Site icon Vistara News

Hassan Election Results : ಹಾಸನದಲ್ಲಿ ಪ್ರೀತಂ ಗೌಡ ವಿರುದ್ಧ ಜೆಡಿಎಸ್‌ನ ಎಚ್‌.ಪಿ.ಸ್ವರೂಪ್‌ ಜಯಭೇರಿ

H P Swaroop wins Hassan election results 2023

H P Swaroop wins from Hassan, karnataka-election-results-2023

ಹಾಸನ: ವಿಧಾನಸಭಾ ಚುನಾವಣೆಯ (Hassan Election Results) ಫಲಿತಾಂಶ ಬಿಡುಗಡೆಯಾಗಿದ್ದು, ಹಾಸನ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿ ಎಚ್‌.ಪಿ ಸ್ವರೂಪ್(HP Swaroop) ಗೆಲುವು ಸಾಧಿಸಿದ್ದಾರೆ. ಇವರು ಬಿಜೆಪಿ ಅಭ್ಯರ್ಥಿ ಪ್ರೀತಂ ಜೆ. ಗೌಡ ವಿರುದ್ಧ 7,854 ಮತಗಳ ಅಂತರದಿಂದ ವಿಜಯಿಯಾಗಿದ್ದಾರೆ.

ಜೆಡಿಎಸ್‌ ಅಭ್ಯರ್ಥಿ ಎಚ್‌.ಪಿ. ಸ್ವರೂಪ್‌ 85,176 ಮತಗಳನ್ನು ಪಡೆದಿದ್ದು, ಪ್ರೀತಂ ಗೌಡ 77,322 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಬನವಾಸೆ ರಂಗಸ್ವಾಮಿ 4,305 ಮತ, ಎಎಪಿ ಅಭ್ಯರ್ಥಿ ಅಗಿಲೆ ಯೋಗೇಶ್ 1301 ಮತ ಪಡೆದಿದ್ದಾರೆ.

2018 ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರೀತಂ ಗೌಡ 63,348 ಮತಗಳನ್ನು ಪಡೆದು ಜಯಭೇರಿ ಬಾರಿಸಿದ್ದರು. ಜೆಡಿಎಸ್ ಅಭ್ಯರ್ಥಿ ಎಚ್.ಎಸ್.ಪ್ರಕಾಶ್ 50,342 ಮತ, ಕಾಂಗ್ರೆಸ್‌ ಎಚ್.ಕೆ.ಮಹೇಶ್ 38,101 ಮತಗಳನ್ನು ಪಡೆದಿದ್ದರು.

ಇದನ್ನೂ ಓದಿ | Kanakapura Election Results : ಕನಕಪುರದಲ್ಲಿ ಡಿ.ಕೆ.ಶಿವಕುಮಾರ್‌ ಭರ್ಜರಿ ಗೆಲುವು; 8ನೇ ಬಾರಿ ಆಯ್ಕೆ

ಹಾಸನ ಸಾಕಷ್ಟು ಕುತೂಹಲ ಹಾಗೂ ಜಿದ್ದಾಜಿದ್ದಿಯ ಕ್ಷೇತ್ರವಾಗಿ ರಾಜ್ಯದ ಗಮನ ಸೆಳೆದಿತ್ತು. ಕ್ಷೇತ್ರವನ್ನು ಜೆಡಿಎಸ್ ಹಾಗೂ ಬಿಜೆಪಿ ಪಕ್ಷದ ನಾಯಕರು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು. ಜೆಡಿಎಸ್‌ನಲ್ಲಿ ಟಿಕೆಟ್ ಗುದ್ದಾಟ ನಡೆದರೂ ಅಂತಿಮವಾಗಿ ಯಾವುದೇ ಗೊಂದಲಗಳಿಲ್ಲದೆ ಸ್ವರೂಪ್ ಟಿಕೆಟ್ ಪಡೆದಿದ್ದರು. ಟಿಕೆಟ್‌ ಆಕಾಂಕ್ಷಿ ಭವಾನಿ ರೇವಣ್ಣ, ಮಾಜಿ ಸಚಿವ ಎಚ್‌.ಡಿ.ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ, ವಿಧಾನಸಭಾ ಪರಿಷತ್ ಸದಸ್ಯ ಸೂರಜ್ ರೇವಣ್ಣ ಸೇರಿ ಹಲವರು ಸ್ವರೂಪ್ ಬೆನ್ನಿಗೆ ನಿಂತಿದ್ದರಿಂದ ಸ್ವರೂಪ್‌ ಅವರು ಹಾಲಿ ಶಾಸಕ ಪ್ರೀತಂಗೌಡಗೆ ಸೋಲಿನ ರುಚಿ ತೋರಿಸಿದ್ದಾರೆ.

Exit mobile version