Site icon Vistara News

Cyber Crime: ಬೆಂಗಳೂರಿನಲ್ಲಿ ಖತರ್ನಾಕ್ ಹ್ಯಾಕರ್ ಬಂಧನ; 4.16 ಕೋಟಿ ರೂ. ಮೌಲ್ಯದ ವಸ್ತುಗಳು ವಶಕ್ಕೆ

hacker Lakshmipathy

ಬೆಂಗಳೂರು: ಗಿಫ್ಟ್‌ ವೋಚರ್‌ ವೆಬ್‌ಸೈಟ್‌ ಹ್ಯಾಕ್ ಮಾಡಿ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ನಗದನ್ನು ಲಪಟಾಯಿಸಿದ್ದ (cyber crime) ಹ್ಯಾಕರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಗ್ರಾಹಕರಿಗೆ ಕೊಡುವ ಆನ್‌ಲೈನ್‌ ಗಿಫ್ಟ್‌ ವೋಚರ್‌ಗಳನ್ನು ಹ್ಯಾಕ್‌ ಮಾಡಿ ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡು ಮೋಸ ಮಾಡುತ್ತಿದ್ದ ಯುವಕ ಸೆರೆಯಾಗಿದ್ದು, ಆತನಿಂದ 11 ಲಕ್ಷ ನಗದು, ಚಿನ್ನ, ಬೆಳ್ಳಿ ಗಟ್ಟಿ, ಏಳು ಬೈಕ್‌ ಸೇರಿ 4.16 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಸೀಮಾಂಧ್ರದ ಚಿತ್ತೂರು ಮೂಲದ ಲಕ್ಷ್ಮೀಪತಿ ಬಂಧಿತ ಆರೋಪಿ. ಒಂಗೋಲು ಐಐಐಟಿ (IIIT Ongole) ಸಂಸ್ಥೆಯ ಬಿ.ಟೆಕ್ ಪದವೀಧರನಾಗಿರುವ ಈತ ತನ್ನ ನೈಪುಣ್ಯವನ್ನು ವಂಚನೆಗೆ ಬಳಸಿದ್ದಾನೆ. ಗ್ರಾಹಕರಿಗೆ ಕೊಡುವ ವೋಚರ್‌ಗಳು ಹ್ಯಾಕ್ ಆಗಿರುವ ಬಗ್ಗೆ ರಿವಾರ್ಡ್‌ 360 ಸಂಸ್ಥೆಯಿಂದ ಆಗ್ನೇಯ ಸೈಬರ್ ಸೆನ್ ಪೊಲೀಸ್‌ ಠಾಣೆಗೆ ದೂರು ನೀಡಲಾಗಿತ್ತು.

ಇದನ್ನೂ ಓದಿ | Murder Case : ಕುಡಿತದ ಅಮಲಿನಲ್ಲಿ ಕತ್ತಿಯ ಹಿಂಭಾಗದಿಂದ ತಲೆಗೆ ಹೊಡೆದ ಗಂಡ; ಕುಸಿದು ಬಿದ್ದು ಪತ್ನಿ ಸಾವು

ತನಿಖೆ ವೇಳೆ ಆಂಧ್ರ ಮೂಲದ ವ್ಯಕ್ತಿ ಕೃತ್ಯ ಎಸಗಿರುವುದು ತಿಳಿದುಬಂದಿತ್ತು. ಹೀಗಾಗಿ ಆರೋಪಿ ಲಕ್ಷ್ಮೀಪತಿಯನ್ನು ಪೊಲೀಸರು ಬಂಧಿಸಿ, ಆತನಿಂದ 3.40 ಕೋಟಿ ರೂ. ಮೌಲ್ಯದ 5 ಕೆ.ಜಿ ಚಿನ್ನ, 21.80 ಲಕ್ಷ ರೂ. ಮೌಲ್ಯದ 27.250 ಕೆ.ಜಿ ಬೆಳ್ಳಿ, 11 ಲಕ್ಷ ರೂ., ಪ್ಲಿಫ್ ಕಾರ್ಟ್ ವ್ಯಾಲೆಟ್‌ನ 26 ಲಕ್ಷ ರೂ., ಅಮೆಜಾನ್ ವ್ಯಾಲೆಟ್‌ನ 3.50 ಲಕ್ಷ ರೂ., 7 ದ್ವಿಚಕ್ರ ವಾಹನ ಸೇರಿ ಒಟ್ಟು 4.16 ಕೋಟಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಆಗ್ನೇಯ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಸ್ತೆ ದಾಟುತ್ತಿದ್ದ ಪೌರಕಾರ್ಮಿಕನ‌ ಮೇಲೆ ಹರಿದ ಯಮರೂಪಿ ಲಾರಿ

