Site icon Vistara News

H3N2 Influenza: ಕೋವಿಡ್‌ ಬಳಿಕ H3N2 ವೈರಸ್‌ ಭೀತಿ; ICMRನಿಂದ ಹೈ ಅಲರ್ಟ್‌ ಘೋಷಣೆ

324 New Covid Cases In India, Active Cases Rise To 2,791

Coronvirus Cases In India

ಬೆಂಗಳೂರು: ನೋವೆಲ್‌ ಕೊರೊನಾ ವೈರಸ್‌ ಬಳಿಕ ಮತ್ತೊಂದು ವೈರಸ್ ಜನರ ನೆಮ್ಮದಿಯನ್ನು ಹಾಳು ಮಾಡುತ್ತಿದೆ. H3N2 ವೈರಸ್‌ ಭೀತಿ (H3N2 Influenza) ಕುರಿತು ಎಚ್ಚರದಿಂದ ಇರುವಂತೆ ICMR (Indian Council of Medical Research) ದೇಶಾದ್ಯಂತ ಹೈ ಅಲರ್ಟ್‌ ಘೋಷಣೆ ಮಾಡಿದೆ. ಹೀಗಾಗಿ ರಾಜ್ಯದಲ್ಲಿ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಸೋಮವಾರ ಮಹತ್ವದ ಸಭೆ ನಡೆಸಲಿದ್ದಾರೆ.

ಐಸಿಎಂಆರ್‌ ಸೂಚನೆಯಂತೆ ಹೊಸ ವೈರಸ್ ಬಗ್ಗೆ ನಿಗಾ ವಹಿಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆಯ ಆಯುಕ್ತ ರಣದೀಪ್‌ ಪ್ರತಿಕ್ರಿಯಿಸಿದ್ದಾರೆ. ರಾಜ್ಯದಲ್ಲಿ ಸದ್ಯಕ್ಕೆ ಯಾರಲ್ಲೂ H3N2 ವೈರಸ್‌ ಕಾಣಿಸಿಕೊಂಡಿಲ್ಲ. ಸಾರಿ ಮತ್ತು ಐಎಲ್‌ಎ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಈ ಸೋಂಕು ಬಹುಬೇಗ ಹರಡುತ್ತಿದೆ. ಹೀಗಾಗಿ ಸಾರಿ ಮತ್ತು ಐಎಲ್‌ಎ ಸಮಸ್ಯೆಯಿಂದ ಬಳಲುತ್ತಿರುವವರು ಎಚ್ಚರದಿಂದಿರಬೇಕು ಎಂದು ತಿಳಿಸಿದ್ದಾರೆ.

ಹೊಸ ವೈರಸ್‌ ಕುರಿತು ಸಚಿವ ಸುಧಾಕರ್ ಪ್ರತಿಕ್ರಿಯಿಸಿದ್ದು, H3N2 ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಕೂಡ ಗಮನ ಕೊಡುವಂತೆ ತಿಳಿಸಿದೆ. ಈ ಬಗ್ಗೆ ಇಲಾಖೆಯ ಆಯುಕ್ತರು, ಪ್ರಧಾನ ಕಾರ್ಯದರ್ಶಿ ಜತೆಗೆ ಸೋಮವಾರ ಮಹತ್ವದ ಸಭೆ ನಡೆಸಲಾಗುವುದು ಎಂದಿದ್ದಾರೆ. ಸೋಂಕಿನ ಲಕ್ಷಣ ದೀರ್ಘ ಕಾಲದ ಕೆಮ್ಮು ಇರಬಹುದು ಎಂದು ಪ್ರಾರಂಭಿಕ ವರದಿಯಲ್ಲಿ ತಿಳಿದು ಬಂದಿದೆ. ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು? ಯಾವೆಲ್ಲ ಕ್ರಮ ತೆಗೆದು ಕೊಳ್ಳಬೇಕು, ಚಿಕಿತ್ಸೆ ಏನು ಎಂದು ಸಭೆಯಲ್ಲಿ ಚರ್ಚಿಸಿ ತೀರ್ಮಾನ ಮಾಡಲಾಗುವುದು. ಈ ಸಭೆಯಲ್ಲಿ ತಜ್ಞರು ಕೂಡ ಭಾಗಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ.

ಮಹಿಳೆಯರಿಗಾಗಿ ಸೈಕ್ಲೋಥಾನ್‌ಗೆ ಚಾಲನೆ

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಭಾನುವಾರ ಮುಂಜಾನೆ 8:30ಕ್ಕೆ ವಿಧಾನಸೌಧದಿಂದ- ಆರೋಗ್ಯ ಸೌಧದವರೆಗೆ ಸೈಕ್ಲೋಥಾನ್ ಆಯೋಜನೆ ಮಾಡಲಾಗಿತ್ತು. ಆರೋಗ್ಯವಂತ ಮಹಿಳೆಯಿಂದ ಆರೋಗ್ಯಕರ ಭಾರತ ಎಂಬ ಅಡಿಬರಹದೊಂದಿಗೆ ಸೈಕ್ಲೋಥಾನ್‌ಗೆ ಸಚಿವ ಸುಧಾಕರ್‌ ಚಾಲನೆ ನೀಡಿದರು.

ಈ ಸಂಬಂಧ ಮಾತನಾಡಿದ ಆರೋಗ್ಯ ಇಲಾಖೆಯ ಆಯುಕ್ತ ರಣದೀಪ್, ವಿಶ್ವ ಮಹಿಳಾ ದಿನದ ಅಂಗವಾಗಿ ಸೈಕ್ಲೋಥಾನ್ ಅನ್ನು ಆಯೋಜನೆ ಮಾಡಲಾಗಿದೆ. ಕೌಟುಂಬಿಕ ಜವಾಬ್ದಾರಿಗಳಲ್ಲಿ ಮಹಿಳೆಯರು ಅವರ ಆರೋಗ್ಯದ ಕಡೆ ಗಮನ ಹರಿಸುತ್ತಿಲ್ಲ. ಒಳ್ಳೆಯ ಊಟ ಸೇವನೆ, ವ್ಯಾಯಾಮ ಮಾಡುವುದು ಬಹಳ ಮುಖ್ಯವಾಗಿದೆ ಎಂದು ಹೇಳಿದರು.

ಇದನ್ನೂ ಓದಿ: Raichur RIMS Hospital: ಕಾಕ್ಲೇರ್ ಪ್ಲಾಂಟ್ ಸ್ಕೀಂ ಅಡಿ ಇಬ್ಬರು ಪುಟ್ಟ ಬಾಲಕರಿಗೆ ಸರ್ಜರಿ; ರಿಮ್ಸ್‌ ವೈದ್ಯರ ಸಾಧನೆ

ಹೀಗಾಗಿ ಆರೋಗ್ಯ ಇಲಾಖೆ ಸೈಕ್ಲೋಥಾನ್‌ ಮೂಲಕ ಅರಿವು ಕಾರ್ಯಕ್ರಮ ಮೂಡಿಸಿದೆ. ಮಹಿಳೆಯರು ಸ್ವಂತ ಆರೋಗ್ಯ ಕಾಪಾಡಿಕೊಳ್ಳಬೇಕು. ಕ್ಯಾನ್ಸರ್, NCDಗೆ ಸ್ಕ್ರೀನಿಂಗ್ ಮಾಡಿಸಿಕೊಳ್ಳಬೇಕು. ಇದನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಮಾಡಲಾಗುತ್ತಿದೆ ಎಂದು ತಿಳಿಸಿದರು.‌

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version