ಮಂಡ್ಯ: ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಹನುಮ (Keragodu Village) ಧ್ವಜ ತೆರವು ಹಿನ್ನೆಲೆಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಧ್ವಜಸ್ತಂಭದಲ್ಲಿ ಹನುಮಧ್ವಜ ಸ್ಥಾಪನೆ ಮಾಡಿಯೇ ತೀರಬೇಕು ಎಂದು ಬ್ಯಾರಿಕೇಡ್ ತಳ್ಳಿ ಮುನ್ನುಗ್ಗಿದ್ದರಿಂದ ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಸಚಿವ ಅಶ್ವತ್ಥನಾರಾಯಣ್, ಛಲವಾದಿ ನಾರಾಯಣಸ್ವಾಮಿ ಸೇರಿ ಬಿಜೆಪಿಯ ಹಲವು ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಂಡ್ಯ ತಾಲೂಕಿನ ಕೆರಗೋಡು ಗ್ರಾಮಸ್ಥರ ತೀವ್ರ ವಿರೋಧದ ನಡುವೆಯೂ ಹನುಮ ಧ್ವಜವನ್ನು ಇಳಿಸಿ, ರಾಷ್ಟ್ರಧ್ವಜವನ್ನು ಪೊಲೀಸರು ಹಾರಿಸಿದ್ದರಿಂದ ಹಿಂದು ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರಿಂದ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ.
ಇದನ್ನೂ ಓದಿ | Hanuman Flag: ಮಂಡ್ಯ ಹನುಮಧ್ವಜ ಕೇಸ್; ಹಸಿರು ಧ್ವಜ ತೋರಿಸ್ತೇವೆ ತೆಗೆಯುತ್ತೀರಾ? ಸುನಿಲ್ ಕುಮಾರ್ ಪ್ರಶ್ನೆ
ಲಾಠಿ ಚಾರ್ಜ್ ಬಳಿಕ ಕೆಲವು ಸಮಯ ವಿರಾಮ ಪಡೆದಿದ್ದ ಕೆರಗೋಡು ಹೋರಾಟ, ಆರ್. ಅಶೋಕ್ ಬಂದ ನಂತರ ಪ್ರತಿಭಟನಾಕಾರರು ಜೈ ಶ್ರೀರಾಮ್ ಘೋಷಣೆ ಕೂಗಿ ಪೊಲೀಸರು ವಿರುದ್ಧ ಆಕ್ರೋಶ ಹೊರಹಾಕಿದರು. ಧ್ವಜಸ್ತಂಭದ ಸುತ್ತ ಪೊಲೀಸರ ನಿಯೋಜನೆ ಮಾಡಿ, ಬ್ಯಾರಿಕೇಡ್ ಅಳವಡಿಸಲಾಗಿದೆ. ಸ್ಥಳದಲ್ಲಿ ಮಂಡ್ಯ ಎಸ್‌ಪಿ, ದಕ್ಷಿಣವಲಯ ಐಜಿಪಿ ಇದ್ದಾರೆ.
Hanuman Flag : ಕೆರಗೋಡಲ್ಲಿ ಹನುಮ ಧ್ವಜ ಕಟ್ಟಲು ಬಂದವರನ್ನು ಅಟ್ಟಾಡಿಸಿದ ಪೊಲೀಸರು!
ಮಂಡ್ಯ: ಕೆರಗೋಡು ಹನುಮ (Keregodu Village) ಧ್ವಜ ತೆರವು ವಿಚಾರವು ನೋಡನೋಡುತ್ತಿದ್ದಂತೆ ಕಿಡಿಹೊತ್ತಿಕೊಂಡಿದೆ. ಪರಿಸ್ಥಿತಿ ನಿಭಾಯಿಸಲು ಪೊಲೀಸರು ಹರಸಾಹಸ ಪಡುತ್ತಿದ್ದು, ಹನುಮ ಧ್ವಜವನ್ನು (Hanuman Flag) ಕಟ್ಟಲು ಬಂದವರನ್ನು ಅಟ್ಟಾಡಿಸಿ ಹೊಡೆದಿದ್ದಾರೆ. ಮಂಡ್ಯ ತಾಲೂಕಿನ ಕೆರಗೋಡು ಗ್ರಾಮಸ್ಥರ ತೀವ್ರ ವಿರೋಧದ ನಡುವೆಯೂ ಹನುಮ ಧ್ವಜವನ್ನು ಇಳಿಸಿ, ರಾಷ್ಟ್ರಧ್ವಜವನ್ನು ಪೊಲೀಸರು ಹಾರಿಸಿದ್ದಾರೆ.
ಈ ನಡುವೆ ಹನುಮ ಧ್ವಜ ಮರುಸ್ಥಾಪನೆಗೆ ಗ್ರಾಮಸ್ಥರು ಬಿಗಿಪಟ್ಟು ಹಿಡಿದಿದ್ದಾರೆ. ಪೊಲೀಸರ ವ್ಯೂಹ ಭೇದಿಸಿ ಧ್ವಜಸ್ತಂಭದತ್ತ ಮುನ್ನುಗ್ಗಲು ಗ್ರಾಮಸ್ಥರು ಯತ್ನಿಸಿದ್ದಾರೆ. ಪರಿಸ್ಥಿತಿ ಹತೋಟಿಗೆ ಬರದಿದ್ದಾಗ ಖಾಕಿ ಪಡೆ ಲಾಠಿ ಚಾರ್ಜ್ ಮಾಡಿದ್ದಾರೆ. ಘಟನೆಯಲ್ಲಿ ವ್ಯಕ್ತಿಯೊಬ್ಬನಿಗೆ ತಲೆಗೆ ಪೆಟ್ಟಾಗಿದ್ದು, ರಕ್ತಸ್ರಾವ ಉಂಟಾಗಿತ್ತು. ಮಹಿಳೆಯೊಬ್ಬರು ಏಣಿ ಹಾಕಿ ಧ್ವಜ ಕಟ್ಟಲು ಮುಂದಾದಾಗ ಅವರನ್ನು ಎಳೆದಾಡಿದರು.
ಹನುಮ ಧ್ವಜ ವಿವಾದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ 144 ಸೆಕ್ಷನ್ ಜಾರಿ ಮಾಡಿ ನಿಷೇಧಾಜ್ಞೆಯನ್ನು ಏರಿದ್ದಾರೆ. ಕೆರಗೋಡು ಗ್ರಾಮದಲ್ಲಿ ಪೊಲೀಸರು ಬಿಗಿ ಭದ್ರತೆ ವಹಿಸಿದ್ದಾರೆ. ಇತ್ತ ಜೈ ಶ್ರೀರಾಮ್ ಎಂದು ಘೋಷಣೆಯನ್ನು ಕೂಗಿ ಪೊಲೀಸರ ವಿರುದ್ಧ ಹಿಂದೂ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: Hanuman Flag: ಹನುಮ ಧ್ವಜ ವಿವಾದ; ಶಾಸಕ ಗಣಿಗ ರವಿಕುಮಾರ್ ನಿವಾಸದ ಮುಂದೆ ಶ್ರೀರಾಮಸೇನೆ ಪ್ರೊಟೆಸ್ಟ್