕರ ನೇಮಕ ಪ್ರಕ್ರಿಯೆಗೆ ಎದುರಾಗಿದೆ ಕಾನೂನು ಸಮಸ್ಯೆ!

Madhu Bangarappa

#image_title

ಬೆಂಗಳೂರು: ಅತಿಥಿ ಶಿಕ್ಷಕರ (Guest Lecturer) ನೇಮಕ ಪ್ರಕ್ರಿಯೆ ಆರಂಭವಾಗಿದ್ದು, ಕೆಲವು ಕಾನೂನಾತ್ಮಕ ಸಮಸ್ಯೆಗಳು ಎದುರಾಗಿವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ಈ ಕುರಿತು ಮಾಧ್ಯಮಗಳ ಜತೆಗೆ ಮಾತನಾಡಿದ ಮಧು ಬಂಗಾರಪ್ಪ, ಅತಿಥಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪ್ರಾರಂಭ ಆಗಿದೆ. ಖಾಯಂ ನೇಮಕಾತಿಯಲ್ಲಿ ಹೈದರಾಬಾದ್ ಕರ್ನಾಟಕ, ನಾನ್ ಹೈದರಾಬಾದ್ ಕರ್ನಾಟಕ ಎಂದು ಲೀಗಲ್ ಸಮಸ್ಯೆ ಇತ್ತು. ಹೈದರಾಬಾದ್ ಕರ್ನಾಟಕ ಲೀಗಲ್ ಸಮಸ್ಯೆ ಇನ್ನೂ ಇದೆ. ಕೆಲವರು ಕೋರ್ಟ್‌ಗೆ ಹೋಗಿದ್ದಾರೆ. ಈ ಬಗ್ಗೆ ಅಂತಿಮ ಆದೇಶ ಬರಬೇಕು.

ಅಂತಿಮ ಆದೇಶ ಬಂದ ತಕ್ಷಣ ಪ್ರಕ್ರಿಯೆ ಆರಂಭ ಆಗಲಿದೆ. ನಾವು ಎಲ್ಲದಕ್ಕೂ ಸಿದ್ಧವಾಗಿದ್ದೇವೆ. 13 ಸಾವಿರಕ್ಕೂ ಅಧಿಕ ಶಿಕ್ಷಕ ನೇಮಕಾತಿ ಆಗಲಿದೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಕೆಲ ಅಂಶಗಳನ್ನು ಮಾಡುತ್ತೇವೆ. ಸಚಿವ ಸಂಪುಟದಲ್ಲಿಟ್ಟು ಅನುಮತಿ ಪಡೆಯುತ್ತೇವೆ ಎಂದರು.

ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದ ಬಗ್ಗೆ ಮಧು ಬಂಗಾರಪ್ಪ ಅವರನ್ನೇ ಕೇಳಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರ ಕುರಿತು ಪ್ರತಿಕ್ರಿಯಿಸಿದ ಮಧು ಬಂಗಾರಪ್ಪ, ಅದರಲ್ಲಿ ತಪ್ಪೇನು ಇಲ್ಲ. ಈ ಇಲಾಖೆ ನನ್ನ ಬಳಿ ಇದೆ, ಹಾಗಾಗಿ ಸಿಎಂ ಹೇಳಿದ್ದಾರೆ. ಅದು ಸಿಎಂ ಸಿದ್ದರಾಮಯ್ಯ ನನಗೆ ಕೊಟ್ಟ ಗೌರವ. ಸಪ್ಲಿಮೆಂಟರಿ ಕಳಿಸಿದ್ರೆ ಎಷ್ಟು ವೆಚ್ಚ ಆಗಲಿದೆ‌..? ಬಹಳ ಎನು ಆಗುವುದಿಲ್ಲ, ಸಚಿವ ಸಂಪುಟದಲ್ಲಿ ಅನುಮತಿ ಪಡೆದ ನಂತರ ಹೇಳ್ತೇನೆ. ಬಿಜೆಪಿಯವರಿಗೆ ಉತ್ತರ ಕೊಡಲು ನಾನು ಸ್ಥಾನ ಅಲಂಕರಿಸಿಲ್ಲ. ಮಕ್ಕಳ ಭವಿಷ್ಯಕ್ಕಾಗಿ ಅಲಂಕರಿಸಿದ್ದೇನೆ. ಪ್ರಣಾಳಿಕೆಯಲ್ಲಿ ಮಾತು ಕೊಟ್ಟಹಾಗೆ ಮಾಡ್ತೇವೆ ಎಂದರು.

ಇದನ್ನೂ ಓದಿ: Text Book: ಹಿಂದಿನ ಪಠ್ಯದಲ್ಲಿ ಹುಸಿ ದೇಶಭಕ್ತಿ; ಪಠ್ಯ ಪರಿಷ್ಕರಣೆ ಮಾಡುವುದೇ ಸರಿ ಅಂದ್ರು ಕುಂ. ವೀರಭದ್ರಪ್ಪ!

Exit mobile version