ಹಾವೇರಿ: ಹಾನಗಲ್ ಮುಸ್ಲಿಂ ಮಹಿಳೆ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಹಾನಗಲ್ ಪೊಲೀಸ್ ಠಾಣೆ ಸಿಪಿಐ ಮತ್ತು ಕಾನ್‌ಸ್ಟೇಬಲ್‌ನ ಅಮಾನತು ಎಸ್‌ಪಿ ಅಂಶುಕುಮಾರ್ ಆದೇಶ ಹೊರಡಿಸಿದ್ದಾರೆ. ಸಿಪಿಐ ಶ್ರೀಧರ್, ಕಾನ್‌ಸ್ಟೇಬಲ್ ಇಲಿಯಾಜ್ ಶೇತಸನದಿ ಅಮಾನತು ಗೊಂಡವರು.
ಇನ್ನು ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದ್ದು, ಇದರಿಂದ ಈವರೆಗೆ ಒಟ್ಟು 8 ಆರೋಪಿಗಳು ಬಂಧನವಾದಂತಾಗಿದೆ. ಹಾನಗಲ್ ತಾಲೂಕಿನ ಅಕ್ಕಿಆಲೂರಿನ ನಿವಾಸಿ ಮಫೀದ್ ಓಣಿಕೆರಿ ಬಂಧಿತ ಆರೋಪಿ. ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಮತ್ತೊಬ್ಬ ಆರೋಪಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ನಾಪತ್ತೆಯಾಗಿದ್ದ ಹಿಂದು ಯುವತಿ ಗೋವಾದಲ್ಲಿ ಪತ್ತೆ, ಆರೋಪಿ ಬಂಧನ
ಹಾವೇರಿ: ಹಾನಗಲ್ ಹಿಂದು ಯುವತಿಯ ಕಿಡ್ನ್ಯಾಪ್ ಪ್ರಕರಣದಲ್ಲಿ ನಾಪತ್ತೆಯಾಗಿದ್ದ ಯುವತಿಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಕಾಲೇಜಿಗೆ ಹೋಗಿದ್ದ ಮಗಳು ಮನೆಗೆ ಬಾರದ ಹಿನ್ನೆಲೆಯಲ್ಲಿ ಆಕೆಯ ತಂದೆ ಪೊಲೀಸ್ ಠಾಣೆಗೆ ಕಿಡ್ನ್ಯಾಪ್ ಆಗಿರುವುದಾಗಿ ದೂರು ನೀಡಿದ್ದರು. ಇದೀಗ ಗೋವಾದಲ್ಲಿ ಯುವತಿಯನ್ನು ಪೊಲೀಸರು ರಕ್ಷಿಸಿ, ಆರೋಪಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ | Jetlag Party Case: ಕಾಟೇರ ಸಕ್ಸಸ್ ಪಾರ್ಟಿ ಎಫೆಕ್ಟ್; ಜೆಟ್ ಲ್ಯಾಗ್ ರೆಸ್ಟೋ ಬಾರ್ ಲೈಸೆನ್ಸ್ ಕ್ಯಾನ್ಸಲ್
ಗೋವಾದ ಮಡಗಾಂವ್‌ನಲ್ಲಿ ಯುವತಿಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಹಾನಗಲ್ ಪಟ್ಟಣದ ನಿವಾಸಿ ಅಫ್ತಾಬ್ ಎಂಬ ಯುವಕ ಕಿಡ್ನಾಪ್ ಮಾಡಿದ್ದಾನೆಂದು ಆರೋಪಿಸಿ ದೂರು ದಾಖಲಾಗಿತ್ತು. ಜನವರಿ 11 ರಂದು ಕಾಲೇಜಿಗೆ ತೆರಳಿದ್ದಾಗ ಘಟನೆ ನಡೆದಿತ್ತು. ಆದರೆ, ಇದೀಗ ಯುವತಿಯನ್ನು ಗೋವಾದಲ್ಲಿ ರಕ್ಷಿಸಲಾಗಿದೆ.