ಕಲಬುರಗಿ: ದಶಕಗಳಿಂದ ಕಾಂಗ್ರೆಸ್ ವಶದ್ಲಲಿರುವ ಕಲಬುರಗಿ ಜಿಲ್ಲೆಯ ಕಲಬುರಗಿ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಕೈ ಪಕ್ಷದ ಕನೀಝ್ ಫಾತಿಮಾ ಅವರು ಮತ್ತೆ ಗೆಲುವು ಸಾಧಿಸಿದ್ದಾರೆ.
ಈ ಬಾರಿ ಇಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ನಾಸಿರ್ ಹುಸೇನ್ ಉಸ್ತಾದ್, ಆಪ್‌ನಿಂದ ಸಯ್ಯದ್ ಸಜ್ಜಾದ್ ಅಲಿ, ಬಿಜೆಪಿಯಿಂದ ಚಂದ್ರಕಾಂತ ಪಾಟೀಲ, ಕಾಂಗ್ರೆಸ್‌ನಿಂದ ಕನೀಝ್ ಫಾತಿಮಾ ಕಣದಲ್ಲಿದ್ದರು.
2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ನ ಕನೀಝ್ ಫಾತಿಮಾ 64,311 ಮತ ಗಳಿಸಿ ಗೆಲುವು ಸಾಧಿಸಿದ್ದರು. ಭಾರತೀಯ ಜನತಾ ಪಾರ್ಟಿಯ ಚಂದ್ರಕಾಂತ್ ಬಿ. ಪಾಟೀಲ 5,940 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು.
ಇಲ್ಲಿ ಇರುವ ಒಟ್ಟು ಮತಗಳು 276,959. ಪುರುಷರ ಸಂಖ್ಯೆ 140,459 ಹಾಗೂ ಸ್ತ್ರೀಯರು 136,402.