Site icon Vistara News

Karnataka Election 2023: ಹನುಮಾನ್‌ ಚಾಲೀಸಾ ಪಠಣಕ್ಕೆ ತಡೆ; ಚುನಾವಣಾಧಿಕಾರಿಗಳ ಜತೆ ಬಜರಂಗದಳ ವಾಗ್ವಾದ

Hanuman Chalisa recitation stopped Bajrang Dal clashes with returning officers Karnataka Election 2023 updates

ಬೆಂಗಳೂರು: ಈ ಬಾರಿ ವಿಧಾನಸಭಾ ಚುನಾವಣಾ (Karnataka Election 2023) ಕಣ ಹಲವು ಕಾರಣಗಳಿಂದ ರಂಗೇರಿದೆ. ಅಲ್ಲದೆ, ಕೆಲವು ವಿಚಾರಗಳು ಧಾರ್ಮಿಕವಾಗಿ ಸಹ ಮಹತ್ವವನ್ನು ಪಡೆದುಕೊಂಡಿದೆ. ಸದ್ಯ ಚರ್ಚೆಯಲ್ಲಿರುವ ಬಜರಂಗದಳ (Bajarangadal) ವಿವಾದಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನ ವಿಜಯನಗರ ಕ್ಲಬ್ ರೋಡ್‌ನಲ್ಲಿ ಆಯೋಜನೆ ಮಾಡಲಾಗಿದ್ದ ಹನುಮಾನ್‌ ಚಾಲೀಸಾ (Hanuman Chalisa) ಪಠಣಕ್ಕೆ ಚುನಾವಣಾ ಅಧಿಕಾರಿಗಳು ತಡೆಯೊಡ್ಡಿದ್ದಾರೆ.

ಧರ್ಮ ಮತ್ತು ಜಾತಿಯ ವಿಷಯದಲ್ಲಿ ಸಮಾಜದಲ್ಲಿ ದ್ವೇಷ ಬಿತ್ತುವ ಸಂಘಟನೆಗಳನ್ನು ನಿಷೇಧ ಮಾಡಲಾಗುವುದು ಎಂದು ಬಜರಂಗದಳ ಸಂಘಟನೆಯನ್ನು ಉದಾಹರಿಸಿ ಕಾಂಗ್ರೆಸ್‌ ಪ್ರಕಟಿಸಿದ್ದ ಪ್ರಣಾಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ಸೇರಿದಂತೆ ಹಿಂದು ಮುಖಂಡರು, ಬಜರಂಗದಳ ಕಾರ್ಯಕರ್ತರು ರಾಜ್ಯದ ವಿವಿಧೆಡೆ ಹನುಮಾನ್‌ ಚಾಲೀಸಾವನ್ನು ಪಠಿಸಲಾಗಿತ್ತು. ಈಗ ಮತದಾನಕ್ಕೆ ಮುನ್ನಾ ದಿನ ಬೆಂಗಳೂರಿನಲ್ಲಿ ಪುನಃ ಹನುಮಾನ್‌ ಚಾಲೀಸಾವನ್ನು ಪಠಣ ಮಾಡುತ್ತಿದ್ದ ವೇಳೆ ಚುನಾವಣಾ ಅಧಿಕಾರಿಗಳು ಆಗಮಿಸಿ ತಡೆದಿದ್ದಾರೆ. ಇದು ವಾಗ್ವಾದಕ್ಕೆ ಕಾರಣವಾಗಿದೆ.

ವಿಜಯನಗರ ಕ್ಲಬ್ ರೋಡ್‌ನಲ್ಲಿನ ಹರಿಹರೇಶ್ವರ ದೇಗುಲ ಮುಂಭಾಗದಲ್ಲಿ ಬಜರಂಗದಳದಿಂದ ಹನುಮಾನ್‌ ಚಾಲೀಸಾ ಪಠಣೆ

ಬೃಹತ್‌ ಆಂಜನೇಯ ಸ್ವಾಮಿ ಮೂರ್ತಿ ಸ್ಥಾಪನೆ

ವಿಜಯನಗರ ಕ್ಲಬ್ ರೋಡ್‌ನಲ್ಲಿನ ಹರಿಹರೇಶ್ವರ ದೇಗುಲ ಮುಂಭಾಗದಲ್ಲಿ ಬೃಹತ್‌ ಆಂಜನೇಯ ಸ್ವಾಮಿ ಮೂರ್ತಿಯಿಟ್ಟು 70ಕ್ಕೂ ಹೆಚ್ಚು ಬಜರಂಗದಳ ಕಾರ್ಯಕರ್ತರು ಹನುಮಾನ್‌ ಚಾಲೀಸಾವನ್ನು ಪಠಿಸುತ್ತಿದ್ದರು. ಈ ವೇಳೆ ಆಗಮಿಸಿದ ಚುನಾವಣಾ ಅಧಿಕಾರಿಗಳು, ಚುನಾವಣೆ ಹಿನ್ನೆಲೆಯಲ್ಲಿ ಪಠಿಸದಂತೆ ಮನವಿ ಮಾಡಿದ್ದಾರೆ. ಆಗ ಇದಕ್ಕೆ ಸಿಟ್ಟಿಗೆದ್ದ ಬಜರಂಗದಳ ಕಾರ್ಯಕರ್ತರು ವಾಗ್ವಾದ ನಡೆಸಿದ್ದಾರೆ.

ಇದನ್ನೂ ಓದಿ: Karnataka Election 2023: ಮತದಾನ ಜಾಗೃತಿಗೆ ನಾನಾ ಪ್ರಯತ್ನ; ಗಮನ ಸೆಳೆಯುತ್ತಿರುವ ಚುನಾವಣಾ ಆಯೋಗ

ಹಿಂದುಪರ ಸಂಘಟನೆಗಳ ಆಕ್ರೋಶ

ಬೈಕ್ ರ‍್ಯಾಲಿ ಹೊರಟ ಬಜರಂಗದಳ ಕಾರ್ಯಕರ್ತರು

ಸೆಕ್ಷನ್ 144 ಇರುವುದರಿಂದ ಐದಕ್ಕಿಂತ ಹೆಚ್ಚು ಜನರು ಇರುವಂತೆ ಇಲ್ಲ ಎಂದ ಚುನಾವಣಾ ಅಧಿಕಾರಿಗಳು ಹೇಳಿದ್ದಾರೆ. ಚರ್ಚ್ ಮತ್ತು ಮಸೀದಿಗಳಲ್ಲಿ ಮಾತ್ರ ಅವಕಾಶ ನೀಡುತ್ತೀರಾ? ನಮಗೆ ಮಾತ್ರ ಯಾಕೆ ಹನುಮಾನ್ ಚಾಲೀಸಾ ಪಠಣೆ ಮಾಡಲು ಬಿಡುತ್ತಿಲ್ಲ ಎಂದು ಆಕ್ರೋಶವನ್ನು ವ್ಯಕ್ತಪಡಿಸಲಾಗಿದೆ. ಕೆಲ ಕಾಲ ಮಾತಿನ ಚಕಮಕಿ ನಡೆದಿದೆ. ಅಧಿಕಾರಿಗಳಿಗೆ ಕ್ಯಾರೆ ಎನ್ನದೆ ಬಜರಂಗದಳ ಕಾರ್ಯಕರ್ತರು ಬೈಕ್ ರ‍್ಯಾಲಿ ಹೊರಟಿದ್ದಾರೆ. ನಂತರ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದ್ದಾರೆ.

Exit mobile version