Site icon Vistara News

Molestation Case: ಬಾಲಕಿಗೆ ಲೈಂಗಿಕ ಕಿರುಕುಳ; ಪೊಲೀಸರ ಅತಿಥಿಯಾದ ಜಿಮ್ನಾಸ್ಟಿಕ್‌ ಟ್ರೈನರ್‌

Gymnastics trainer Prabhakar Nayak

#image_title

ಬೆಂಗಳೂರು: ಮಕ್ಕಳನ್ನು ಪಠ್ಯೇತರ ಚಟುವಟಿಕೆಗಳಿಗೆ ಕಳುಹಿಸುವ ಮುನ್ನ ಪೋಷಕರು ಎಚ್ಚರ ವಹಿಸಬೇಕಿದೆ. ತರಬೇತುದಾರರು ಯಾರು, ಏನು? ಎಂದು ತಿಳಿದುಕೊಳ್ಳದೇ ಕಳುಹಿಸಿದರೆ ತೊಂದರೆ ಅನುಭವಿಸಬೇಕಾಗಬಹುದು. ಏಕೆಂದರೆ, ಜಿಮ್ನಾಸ್ಟಿಕ್‌ ತರಬೇತಿ ಹೆಸರಿನಲ್ಲಿ ಟ್ರೈನರ್‌, 11 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ Molestation Case) ನಗರದಲ್ಲಿ ಬೆಳಕಿಗೆ ಬಂದಿದ್ದು, ಆರೋಪಿ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ.

ಇದನ್ನೂ ಓದಿ | Road accident : ಟೆಂಪೊ, ಬೈಕ್‌ ನಡುವೆ ಅಪಘಾತ; ಮೂವರು ಸ್ನೇಹಿತರ ದಾರುಣ ಮರಣ

ಪ್ರಭಾಕರ್‌ ನಾಯಕ್‌ ಬಂಧಿತ ಆರೋಪಿ. ಈತ ಜಿಮ್ನಾಸ್ಟಿಕ್ ಹೇಳಿಕೊಡುವ ನೆಪದಲ್ಲಿ ಬಾಲಕಿಗೆ‌ ಲೈಂಗಿಕ ಕಿರುಕುಳ ನೀಡಿದ್ದಾನೆ. ಹೀಗಾಗಿ ಬಾಲಕಿ ಖಿನ್ನತೆಗೆ ಒಳಗಾಗಿದ್ದಾಳೆ. ಕೋಚ್‌ನ ಕಿರುಕುಳಕ್ಕೆ ಬೇಸತ್ತ ಬಾಲಕಿ, ಪೋಷಕರಿಗೆ ವಿಷಯ ತಿಳಿಸಿದ್ದಾಳೆ. ಇದರಿಂದ ಎಚ್ಚೆತ್ತ ಪೋಷಕರು ಹನುಮಂತನಗರ ಠಾಣೆಗೆ ದೂರು ನೀಡಿದ್ದಾರೆ. ಹೀಗಾಗಿ ಟ್ರೈನರ್‌ ಪ್ರಭಾಕರ್ ನಾಯಕ್‌ನನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Exit mobile version