ಬೆಂಗಳೂರು : ರಸ್ತೆ ದಾಟುವಾಗ ಪೌರಕಾರ್ಮಿಕನ‌ ಮೇಲೆ ಲಾರಿ ಹರಿದು (Road Accident) ಮೃತಪಟ್ಟಿರುವ ಘಟನೆ ಪೀಣ್ಯ ದಾಸರಹಳ್ಳಿಯಲ್ಲಿ ನಡೆದಿದೆ. ಬಾಗೇಪಲ್ಲಿ ನಿವಾಸಿ ಗಂಗಾಧರ್ (40) ಮೃತ ಪೌರಕಾರ್ಮಿಕ.

ದಾಸರಹಳ್ಳಿ ವಲಯದ ವಾರ್ಡ್ ನಂಬರ್ 39ರಲ್ಲಿ ಮಂಗಳವಾರ ಬೆಳಗ್ಗೆ 7:30ರ ಸುಮಾರಿಗೆ ಪೀಣ್ಯ ದಾಸರಹಳ್ಳಿ ಕಚೇರಿಯಲ್ಲಿರುವ ಬಯೋಮೆಟ್ರಿಕ್‌ಗೆ ಬರುತ್ತಿದ್ದರು. ಖಾಲಿ ರಸ್ತೆಯಲ್ಲಿ ಗಂಗಾಧರ್ ರಸ್ತೆ ದಾಟುತ್ತಿದ್ದಾಗ ಲಾರಿಯೊಂದು ಡಿಕ್ಕಿ ಹೊಡೆದಿದೆ. ಕೆಳಗೆ ಬಿದ್ದ ಗಂಗಾಧರ್‌ ಮೇಲೆ ಲಾರಿ ಹರಿದಿದೆ.

ಇದನ್ನೂ ಓದಿ: Love Case : ವಿಷ ಸೇವಿಸಿದ ಪ್ರೇಮಿಗಳು; ಪ್ರಿಯಕರ ಸಾವು, ಅಪ್ರಾಪ್ತೆ ಚಿಂತಾಜನಕ

ನಿಯಂತ್ರಣ ತಪ್ಪಿ ಬೈಕ್‌ನಿಂದ ಬಿದ್ದು ಯುವಕ ಸಾವು

ನಿಯಂತ್ರಣ ತಪ್ಪಿ ಬೈಕ್ ಮೇಲಿಂದ ಬಿದ್ದು ಯುವಕ ಮೃತಪಟ್ಟಿರುವ ಘಟನೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ತೇರದಾಳ- ಹಳಿಂಗಳಿ ಮಾರ್ಗ ಮಧ್ಯೆ ಮಂಗಳವಾರ ನಡೆದಿದೆ. ತೇರದಾಳ ಪಟ್ಟಣದ ಕಲ್ಲಟ್ಟಿ ನಿವಾಸಿ ಸೈದು ತರತರಿ (30) ಮೃತ ಯುವಕ. ಹಣ್ಣಿನ ವ್ಯಾಪಾರ ಮಾಡಿಕೊಂಡಿದ್ದ ಸೈದು ತರತರಿ, ತೇರದಾಳದಿಂದ ಪತ್ನಿಯ ಊರು ಹಳಿಂಗಳಿ ಕಡೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಅಪಘಾತ (Bike Accident) ನಡೆದಿದೆ.

Exit mobile version