ಕಲಬುರಗಿ: ಕಲಬುರಗಿ ಜಿಲ್ಲೆಯ ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಜನತೆ ಕಾಂಗ್ರೆಸ್‌ಗೆ ಜಯಕಾರ ಹಾಕಿದ್ದಾರೆ. ಕೈ ಪಕ್ಷದ ಅಲ್ಲಮ ಪ್ರಭು ಪಾಟೀಲ್ ಗೆಲುವು ಸಾಧಿಸಿದ್ದಾರೆ.
ಈ ಬಾರಿ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಜೆಡಿಎಸ್ ಅಭ್ಯರ್ಥಿಯಾಗಿ ಕೃಷ್ಣಾ ರೆಡ್ಡಿ, ಆಪ್‌ನಿಂದ ಸಿದ್ದರಾಮ ಅಪ್ಪಾರಾವ ಪಾಟೀಲ, ಬಿಜೆಪಿಯಿಂದ ದತ್ತಾತ್ರೇಯ ಪಾಟೀಲ ರಾವೂರ, ಕಾಂಗ್ರೆಸ್‌ನಿಂದ ಅಲ್ಲಮಪ್ರಭು ಪಾಟೀಲ ಕಣದಲ್ಲಿದ್ದರು.
2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯ ದತ್ತಾತ್ರೇಯ ಪಾಟೀಲ 64,788 ಮತ ಪಡೆದು ಗೆಲುವು ಸಾಧಿಸಿದ್ದರು. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ನ ಅಲ್ಲಮ ಪ್ರಭು ಪಾಟೀಲ 5,431 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು. ಇಲ್ಲಿ ಇರುವ ಒಟ್ಟು ಮತಗಳು 258,960. ಪುರುಷರ ಸಂಖ್ಯೆ 129,110 ಹಾಗೂ ಸ್ತ್ರೀಯರ ಮತಗಳು 129,784.