ಕಲಬುರಗಿ: ಕಲಬುರಗಿ ಜಿಲ್ಲೆಯ ಕಲಬುರಗಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ
ಬಸವರಾಜ ಮತ್ತಿಮೂಡ ಅವರು ಗೆಲುವು ಸಾಧಿಸಿದ್ದಾರೆ.
ಈ ಬಾರಿ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ರೇವೂನಾಯಕ ಬೆಳಮಗಿ, ಬಿಜೆಪಿ ಅಭ್ಯರ್ಥಿಯಾಗಿ ಬಸವರಾಜ ಮತ್ತಿಮೂಡ್, ಆಪ್ ಅಭ್ಯರ್ಥಿಯಾಗಿ ಡಾ.ರಾಘವೇಂದ್ರ ಚಿಂಚನಸೂರ ಕಣದಲ್ಲಿದ್ದರು.
2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಇಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ ಬಸವರಾಜ ಮತ್ತಿಮೂಡ ಅವರು 61,750 ಮತ ಪಡೆದು ಗೆದ್ದಿದ್ದರು. ಕಾಂಗ್ರೆಸ್‌ನ ವಿಜಯಕುಮಾರ ಜಿ. ಅವರನ್ನು 12,386 ಮತಗಳ ಅಂತರದಿಂದ ಸೋಲಿಸಿದ್ದರು. ಇಲ್ಲಿ ಇರುವ ಒಟ್ಟು ಮತಗಳು 248,958. ಇವರಲ್ಲಿ ಪುರುಷರು 127,856 ಹಾಗೂ ಸ್ತ್ರೀಯರು 121,068.